ETV Bharat / state

ಪಕ್ಷಾಂತರಿಗಳಿಗೆ ಉಪಚುನಾವಣೆ ಟಿಕೆಟ್​ ನೀಡಬಾರದು: ನಂದೀಶ್ ರೆಡ್ಡಿ ಆಗ್ರಹ​ - ಶಾಸಕ ನಂದೀಶ್ ರೆಡ್ಡಿ

ಮುಂಬರುವ ಕೆ.ಆರ್.ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಅಥವಾ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್​ ನೀಡಬೇಕು. ಪಕ್ಷಾಂತರಿಗಳಿಗೆ ಮಣೆ ಹಾಕಬಾರದು ಎಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಆಗ್ರಹಿಸಿದ್ದಾರೆ.

ಮಾಜಿ ಶಾಸಕ ನಂದೀಶ್​
author img

By

Published : Aug 6, 2019, 10:37 AM IST

ಬೆಂಗಳೂರು: ಮುಂಬರುವ ಕೆ.ಆರ್.ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಇಲ್ಲವೇ ನನಗೆ ಟಿಕೆಟ್​ ನೀಡಬೇಕು. ಪಕ್ಷಾಂತರಿಗಳಿಗೆ ಅಥವಾ ಅನರ್ಹಗೊಂಡವರಿಗೆ ಆದ್ಯತೆ ನೀಡಬಾರದು ಎಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಅನರ್ಹ ಶಾಸಕ ಬೈರತಿ ಬಸವರಾಜ್​ಗೆ ಪರೋಕ್ಷವಾಗಿ ಅವರು ಟಾಂಗ್ ನೀಡಿದ್ದಾರೆ.

ಮಾಜಿ ಶಾಸಕ ನಂದೀಶ್​

ಕೆ.ಆರ್.ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಪಕ್ಷದ ಒಳಗಿನವರಿಗೆ ಮೊದಲ ಆದ್ಯತೆ ನೀಡಬೇಕು. ಪಕ್ಷ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿದ್ದಾಗ ನಾವು ಬಿಟ್ಟುಕೊಟ್ಟಿಲ್ಲ. ಒಂದ್ವೇಳೆ ನನಗೆ ಟಿಕೆಟ್ ಕೊಡದೇ, ನಮ್ಮ ಪಕ್ಷದ ಬೇರೆಯವರಿಗೆ ಟಿಕೆಟ್ ಕೊಟ್ಟರೂ ನಾನು ಅವರಿಗಾಗಿ ಕಾರ್ಯಕರ್ತರ ಜೊತೆ ಸೇರಿ ಕೆಲಸ ಮಾಡುತ್ತೇನೆ ಎಂದರು.

ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅವರ ಪರ ಮತಕೇಳಲು ಯೋಚಿಸಬೇಕಾಗುತ್ತದೆ. ಬಿಜೆಪಿ ನಮ್ಮನ್ನು ಕೈ ಬಿಡಲ್ಲ, ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Intro:ಕೆ ಆರ್ ಪುರ.

ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಿದ್ರೆ ಸಹಿಸಲ್ಲ, ಕೆ.ಆರ್ ಪುರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ : ನಂದೀಶ್ ರೆಡ್ಡಿ

ಮುಂಬರುವ ಉಪಚುನಾವಣೆಯಲ್ಲಿ ಕೆ.ಆರ್.ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ ಎಂದು ತಿಳಿಸುವ ಮೂಲಕ ಮಾಜಿ ಶಾಸಕ ನಂದೀಶ್ ರೆಡ್ಡಿ ಅನರ್ಹ ಶಾಸಕ ಬೈರತಿ ಬಸವರಾಜ್ ಗೆ ಟಾಂಗ್ ನೀಡಿದ್ದಾರೆ.

ಕೆ.ಆರ್.ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್ ಪುರ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ, ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಒಂದು ವೇಳೆ ನನಗೆ ಟಿಕೆಟ್ ಕೊಡದೇ, ನಮ್ಮ ಪಕ್ಷದ ಬೇರೆಯವರಿಗೆ ಟಿಕೆಟ್ ಕೊಟ್ಟರೂ ನಾನು ಅವರಿಗಾಗಿ ಕಾರ್ಯಕರ್ತರ ಜೊತೆ ಸೇರಿ ಕೆಲಸ ಮಾಡುತ್ತೇನೆ. Body:ಆದರೆ, ನಮ್ಮ ಪಕ್ಷದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅವರ ಪರ ಕೆಲಸ ಮಾಡಲು ಕೊಂಚ ಯೋಚಿಸಬೇಕಾಗುತ್ತದೆ ಎಂದರು. ಕಳೆದ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಅಭ್ಯಾಥಿಯಾಗಿದ್ದ ಬಸವರಾಜ್ ಅವರ ವಿರುದ್ದ ಹೋರಾಟಗಳು,ಆರೋಪಗಳನ್ನ ಮಾಡಿಕೊಂಡು ಬಂದಿದ್ದು ಈಗ‌ ಅವರು ಬಿಜೆಪಿ ಪಕ್ಷಕ್ಕೆ ಬಂದರೆ ಅವರಿಗೆ ನಾವು ಹೇಗೆ ಸಹಾಯ ಮಾಡಬೇಕು ಎಂದರು.

Conclusion:ಬಿಜೆಪಿ ನಮ್ಮನ್ನು ಕೈ ಬಿಡಲ್ಲ ಎಂಬ ನಂಬಿಕೆ ಇದೆ. ಕಷ್ಟದ ಪರಿಸ್ಥಿತಿಯಲ್ಲೂ ನಾವು ಪಕ್ಷವನ್ನು ಸಂಘಟನೆ ಮಾಡಿದ್ದೇವೆ. ನನಗೆ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ನಮ್ಮ ನಾಯಕರು ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟು ನನಗೆ ಮೋಸ ಮಾಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.