ಬೆಂಗಳೂರು: ರಾಜ್ಯದಲ್ಲಿ ಇಂದು ಮಹಾಮಾರಿ ಕೋವಿಡ್ ವೈರಸ್ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ನಿತ್ಯ ನೂರಾರ ಗಡಿ ದಾಟುತ್ತಿದ್ದ ಮೃತರ ಸಂಖ್ಯೆ ಇಂದು ಇಳಿಕೆಯಾಗಿರುವುದು ಸಮಾಧಾನ ತಂದಿದೆ.
ಇವತ್ತು 93 ಜನ ಕೋವಿಡ್ಗೆ ಬಲಿಯಾಗಿದ್ದು, ಈವರೆಗೆ ಒಟ್ಟು 4522 ಮೃತಪಟ್ಟಿದ್ದಾರೆ. 7571 ಮಂದಿಗೆ ಸೋಂಕು ದೃಢಪಟ್ಟಿದ್ದು 2,64,546 ಖಚಿತ ಪ್ರಕರಣಗಳಾಗಿವೆ. 6561 ಮಂದಿ ಗುಣಮುಖರಾಗಿದ್ದು 1,76,942 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
83,066 ಸಕ್ರಿಯ ಪ್ರಕರಣಗಳಿದ್ದು 698 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ 83,066 ಸಕ್ರಿಯ ಸೋಂಕಿತರ ಸಂಪರ್ಕಿತರ ಸಂಖ್ಯೆ 4 ಲಕ್ಷ ದಾಟಿದ್ದು, 4,00,180 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಪ್ರಾಥಮಿಕವಾಗಿ 3,63,169 ದ್ವಿತೀಯ 2,92,640 ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಇಂದು 57,623 ಜನರಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, 7571 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 23,14,485 ಜನರು ಈವರೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.