ETV Bharat / state

ಶೀಘ್ರದಲ್ಲೇ ಪದವಿ, ಎಂಜಿನಿಯರಿಂಗ್ ಪದವಿ ಪರೀಕ್ಷೆ ದಿನಾಂಕ ಪ್ರಕಟ: ಡಿಸಿಎಂ ಅಶ್ವತ್ಥ್ ನಾರಾಯಣ್ - ಡಿಸಿಎಂ ಅಶ್ವತ್ಥ್ ನಾರಾಯಣ್

ಸಿಎಂ ಜೊತೆ ಚರ್ಚೆ ಮಾಡಿ ಪದವಿ, ಎಂಜಿನಿಯರಿಂಗ್ ವಿಭಾಗದ ಪರೀಕ್ಷಾ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ್
ಡಿಸಿಎಂ ಅಶ್ವತ್ಥ್ ನಾರಾಯಣ್
author img

By

Published : Jun 30, 2020, 2:24 PM IST

ಬೆಂಗಳೂರು: ಶೀಘ್ರದಲ್ಲೇ ಪದವಿ, ಎಂಜಿನಿಯರಿಂಗ್ ವಿಭಾಗದ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದು ಈ ಸಂಬಂಧ ಅಧಿಕಾರಿಗಳ ಸಭೆ ಮಾಡುತ್ತಿದ್ದೇನೆ. ಆಫ್​ಲೈನ್ ಕ್ಲಾಸ್, ಪರೀಕ್ಷೆ ದಿನಾಂಕ ಇದೆಲ್ಲದರ ಬಗ್ಗೆ ಇವತ್ತಿನ ಸಭೆಯಲ್ಲಿ ತೀರ್ಮಾನಿಸುತ್ತೇವೆ. ಸಭೆ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಪರೀಕ್ಷಾ ದಿನಾಂಕ ಪ್ರಕಟಿಸುತ್ತೇವೆ ಎಂದರು.

ಆನ್‌ಲೈನ್​ನಲ್ಲಿ ಕಾಲೇಜು ಮಾನ್ಯತೆ: ಪದವಿ ಕಾಲೇಜುಗಳ ಮಾನ್ಯತೆ ಇನ್ಮುಂದೆ ಆನ್​ಲೈನ್​ನಲ್ಲಿ ಸಿಗಲಿದೆ. ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ಮಾನ್ಯತೆ ಇನ್ಮುಂದೆ ಆನ್​ಲೈನ್​ನಲ್ಲಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ನೂತನ ವೆಬ್​ಸೈಟ್​ಗೆ ಡಿಸಿಎಂ ಅಶ್ವತ್ಥ್​ ನಾರಾಯಣ ಚಾಲನೆ ನೀಡಿದ್ರು.

ಡಿಸಿಎಂ ಅಶ್ವತ್ಥ್ ನಾರಾಯಣ್

ಮಾನ್ಯತೆ, ಆಡಳಿತಾತ್ಮಕ ವಿಷಯ ಸೇರಿ ಎಲ್ಲಾ ಫೈಲ್​ಗಳನ್ನು ಆನ್​ಲೈನ್ ಮೂಲಕವೇ ಸಲ್ಲಿಸಬೇಕು. ಆನ್​ಲೈನ್ ಮೂಲಕವೇ ಎಲ್ಲಾ ತಪಾಸಣೆ ಮಾಡಿ ಅದನ್ನು ಅಪ್ರೂವ್ ಮಾಡಲಾಗುತ್ತದೆ. ಕಚೇರಿಗೆ ಅಲೆಯುವ ಕಾಟ ತಪ್ಪಿಸಲು ಆನ್​ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ವಿವಿಗಳಲ್ಲಿ ಆನ್​ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಮಾನ್ಯತೆ ಕೊಡೋದು ಅತ್ಯಂತ ಪ್ರಮುಖ ವಿಚಾರ. ಕೋರ್ಸ್ ಪ್ರಾರಂಭ, ಕಾಲೇಜು ಮಾನ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡೋದಕ್ಕೆ ಮಾನ್ಯತೆ ಕೊಡಬೇಕು. ಹಿಂದಿನ ಪದ್ಧತಿಯಲ್ಲಿ ನಿಯಮ ಪಾಲನೆ ಆಗಿದೆಯಾ? ಕಾನೂನು ಪಾಲನೆ ಆಗಿದೆಯಾ? ಅಂತ ನೋಡಬೇಕಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆನ್​ಲೈನ್ ಮೂಲಕ ಕೊಡುತ್ತಿದ್ದೇವೆ. ಮಾನ್ಯತೆಗೆ ಎಲ್ಲಾ ದಾಖಲಾತಿಗಳನ್ನ ಆನ್​ಲೈನ್​ನಲ್ಲಿ ಸಲ್ಲಿಸಬೇಕು ಎಂದು ಡಿಸಿಎಂ ತಿಳಿಸಿದರು.

ಪಾರದರ್ಶಕತೆ, ಉತ್ತಮ ಸಂವಹನ, ಕಾರ್ಯಗಳಿಗೆ ವೇಗ ನೀಡಲು ಆನ್​ಲೈನ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಇದಲ್ಲದೆ ಇ- ಆಫೀಸ್ ಜಾರಿಗೆ ತಂದಿದ್ದೇವೆ. ಜುಲೈ 15ರಿಂದ ವಿವಿಗಳು ಇ-ಆಫೀಸ್ ಮೂಲಕ ಉನ್ನತ ಶಿಕ್ಷಣ ಇಲಾಖೆ ಜೊತೆ ವ್ಯವಹಾರ ಮಾಡಬೇಕು. ಈಗಾಗಲೇ ಇದಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಮ್ಯಾನ್ಯುವಲ್​ನಲ್ಲಿ ಯಾವುದೇ ಕೆಲಸ ಮಾಡಲಾಗುವುದಿಲ್ಲ. ಎಲ್ಲವೂ ಆನ್​ಲೈನ್, ಇ- ಆಫೀಸ್ ಮೂಲಕ ನಡೆಯುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.