ETV Bharat / state

ದೀಪಾವಳಿ ಸ್ಪೆಷಲ್​ : ಭಗತ್ ಕಿ ಕೋಠಿ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲು

ದೀಪಾವಳಿ ಮತ್ತು ಛತ್ ಹಬ್ಬದ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಜೋಧಪುರದ ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ ವಿಶೇಷ ರೈಲು ವ್ಯವಸ್ಥೆ ಇರಲಿದೆ.

deepavali-special-train-service-between-bhagat-ki-kothi-and-sir-m-visvesvaraya-terminal
ದೀಪಾವಳಿ ಸ್ಪೆಷಲ್​ ​: ಭಗತ್ ಕಿ ಕೋಠಿ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ
author img

By ETV Bharat Karnataka Team

Published : Nov 8, 2023, 9:44 PM IST

ಬೆಂಗಳೂರು: ದೀಪಾವಳಿ ಮತ್ತು ಛತ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಣೆಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಜೋಧಪುರದ ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್​ಗಳಿಗಾಗಿ ಎರಡು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

1. ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ಸ್ ವಿಶೇಷ ಎಕ್ಸ್‌ಪ್ರೆಸ್ (06217/06218) ಬಳ್ಳಾರಿ ಕ್ಯಾಂಟ್ ಮತ್ತು ಹುಬ್ಬಳ್ಳಿ ಮಾರ್ಗದ ಮೂಲಕ ಸಂಚಾರ:

ನವೆಂಬರ್ 9, 16 ಮತ್ತು 23ರಂದು (ಪ್ರತಿ ಗುರುವಾರ) ರೈಲು ಸಂಖ್ಯೆ 06217 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಸಂಜೆ 04:30 ಗಂಟೆಗೆ ಹೊರಟು ಮೂರನೇ ದಿನ(ಪ್ರತಿ ಶನಿವಾರ) ಬೆಳಿಗ್ಗೆ 11 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ಭಗತ್ ಕಿ ಕೋಠಿ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ (06218) ರೈಲು ನವೆಂಬರ್ 12, 19 ಮತ್ತು 26ರಂದು (ಪ್ರತಿ ಭಾನುವಾರ) ಬೆಳಗ್ಗೆ 06:30 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಟು ಮೂರನೇ ದಿನ (ಪ್ರತಿ ಮಂಗಳವಾರ) ಬೆಳಿಗ್ಗೆ 02:30 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲುಗಳು ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಅಹಮದಾಬಾದ್, ಮಹೇಸನಾ, ಪಾಲನಪುರ, ಅಬು ರೋಡ್, ಜವಾಯಿ ಬಂದ್, ಫಲ್ನಾ, ಮಾರ್ವಾರ್, ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ. ಈ ವಿಶೇಷ ರೈಲುಗಳಲ್ಲಿ ಒಂದು ಎಸಿ ಟು ಟೈಯರ್ ಬೋಗಿ, 13 ಎಸಿ ತ್ರಿ ಟೈಯರ್ ಬೋಗಿಗಳು ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳ ಸಂಯೋಜನೆ ಹೊಂದಿರಲಿದೆ.

2. ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ಸ್ ವಿಶೇಷ ಎಕ್ಸ್‌ಪ್ರೆಸ್ (06219/06220) ಅರಸೀಕೆರೆ ಮತ್ತು ಹುಬ್ಬಳ್ಳಿ ಮಾರ್ಗದ ಮೂಲಕ ಸಂಚಾರ:

ನವೆಂಬರ್ 11, 18 ಮತ್ತು 25 (ಪ್ರತಿ ಶನಿವಾರ) ರಂದು ರೈಲು ಸಂಖ್ಯೆ 06219 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಸಂಜೆ 04:30 ಗಂಟೆಗೆ ಹೊರಟು ಮೂರನೇ ದಿನ (ಪ್ರತಿ ಸೋಮವಾರ) ಬೆಳಿಗ್ಗೆ 11:50 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ಭಗತ್ ಕಿ ಕೋಠಿ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್​ಪ್ರೆಸ್ (06220) ರೈಲು ನವೆಂಬರ್ 13, 20 ಮತ್ತು 27ರಂದು (ಪ್ರತಿ ಸೋಮವಾರ) ರಾತ್ರಿ 11 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಟು ಮೂರನೇ ದಿನ (ಪ್ರತಿ ಬುಧವಾರ) ಮಧ್ಯಾಹ್ನ 02:45 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲುಗಳು ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ರಾಣಿಬೆನ್ನೂರು, ಎಸ್.ಎಂ.ಎಂ ಹಾವೇರಿ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಅಹಮದಾಬಾದ್, ಮಹೇಸನಾ, ಪಾಲನಪುರ, ಅಬು ರೋಡ್, ಜವಾಯಿ ಬಂದ್, ಫಲ್ನಾ, ಮಾರ್ವಾರ್, ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ. ಈ ವಿಶೇಷ ರೈಲುಗಳಲ್ಲಿ ನಾಲ್ಕು ಎಸಿ ಟು ಟೈಯರ್ ಬೋಗಿಗಳು, 14 ಎಸಿ ತ್ರಿ ಟೈಯರ್ ಎಕಾನಮಿ ಬೋಗಿಗಳು, ಮತ್ತು ಎರಡು ಜನರೇಟರ್ ಕಾರ್ ಕಮ್ ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ತಮ್ಮ ಹತ್ತಿರದ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸಿ ಅಥವಾ ಅಧಿಕೃತ ಜಾಲತಾಣ https://enquiry.indianrail.gov.in ಭೇಟಿ ನೀಡಿ ಅಥವಾ 139 ಸಹಾಯವಾಣಿಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಬ್ಲಾಂಕೆಟ್ ವ್ಯವಸ್ಥೆ ಪ್ರಯಾಣಿಕರೇ ಮಾಡಿಕೊಳ್ಳಬೇಕು: ಈ ಮೇಲಿನ ವಿಶೇಷ ರೈಲುಗಳಲ್ಲಿ ಬೆಡ್ ಶೀಟು ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ. ಈ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಆರಾಮ ಮತ್ತು ಅನುಕೂಲಕ್ಕಾಗಿ ತಮ್ಮದೇ ಆದ ಲಿನೆನ್ ಮತ್ತು ಬೆಡ್‌ರೋಲ್ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನೈರುತ್ಯ ರೈಲ್ವೆ ವಿನಂತಿಸಿದೆ.

ಇದನ್ನೂ ಓದಿ: ದೀಪಾವಳಿ: ನಾಗರಕೋಯಿಲ್ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.