ETV Bharat / state

ಮುಂದಿನ ಒಂದು ವರ್ಷದಲ್ಲಿ 30 ಸಾವಿರ ಮಹಿಳಾ ಉದ್ಯಮಿಗಳನ್ನು ಮುನ್ನಲೆಗೆ ತರಲು ತೀರ್ಮಾನ

ಡಿಜಿಟಲೀಕರಣದ ಈ ಯುಗದಲ್ಲಿ ಮಹಿಳೆಯರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮನೆಯಿಂದಲೇ ಸೇವೆ ಸಲ್ಲಿಸಬಹುದು. ಕೋವಿಡ್ ಸಾಂಕ್ರಾಮಿಕವು ಅನೇಕ ತೊಂದರೆಗಳನ್ನು ಸೃಷ್ಟಿಸಿದರೂ ಕೆಲವು ಸುಧಾರಣೆಗಳಿಗೂ ದಾರಿ ಮಾಡಿಕೊಟ್ಟಿತು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

author img

By

Published : Mar 8, 2022, 6:27 PM IST

ಬೆಂಗಳೂರು: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮುಂದಿನ ಒಂದು ವರ್ಷದಲ್ಲಿ ತಲಾ 1 ಸಾವಿರ ಮಹಿಳಾ ಉದ್ಯಮಿಗಳನ್ನು ಬೆಳೆಸಲು ಜೀವನೋಪಾಯ ಸಂವರ್ಧನೆ ಇಲಾಖೆಯು ತೀರ್ಮಾನಿಸಿದೆ. ಈ ಮೂಲಕ 30 ಸಾವಿರ ಸಾಧಕಿಯರನ್ನು ಗುರುತಿಸಿ, ಮುನ್ನಲೆಗೆ ತರಲಾಗುವುದು ಎಂದು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಗಳೂರು ಉತ್ತರ ಜಿಲ್ಲಾ ಘಟಕವು ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡಲು ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಸ್ತೀ ಉದ್ಯಮಿಗಳಿಗೆ ಯಾವುದೇ ಖಾತ್ರಿ ಇಲ್ಲದೆ 1 ಕೋಟಿ ರೂ ವರೆಗೂ ಬ್ಯಾಂಕ್ ಸಾಲ ಕೊಡಲಾಗುತ್ತಿದೆ. ಜೊತೆಗೆ, ಮಹಿಳೆಯರೇ ತಯಾರಿಸುತ್ತಿರುವ ಉತ್ಪನ್ನಗಳಿಗೆ ಸರಕಾರವೇ ಇ-ಕಾಮರ್ಸ್ ವೇದಿಕೆಯನ್ನು ಒದಗಿಸಲಿದೆ. ಅಲ್ಲದೆ, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ತರಹದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.

ಮಹಿಳೆಯರ ಸಬಲೀಕರಣದಲ್ಲಿ ತಂತ್ರಜ್ಞಾನದ ಪಾತ್ರ ನಿರ್ಣಾಯಕ: ಡಿಜಿಟಲೀಕರಣದ ಈ ಯುಗದಲ್ಲಿ ಮಹಿಳೆಯರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮನೆಯಿಂದಲೇ ಸೇವೆ ಸಲ್ಲಿಸಬಹುದು. ಕೋವಿಡ್ ಸಾಂಕ್ರಾಮಿಕವು ಅನೇಕ ತೊಂದರೆಗಳನ್ನು ಸೃಷ್ಟಿಸಿದರೂ ಕೆಲವು ಸುಧಾರಣೆಗಳಿಗೂ ದಾರಿ ಮಾಡಿಕೊಟ್ಟಿತು. ಮಹಿಳೆಯರ ಸಬಲೀಕರಣದಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರ ನಿರ್ಣಾಯಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮನೆಮನೆಗೆ ಗಂಗೆ ಯೋಜನೆಯಡಿ ನಿರಂತರ ಕುಡಿಯುವ ನೀರು: ಸಮಾಜದ ಆಧಾರಸ್ತಂಭವಾಗಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮನೆಮನೆಗೂ ವಾರದ 7 ದಿನಗಳಲ್ಲಿಯೂ 24 ಗಂಟೆ ಕುಡಿಯುವ ನೀರನ್ನು 'ಜಲಜೀವನ್ ಮಿಷನ್' ಮತ್ತು `ಮನೆಮನೆಗೆ ಗಂಗೆ’ ಯೋಜನೆಗಳಡಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ನುಡಿದರು.

ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಸಮರ್ಥವಾಗಿ ಕುಟುಂಬದ ನಿರ್ವಹಣೆ: ಮಹಿಳೆಯರು ತಾಯಿ, ಪತ್ನಿ, ಮಗಳು, ಅಜ್ಜಿ ಇತ್ಯಾದಿ ಪಾತ್ರಗಳನ್ನು ಸಮರ್ಥವಾಗಿ ಕುಟುಂಬದಲ್ಲಿ ನಿರ್ವಹಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಸಮಾಜದ ಆರ್ಥಿಕ ಬೆಳವಣಿಗೆಯಲ್ಲೂ ಇವರ ಪಾತ್ರ ಶೇಕಡ 50 ರಷ್ಟಾಗಬೇಕು. ಇದಕ್ಕಾಗಿ ಸಾಕಷ್ಟು ಶಾಸನಗಳನ್ನು ರೂಪಿಸಲಾಗಿದ್ದು, ಮಹಿಳೆಯರಿಗೆ ಕಾನೂನಿನ ರಕ್ಷಣೆಯನ್ನೂ ಒದಗಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಮೀಸಲಾತಿ ಸಿಗಬೇಕು: ಸಮಾಜದಲ್ಲಿ ನಿಜವಾದ ಮೀಸಲಾತಿ ಸೌಲಭ್ಯವನ್ನು ಮಹಿಳೆಯರಿಗೆ ಕೊಡಬೇಕಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಿಂದ ನಾವು ಹಂತಹಂತವಾಗಿ ಮಹಿಳಾ ಪ್ರಧಾನ ಸಮಾಜವಾಗಿ ಬದಲಾಗುತ್ತಿದ್ದೇವೆ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡೂ ಇಂದಿನ ಮಹಿಳೆಯರಿಗೆ ಸಿಕ್ಕಿರುವ ಎರಡು ದೊಡ್ಡ ವರದಾನಗಳಾಗಿವೆ ಎಂದು ಅಶ್ವತ್ಥನಾರಾಯಣ ವ್ಯಾಖ್ಯಾನಿಸಿದರು.

ಕಾರ್ಯಕ್ರಮದಲ್ಲಿ ಹೆಸರಾಂತ ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಗಿರೀಶ್, ಚನ್ನೇಗೌಡ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕಿಯರಿಗೆ ಸಚಿವರು ಪುರಸ್ಕಾರ ಪ್ರದಾನ ಮಾಡಲಾಯಿತು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.