ETV Bharat / state

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ವಿಳಂಬ.. ಹೈಕೋರ್ಟ್ ಅಸಮಾಧಾನ

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ನೀಡಲು ವಿಳಂಬ ಮಾಡಿರುವ ನ್ಯಾಯಾಲಯಗಳಿಗೆ ಹೈಕೋರ್ಟ್​ ಖಡಕ್​ ಎಚ್ಚರಿಕೆ ನೀಡಿದೆ.

High Courtt
ಹೈಕೋರ್ಟ್
author img

By

Published : Mar 21, 2023, 8:54 PM IST

Updated : Mar 22, 2023, 12:26 PM IST

ಬೆಂಗಳೂರು : ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯಗಳು ವಿಳಂಬ ಮಾಡುತ್ತಿರುವ ಸಂಬಂಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿಗಳು ಸಕಾಲಕ್ಕೆ ವಿಲೇವಾರಿ ಸಹ ಕಡ್ಡಾಯವಾಗಿದೆ. ತಡ ಮಾಡಿದರೆ ಉಪ್ಪು ತನ್ನ ಸುವಾಸನೆ ಹಾಗೂ ರುಚಿಯನ್ನು ಕಳೆದುಕೊಳ್ಳುವಂತೆ ಅರ್ಜಿಗಳು ಮತ್ತು ಕಾಯ್ದೆಗಳು ಸಹ ತನ್ನ ಇರುವಿಕೆ ಕಳೆದುಕೊಳ್ಳುತ್ತದೆ ಎಂದು ಹೇಳಿದೆ.

ಪತಿಯಿಂದ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಮಾರು 52 ತಿಂಗಳು ಬಾಕಿ ಉಳಿಸಿಕೊಂಡಿದ್ದ ಕ್ರಮವನ್ನು ಪ್ರಶ್ನಿಸಿ, ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, 60 ದಿನಗಳೊಳಗೆ ತೀರ್ಮಾನಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ, ನ್ಯಾಯದಾನ ವಿಳಂಬವಾದರೆ ಅದು ಶಾಸನದ ಆತ್ಮವನ್ನು ಕಸಿದುಕೊಂಡಂತೆ. ಅಂತಹ ವಿಳಂಬವು ಖಂಡಿತವಾಗಿಯೂ ನ್ಯಾಯವನ್ನು ನಿರಾಕರಿಸುತ್ತದೆ ಎಂದೂ ನ್ಯಾಯಪೀಠ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ, 2005ರ ಅಡಿಯಲ್ಲಿ ಮಧ್ಯಂತರ ಪರಿಹಾರಕ್ಕಾಗಿ ನೊಂದ ಮಹಿಳೆಯರು ಸಲ್ಲಿಸಿರುವ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಸಂತ್ರಸ್ತ ಮಹಿಳೆಯಲ್ಲಿ ವ್ಯಾಜ್ಯ ಮುನ್ನಡೆಸಲು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯು ಕಾಯಿದೆಯಡಿಯಲ್ಲಿ ಜೀವನಾಂಶ, ಆಶ್ರಯ ಅಥವಾ ನಗದು ಪರಿಹಾರ ಕೋರಿ ಮ್ಯಾಜಿಸ್ಟ್ರೇಟ್‌ನ ಬಾಗಿಲು ತಟ್ಟಿದಾಗ, ಅಂತಹ ಕುಂದುಕೊರತೆಗಳನ್ನು ತಕ್ಷಣವೇ ಪರಿಹರಿಸಬೇಕು. ಈ ಕಾರಣಕ್ಕಾಗಿಯೇ ಕಾಯ್ದೆಯ ಸೆಕ್ಷನ್ 12 (5) ರ ಪ್ರಕಾರ ಅಂತಹ ಅರ್ಜಿಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಶಾಸನವು ಆದೇಶಿಸುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕಾಲಮಿತಿ ನಿಗದಿ : ನೊಂದ ಮಹಿಳೆ ಸಲ್ಲಿಸಿರುವ ಮಧ್ಯಂತರ ಪರಿಹಾರಕ್ಕಾಗಿ ಅರ್ಜಿಗಳನ್ನು ಪರಿಗಣಿಸಲು ಮತ್ತು ಪತಿಯಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ವಿಚಾರಣಾ ಕೋರ್ಟ್ ಗಳಿಗೆ ಹೈಕೋರ್ಟ್ ಕಾಲಮಿತಿಯನ್ನು ನಿಗದಿಪಡಿಸಿದೆ. ವಿಚಾರಣಾ ನ್ಯಾಯಾಲಯಗಳು ಪತಿಗೆ ಆಕ್ಷೇಪಣೆ ಮತ್ತು ಆಸ್ತಿ ಮತ್ತು ಹೊಣೆಗಾರಿಕೆಗಳ ಹೇಳಿಕೆಯನ್ನು ಸಲ್ಲಿಸಲು ಕೇವಲ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು. ಪತಿ ನಾಲ್ಕು ವಾರಗಳಲ್ಲಿ ತನ್ನ ಹೇಳಿಕೆಗಳನ್ನು ಸಲ್ಲಿಸಲು ವಿಫಲವಾದರೆ, ವಿಚಾರಣಾ ನ್ಯಾಯಾಲಯಗಳು ಕಾನೂನಿನ ಪ್ರಕಾರ ಎಕ್ಸ್-ಪಾರ್ಟೆ ಮಧ್ಯಂತರ ಪರಿಹಾರಗಳನ್ನು ನೀಡಬೇಕು.

ನಿರ್ದಿಷ್ಟ ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ, ವಿಚಾರಣಾ ನ್ಯಾಯಾಲಯಗಳು ಕಾಯ್ದೆಯ ಸೆಕ್ಷನ್ 28 (2) ಅಡಿಯಲ್ಲಿ ಅದರ ಅಧಿಕಾರದ ಪ್ರಕಾರ ಕಾರ್ಯ ವಿಧಾನವನ್ನು ರೂಪಿಸಬೇಕು ಮತ್ತು ನಿಯಂತ್ರಿಸಬೇಕು ಮತ್ತು ಯಾವುದೇ ವಿಳಂಬವನ್ನು ಲಿಖಿತವಾಗಿ ಕಾರಣ ಸಹಿತ ಸ್ಪಷ್ಟವಾಗಿ ದಾಖಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಕಾಲ ಮಿತಿಗೆ ಬದ್ಧವಾಗಿರುವುದು ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ನೊಂದ ವ್ಯಕ್ತಿಗೆ ಸೆಕ್ಷನ್ 12 ರ ಅಡಿಯಲ್ಲಿ ಪರಿಹಾರವು ಅತ್ಯಗತ್ಯವಾಗಿರುತ್ತದೆ. ಹೀಗಾಗಿ ಸೆಕ್ಷನ್ 12 ರ ಪ್ರಕಾರ ಅಂತಹ ಅಪ್ಲಿಕೇಷನ್‌ಗಳ ಸಕಾಲಿಕ ವಿಲೇವಾರಿ ಸಹ ಕಡ್ಡಾಯವಾಗಿದೆ. ತಡಮಾಡಿದರೆ ಉಪ್ಪು ತನ್ನ ಸುವಾಸನೆ ಹಾಗೂ ರುಚಿಯನ್ನು ಕಳೆದುಕೊಳ್ಳುವಂತೆ ಅರ್ಜಿಗಳೂ ಕಾಯ್ದೆಗಳು ಸಹ ತನ್ನ ಇರುವಿಕೆ ಕಳೆದುಕೊಳ್ಳುತ್ತದೆ.

ಐದು ವರ್ಷಗಳಿಂದ ಕಾಯುತ್ತಿರುವ ಮಹಿಳೆ : ಅರ್ಜಿದಾರ ಮಹಿಳೆಯು ಪತಿಯ ಮನೆಯಿಂದ ಹೊರಬಂದ ನಂತರ ಸುಮಾರು ಐದು ವರ್ಷ ಕಳೆದ ನಂತರವೂ ಕಾಯ್ದೆಯಡಿಯಲ್ಲಿ ಲಭ್ಯವಿರುವ ಜೀವನಾಂಶ ಮತ್ತು ಇತರ ಪ್ರಯೋಜನಗಳನ್ನು ನಿರಾಕರಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

ತಪ್ಪನ್ನು ಗಮನಕ್ಕೆ ತಂದಾಗ ಅದನ್ನು ಸರಿಪಡಿಸಲು ಅಸ್ತಿತ್ವದಲ್ಲಿ ನ್ಯಾಯಾಲಯಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಏಕೆಂದರೆ ನ್ಯಾಯಾಲಯದ ಕಾರ್ಯವು ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ, ತನ್ನ ಮುಂದಿರುವ ಪ್ರಕ್ರಿಯೆಗಳ ವಿಳಂಬ ಮಾಡಲು ಅವಕಾಶ ನೀಡಬಾರದು ಎಂದು ನ್ಯಾಯಾಲಯವು ಹೇಳಿದೆ. ಹಾಗು ನಾಲ್ಕು ವಾರಗಳಲ್ಲಿ ಅರ್ಜಿದಾರರ ಅರ್ಜಿಗಳನ್ನು ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಇದನ್ನೂ ಓದಿ :ಅರಣ್ಯ ಪ್ರದೇಶದಲ್ಲಿ ರೈಲಿನ ವೇಗ ತಗ್ಗಿಸುವ ಕುರಿತು ಆಕ್ಷೇಪಣೆ ಸಲ್ಲಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ

Last Updated : Mar 22, 2023, 12:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.