ಬೆಂಗಳೂರು : ಚಳಿಗಾಲದ ಅಧಿವೇಶನವನ್ನು ಇದೇ ಗುರುವಾರಕ್ಕೆ ಮೊಟಕುಗೊಳಿಸಲು ಕಲಾಪ ಸಲಹಾ ಸಮಿತಿ ತೀರ್ಮಾನಿಸಿದೆ.
ಸ್ಪೀಕರ್ ನೇತೃತ್ವದಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ, ಅಧಿವೇಶನದ ಅವಧಿಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಡಿ. 15ರ ವರೆಗೆ ಕಲಾಪ ನಡೆಸಲು ಉದ್ದೇಶಿಸಲಾಗಿತ್ತು. ಪಕ್ಷಗಳ ನಾಯಕರು ಚುನಾವಣೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡಲು ಸದನ ಮೊಟಕುಗೊಳಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ :ಜೂಜು ಮತ್ತು ಡ್ರಗ್ಸ್ ಮಟ್ಟ ಹಾಕಲು ಮತ್ತಷ್ಟು ಬಿಗಿ ಕ್ರಮ : ಗೃಹ ಸಚಿವ ಬೊಮ್ಮಾಯಿ
ಈ ಬಗ್ಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಗುರುವಾರ ಅಧಿವೇಶನ ಅಂತ್ಯಗೊಳಿಸಲು ತೀರ್ಮಾನ ಮಾಡಿದ್ದೇವೆ. 'ಒಂದು ದೇಶ ಒಂದು ಚುನಾವಣೆ' ಕುರಿತು ಮುಂದಿನ ಸದನದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದರು.
ಕಲಾಪದ ಅವಧಿ ಕಡಿತಗೊಳಿಸಿದ ಹಿನ್ನೆಲೆ ಪ್ರಸಕ್ತ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಅನುಮಾನವಾಗಿದೆ. ಈಗಾಗಲೇ ಸಂಪುಟಸ ಸಭೆಯಲ್ಲಿ ನಿರ್ಧಾರವಾಗಿದೆ. ಇನ್ನೊಮ್ಮೆ ಪರಿಶೀಲನಾ ಸಮಿತಿ ಮುಂದೆ ಚರ್ಚೆ ನಡೆಸಿ, ಬಳಿಕ ನೇರವಾಗಿ ಸದನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆ ಇದೆ.