ETV Bharat / state

ವಿಧಾನ ಪರಿಷತ್ ಜಟಾಪಟಿ : ಕಲಾಪದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆ - non-trust motion against speaker in Vidhanaparishat

ಕಲಾಪ ಮತ್ತೆ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಬಿಜೆಪಿಯ ಬೇಡಿಕೆ ಪರಿಗಣಿಸಬಾರದು, ಸಭಾಪತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿರ್ಣಯಿಸಬೇಕು. ಆಡಳಿತ ಪಕ್ಷದ ಒತ್ತಡ ಸರಿಯಲ್ಲ ಎಂದು ಧರಣಿ ನಡೆಸಿದರು..

Debate on non-trust motion against speaker in Vidhanaparishat
ಕಲಾಪದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆ
author img

By

Published : Dec 9, 2020, 3:10 PM IST

ಬೆಂಗಳೂರು : ಚಳಿಗಾಲದ ಅಧಿವೇಶನದ ಮೂರನೇ ದಿನದ ಬೆಳಗಿನ ಅವಧಿಯ ಪರಿಷತ್ ಕಲಾಪದಲ್ಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆ ಕುರಿತು ವಿಷಯ ಬಲಿ ಪಡೆಯಿತು. ಎರಡು ಬಾರಿ ಕಲಾಪ ಮುಂದೂಡಲಾಯಿತು.

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸದನದ ಮುಂದಿಡುವ ಕಾಗದ ಪತ್ರಗಳನ್ನು ಮಂಡಿಸಲಾಯಿತು. ವರದಿಗಳನ್ನು ಒಪ್ಪಿಸಲಾಯಿತು. ನಂತರ ಶಾಸನ ರಚನೆ ಕಲಾಪ ಕೈಗೆತ್ತಿಕೊಂಡು ಎಪಿಎಂಸಿ ವಿಧೇಯಕ ಮಂಡಿಸಲು ಸಹಕಾರ ಸಚಿವ ಎಸ್ ಟಿ ಸೋಮಶೇಖರ್​ಗೆ ಸಭಾಪತಿ ಅವಕಾಶ ಕಲ್ಪಿಸಿದರು.

ಶಾಸನ ರಚನೆ ಕಲಾಪಕ್ಕೂ ಮೊದಲು ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಿ ಕಾರ್ಯಕಲಾಪ ಪಟ್ಟಿಗೆ ವಿಷಯ ಸೇರಿಸುವಂತೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಸ್ತಾಪ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್, ಸದನದ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಕಲಾಪವನ್ನು ಒಂದು ಗಂಟೆ ಮುಂದೂಡಿಕೆ ಮಾಡಲಾಯಿತು.

ಕಲಾಪ ಮತ್ತೆ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಬಿಜೆಪಿಯ ಬೇಡಿಕೆ ಪರಿಗಣಿಸಬಾರದು, ಸಭಾಪತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿರ್ಣಯಿಸಬೇಕು. ಆಡಳಿತ ಪಕ್ಷದ ಒತ್ತಡ ಸರಿಯಲ್ಲ ಎಂದು ಧರಣಿ ನಡೆಸಿದರು.

ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆ ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿಕೆ ಮಾಡಲಾಯಿತು. ಮೂರನೇ ದಿನದ ಬೆಳಗಿನ ಅವಧಿಯ ಕಲಾಪ ಮಧ್ಯಾಹ್ನ ಭೋಜನ ವಿರಾಮದವರೆಗೂ ಯಾವುದೇ ಚರ್ಚೆ ನಡೆಯದೆ ಆಡಳಿತ, ಪ್ರತಿಪಕ್ಷದ ಗದ್ದಲಕ್ಕೆ ಬಲಿಯಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.