ETV Bharat / state

ಬೊಕ್ಕಸಕ್ಕೆ ಭಾರವಾಗಿರುವ ಇಲಾಖೆಗಳಲ್ಲಿರುವ ನಿಗಮಗಳ ವಿಲೀನಕ್ಕೆ ತೀರ್ಮಾನ: ಸಚಿವ ಆರ್​. ಅಶೋಕ್

ಸರ್ಕಾರದ ಬಹುತೇಕ ಇಲಾಖೆಗಳಲ್ಲಿರುವ ನಿಗಮಗಳನ್ನು ವಿಲೀನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಆರ್​.ಅಶೋಕ್ ತಿಳಿಸಿದರು.

minister r ashok
ಸಚಿವ ಆರ್​ ಅಶೋಕ್
author img

By

Published : Jun 22, 2022, 6:45 PM IST

ಬೆಂಗಳೂರು: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ತನ್ನ ಬೊಕ್ಕಸಕ್ಕೆ ಭಾರವಾಗಿರುವ ನಿಗಮಗಳನ್ನು ವಿಲೀನಗೊಳಿಸಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಈ ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಆರ್. ಅಶೋಕ್ ಅವರು ಅರಣ್ಯ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿರುವ ನಿಗಮಗಳನ್ನು ವಿಲೀನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಒಂದೊಂದು ಇಲಾಖೆಯಲ್ಲಿ ನಾಲ್ಕೈದು ನಿಗಮಗಳಿದ್ದು, ಬಹುತೇಕ ನಿಗಮಗಳಿಗೆ ಮಾಡಲು ಕೆಲಸವೇ ಇಲ್ಲ. ಇಂತಹ ನಿಗಮಗಳಿಗೆ ಹಲವು ಸಿಬ್ಬಂದಿ, ಅಧಿಕಾರಿಗಳಿದ್ದು, ವಿನಾಕಾರಣ ಕಾರುಗಳು ಬಳಕೆಯಾಗುತ್ತಿವೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಹಣ್ಣಿನ ರಸ ತೆಗೆಯಲು, ರಬ್ಬರ್ ರಸ ತೆಗೆಯಲು ಸಹ ನಿಗಮಗಳಿವೆ. ಇಂತಹ ನಿಗಮಗಳಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಭಾರ. ಈ ಭಾರವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ನಿಗಮಗಳಿದ್ದರೂ, ಅಲ್ಲಿ ಬಹಳ ಕೆಲಸಗಳಿವೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಂತಹ ಪ್ರಮುಖ ಇಲಾಖೆಗಳಲ್ಲಿರುವ ನಿಗಮಗಳನ್ನು ಮುಟ್ಟಲು ಹೋಗುವುದಿಲ್ಲ. ಆದರೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಒಂದು ನಿಗಮದ ಜಾಗದಲ್ಲಿ ಹಲವು ನಿಗಮಗಳಿದ್ದು, ಇವನ್ನು ವಿಲೀನಗೊಳಿಸಿ ಆಯಾ ಇಲಾಖೆಯಲ್ಲಿ ಒಂದೇ ನಿಗಮವಿರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಜೆಡಿಎಸ್​ನಿಂದ ಶಾಸಕ ಶ್ರೀನಿವಾಸ್ ಉಚ್ಚಾಟನೆ

ಯೋಜನಾ ಪ್ರಾಧಿಕಾರಗಳ ಸಂಖ್ಯೆಯೂ ಮಿತಿಮೀರಿದ್ದು, ಒಂದು ಪ್ರಾಧಿಕಾರ ಮಾಡುವ ಕೆಲಸವನ್ನು ನಾಲ್ಕು ಪ್ರಾಧಿಕಾರಗಳು ಮಾಡುತ್ತಿವೆ. ಹೀಗಾಗಿ ಜಿಲ್ಲೆಗೊಂದೇ ಯೋಜನಾ ಪ್ರಾಧಿಕಾರ ಕೆಲಸ ಮಾಡುವಂತೆ ನೋಡಿಕೊಳ್ಳುವುದಾಗಿ ಹೇಳಿದ ಸಚಿವರು, ಈ ಹಿಂದೆ ರಾಜಕೀಯ ಒತ್ತಡಗಳ ಕಾರಣಕ್ಕಾಗಿ ಹೆಚ್ಚುವರಿ ನಿಗಮಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಾ ಬಂದಿದ್ದು, ಈಗ ಅಂತಹ ನಿಗಮಗಳನ್ನು ಕಟ್​ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.