ETV Bharat / state

ತಹಶೀಲ್ದಾರ್ ಕಚೇರಿ ದಾಖಲೆಗಳ ಡಿಜಿಟಲೀಕರಣಕ್ಕೆ ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ - ಬಗರ್ ಹುಕುಂ ಸಮಿತಿ

Digitization of Tahsildar Office records: ತಹಶೀಲ್ದಾರ್ ಕಚೇರಿಗಳ ರೆಕಾರ್ಡ್ ರೂಮ್​ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Krishna Byre Gowda
ಕೃಷ್ಣ ಬೈರೇಗೌಡ
author img

By ETV Bharat Karnataka Team

Published : Nov 29, 2023, 9:06 AM IST

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ತಹಶೀಲ್ದಾರ್ ಕಚೇರಿಯಲ್ಲಿನ ರೆಕಾರ್ಡ್ ರೂಮ್​ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ. ಕೆಲವು ಹಳೆ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನೂ ಕೆಲ ದಾಖಲೆಗಳು ಕಳೆದು ಹೋಗುತ್ತಿವೆ. ಕೆಲವು ಖಾಸಗಿ ವ್ಯಕ್ತಿಗಳು ರೆಕಾರ್ಡ್ ರೂಮ್​ಗೆ ಹೋಗಿ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೆಕಾರ್ಡ್ ರೂಮ್‌ನಲ್ಲಿನ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲು ನಿರ್ಧರಿಸಿದ್ದೇವೆ. ಇಲ್ಲಿರುವ ಹಳೆ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ನಿತ್ಯ ಮಾಹಿತಿ ಮತ್ತು ದಾಖಲೆ ಪ್ರತಿ ಪಡೆಯಲು ಜನರು ಹರಸಾಹಸಪಡುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ರೆಕಾರ್ಡ್ ರೂಮ್​ನ ಹಳೆ ದಾಖಲೆಗಳ ಸ್ಕ್ಯಾನಿಂಗ್ ಮಾಡಲಿದ್ದೇವೆ ಎಂದರು.

ಪ್ರಾಯೋಗಿಕವಾಗಿ ಕೆಲ ತಾಲೂಕು ಕಚೇರಿಗಳಲ್ಲಿನ ರೆಕಾರ್ಡ್ ರೂಮ್​ನ ದಾಖಲೆಗಳ ಡಿಜಿಟಲೀಕರಣ ಮಾಡುವ ಕೆಲಸ ಮಾಡಿದ್ದೇವೆ. ಜನವರಿ ಬಳಿಕ ಎಲ್ಲಾ ರೆಕಾರ್ಡ್​ಗಳನ್ನು ಮಿಷನ್ ಮೋಡ್​ನಲ್ಲಿ ಸ್ಕ್ಯಾನಿಂಗ್ ಮಾಡಲಿದ್ದೇವೆ. ಈ ಮೂಲಕ ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2.40 ಕೋಟಿ ಪಹಣಿ ಇದೆ. 3.80 ಕೋಟಿ ಖಾತೆದಾರರು ಇದ್ದಾರೆ. ಒಂದು ತಾಲೂಕಿನ ರೆಕಾರ್ಡ್ ಸ್ಕ್ಯಾನಿಂಗ್ ಮಾಡಲು ಸುಮಾರು 50 ಲಕ್ಷ ರೂಪಾಯಿ ಬೇಕು. ಕೇಂದ್ರದಿಂದಲೂ ಸಹಕಾರ ಕೇಳುತ್ತೇವೆ ಎಂದು ತಿಳಿಸಿದರು.

ಆರ್​ಟಿಸಿ-ಆಧಾರ್ ಲಿಂಕ್‌ಗೆ ಚಿಂತನೆ: ಆರ್​ಟಿಸಿಗೆ ಆಧಾರ್ ಲಿಂಕ್ ಮಾಡಲು ಚಿಂತನೆ ನಡೆದಿದೆ. ಈ ಸಂಬಂಧ ಇಲಾಖೆ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದೆ. ಆರ್​ಟಿಸಿ ನಿಜವಾದ ಜಮೀನು ಮಾಲೀಕನಿಗೆ ಆಧಾರ್ ಜೋಡಣೆ ದೃಢೀಕರಣ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ ಎಂದು ಮಾಹಿತಿ ನೀಡಿದರು.

ಕೇಂದ್ರದ ಬಳಿ ಇರುವ ದತ್ತಾಂಶದ ಮಾಹಿತಿ ಪ್ರಕಾರ, ರಾಜ್ಯದ 44% ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಪರಿಹಾರಕ್ಕೆ ಒಳಪಡುತ್ತಾರೆ. ಆದರೆ, ಕೇಂದ್ರದ ದತ್ತಾಂಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರವು ನೀವು ಆರ್​ಟಿಸಿಯನ್ನು ಆಧಾರ್ ಕಾರ್ಡ್​ಗೆ ಜೋಡಣೆ ಮಾಡಿದರೆ ನೀವು ನೀಡುವ ಸಣ್ಣ ಮತ್ತು ಅತಿ ಸಣ್ಣ ರೈತರ ದತ್ತಾಂಶವನ್ನು ಪರಿಹಾರಕ್ಕಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ ಎಂದು ವಿವರಿಸಿದರು.

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲೂ ಇ-ಆಫೀಸ್ ಅಳವಡಿಕೆಗೆ ಸೂಚನೆ ನೀಡಲಾಗಿದೆ.‌ ಆಗಸ್ಟ್‌ನಿಂದ ಇ-ಆಫೀಸ್ ಪ್ರಕ್ರಿಯೆ ಶುರು ಮಾಡಲಾಗಿದೆ. ಡಿಸೆಂಬರ್ ತಿಂಗಳೊಳಗೆ ಕಡ್ಡಾಯವಾಗಿ ಎಲ್ಲರೂ ಇ-ಆಫೀಸ್ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಎಲ್ಲಾ ತಾಲೂಕು ಕಚೇರಿಗಳನ್ನು ಅಟೊಮೇಷನ್ (ಯಂತ್ರೀಕರಣ) ಮಾಡಲು ನಿರ್ಧರಿಸಲಾಗಿದೆ ಎಂದರು.

ಬಗರ್ ಹುಕುಂ ಸಮಿತಿ ರಚನೆ: ಬಗರ್ ಹುಕುಂ ಸಾಗುವಳಿದಾರರಿಗೆ ಚೀಟಿ ನೀಡುವ ಸಕ್ರಮೀಕರಣಕ್ಕಾಗಿ ಇಲ್ಲಿಯತನಕ 9,29,512 ಅರ್ಜಿಗಳು ಬಂದಿವೆ. ಇದರಲ್ಲಿ ಕೆಲವು ಅರ್ಹರು, ಅನರ್ಹರು ಇದ್ದಾರೆ‌. ಸಾಕಷ್ಟು ಅನರ್ಹರು ಈ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಡವರಿಗಾಗಿ, ಭೂರಹಿತರಾಗಿದ್ದ ಕಾನೂನಿನಡಿ ಸಾಕಷ್ಟು ಅನರ್ಹರು ಅರ್ಜಿ ಹಾಕಿದ್ದಾರೆ‌. ಇದಕ್ಕಾಗಿ ಅರ್ಹತೆ ಇರುವವರನ್ನು ಗುರುತಿಸಿ ಸಾಗುವಳಿದಾರರಿಗೆ ಚೀಟಿ ನೀಡಲು ಹಲವು ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.

ಇಂದಿಗೂ ಲಕ್ಷಾಂತರ ರೂ. ಜಮೀನು ಪೋಡಿ ಆಗದೆ ಹಾಗೆಯೇ ಉಳಿದಿವೆ. ಇನ್ನೊಂದೆಡೆ ಹಿಂದೆ ಸಾಗುವಳಿ ಚೀಟಿ ನೀಡಿದಾಗಲೂ ಸಮಸ್ಯೆಗಳಾಗಿದೆ. ಇದಕ್ಕಾಗಿ ಸರ್ಕಾರ ಹಲವು ರೂಪುರೇಷಗಳನ್ನು ರೂಪಿಸಿದೆ. ಅರ್ಜಿದಾರರ ಆಧಾರ್ ಕಾರ್ಡ್ ಪರಿಶೀಲಿಸಬೇಕು, ಅರ್ಜಿದಾರರಿಗೆ 18 ವರ್ಷ ತುಂಬಿರಬೇಕು, ಜಮೀನು ಅವರದ್ದೇನಾ ಎನ್ನುವುದಕ್ಕೆ ಸ್ಯಾಟಲೈಟ್ ಇಮೇಜ್ ಮೂಲಕ ಚೆಕ್ ಮಾಡ್ತೀವಿ, ಸಾಗುವಳಿ ಮಾಡುತ್ತಿದ್ದಾರಾ ಅನ್ನೋದರ ಬಗ್ಗೆ ತಹಶೀಲ್ದಾರ್ ಪರಿಶೀಲಿಸಿ ವರದಿ ಕೊಡಬೇಕು. ಜಮೀನು ಲಭ್ಯತೆ ಬಗ್ಗೆ ಸರ್ವೆಯನ್ನು ಸರ್ಕಾರವೇ ಮಾಡಿಸುತ್ತದೆ. ಸಾಗುವಳಿ ಚೀಟಿ ಸಹ ಗಣಕೀಕೃತ (ಡಿಜಿಟಲ್) ಮಾಡಲಿದ್ದೇವೆ. ಇದನ್ನು ನಕಲು ಮಾಡಲು ಆಗೋದಿಲ್ಲ‌. ಬಳಿಕ, ಸರ್ಕಾರವೇ ರಿಜಿಸ್ಟರ್ ಮಾಡಿಕೊಡುತ್ತದೆ. ಪೋಡಿಸಮೇತ ನಾವೇ ಮಾಡಿಕೊಡ್ತೀವಿ ಎಂದು ಹೇಳಿದರು.

ಬಗರ್ ಹುಕುಂ ಕಮಿಟಿಯವರೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಬಗರ್ ಹುಕುಂ ಸಮಿತಿ ಸಭೆಯ ನಡವಳಿಯನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ. ಎಷ್ಟೋ ಕಡೆ ಸಭೆಯ ನಡವಳಿ ಕಣ್ಮರೆಯಾಗಿವೆ. ಅದಕ್ಕಾಗಿ ಡಿಜಿಟಲೀಕರಣ ಮಾಡುತ್ತಿದ್ದೇವೆ. ಸಭೆಗೆ ಹಾಜರಾಗುವವರಿಗೆ ಬಯೋಮೆಟ್ರಿಕ್ ಅಳವಡಿಸುತ್ತಿದ್ದೇವೆ. ಎಲ್ಲಿಂದ ಪ್ರಸ್ತಾವನೆಗಳು ಬಂದಿವೆಯೋ ಅಲ್ಲಿ ಬಗರ್‌ಹುಕುಂ ಸಮಿತಿ ರಚನೆ ಮಾಡಲಾಗುತ್ತದೆ. ಈಗ 50 ಪ್ರಸ್ತಾವನೆಗಳು ಬಂದಿವೆ ಎಂದರು.

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಒತ್ತು: ಕಂದಾಯ ನ್ಯಾಯಾಲಯದಲ್ಲಿ ನಿಗದಿತ ಅವಧಿಯಲ್ಲಿ ಪ್ರಕರಣಗಳು ಇತ್ಯರ್ಥವಾಗಬೇಕು. ಆದರೆ, ತಹಸೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮಟ್ಟದಲ್ಲಿ ಹಲವು ವರ್ಷಗಳಿಂದ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳ ಇತರ್ಥ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ರಚನೆ ವೇಳೆ ತಹಶೀಲ್ದಾರ್‌ ಮಟ್ಟದಲ್ಲಿ 2,215 ಪ್ರಕರಣಗಳು ಒಂದು ವರ್ಷದಿಂದಲೂ ಬಾಕಿ ಇದ್ದವು. ಉಪವಿಭಾಗಾಧಿಕಾರಿ ಮಟ್ಟದಲ್ಲಿ 59,339 ಮತ್ತು ಜಿಲ್ಲಾಧಿಕಾರಿ ಮಟ್ಟದಲ್ಲಿ 9,900 ಪ್ರಕರಣಗಳು ಬಾಕಿ ಇದ್ದವು. ಕಳೆದ ನಾಲ್ಕು ತಿಂಗಳಲ್ಲಿ ವಿಲೇವಾರಿ ಕೆಲಸ ಮಾಡಿ ಈಗ ತಹಶೀಲ್ದಾರ್‌ ಮಟ್ಟದಲ್ಲಿ 680 ಪ್ರಕರಣಗಳಿಗೆ ಇಳಿಕೆಯಾಗಿದೆ. ಡಿಸೆಂಬರ್‌ ವೇಳೆಗೆ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಉಪವಿಭಾಗಾಧಿಕಾರಿ ಮಟ್ಟದಲ್ಲಿ 59,339 ಪ್ರಕರಣಗಳ ಪೈಕಿ 27,960 ಪ್ರಕರಣಗಳು ಮುಕ್ತಾಯಗೊಂಡಿದ್ದು, 31,371 ಪ್ರಕರಣಗಳು ಬಾಕಿ ಇವೆ. ಫೆಬ್ರವರಿ ವೇಳೆಗೆ ಅವುಗಳನ್ನು ಪೂರ್ಣಗೊಳಿಸಲಾಗುವುದು. ಜಿಲ್ಲಾಧಿಕಾರಿ ಮಟ್ಟದಲ್ಲಿಯೂ ಬಹುತೇಕ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಸಚಿವರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.