ETV Bharat / state

ಸ್ವಾರಸ್ಯಕರವಾಗಿ ಆರಂಭವಾದ ಆರ್​ಎಸ್​ಎಸ್ ಬಗೆಗಿನ ಚರ್ಚೆ ಗಲಾಟೆಯಲ್ಲಿ ಅಂತ್ಯ

author img

By

Published : Mar 24, 2022, 5:31 PM IST

ನೀವು ಪೀಠದಲ್ಲಿ ಕುಳಿತು ನಮ್ಮ ಆರ್​ಎಸ್​ಎಸ್ ಅಂತಾ ಹೇಳ್ತಿದ್ದೀರಲ್ಲಾ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಸಭಾಧ್ಯಕ್ಷರಿಗೆ ಪ್ರಶ್ನೆ ಮಾಡಿದರು. ಇನ್ನೇನು ಮತ್ತೆ? ಅದು ನಮ್ಮ ಅರ್​ಎಸ್​ಎಸ್ಸೆ, ಇನ್ನೂ ಒಂದು ಹೇಳ್ತಿನಿ ಕೇಳಿ, ಒಂದಲ್ಲ ಒಂದು ದಿನ ನೀವೂ ಕೂಡಾ ನಮ್ಮ ಆರ್​ಎಸ್​ಎಸ್ ಎಂದು ಹೇಳಬೇಕಾಗುತ್ತದೆ ಎಂದು ನಗುತ್ತಲೇ ಸ್ಪೀಕರ್ ಉತ್ತರಿಸಿದರು.

ಸ್ವಾರಸ್ಯಕರವಾಗಿ ಆರಂಭವಾದ ಆರ್​ಎಸ್​ಎಸ್ ಬಗೆಗಿನ ಚರ್ಚೆ ಗಲಾಟೆಯಲ್ಲಿ ಅಂತ್ಯ!

ಬೆಂಗಳೂರು: ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದ ವೇಳೆ ಆರ್​ಎಸ್​ಎಸ್ ಕುರಿತು ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ನಿಯಮ 69 ರಡಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಸಚಿವ ಅಶೋಕ್​ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ, ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್ ಎಂದಿದ್ದಾರೆ. ಈ ವೇಳೆ ಅಶೋಕ್ ಹಾಗೂ ಸಭಾಪತಿಗಳು ಒಟ್ಟಾಗಿ, ನೀವ್ಯಾಕೆ ಆರ್​ಎಸ್​ಎಸ್​ ಬಗ್ಗೆ ಅಷ್ಟು ಬೇಸರ ಮಾಡಿಕೊಳ್ಳುತ್ತೀರಿ ಎಂದರು. ಆಗ, ಸಿದ್ದರಾಮಯ್ಯ, ಬೇಸರನೇ ಮಾಡ್ಕೊಂಡಿಲ್ಲಾ, ಆರ್ ಎಸ್ ಎಸ್ ಅನ್ನೋದು ರಾಷ್ಟ್ರೀಯ ಸೇವಾ ಸಂಘ, ಅದು ಹೇಳೋದು ತಪ್ಪಾ? ಎಂದಾಗ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿದ್ದಿದರು. ಹಾಗೆ ಅದು ನಮ್ಮ ಆರ್ ಎಸ್ ಎಸ್ ಎಂದರು.

ನೀವು ಪೀಠದಲ್ಲಿ ಕುಳಿತು ನಮ್ಮ ಆರ್​ಎಸ್​ಎಸ್ ಅಂತಾ ಹೇಳ್ತಿದ್ದೀರಲ್ಲಾ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಈ ವೇಳೆ ಪ್ರಶ್ನೆ ಮಾಡಿದರು. ಇನ್ನೇನು ಮತ್ತೆ? ಅದು ನಮ್ಮ ಅರ್​ಎಸ್​ಎಸ್ಸೆ, ಇನ್ನೂ ಒಂದು ಹೇಳ್ತಿನಿ ಕೇಳಿ, ಒಂದಲ್ಲ ಒಂದು ದಿನ ನೀವೂ ಕೂಡಾ ನಮ್ಮ ಆರ್​ಎಸ್​ಎಸ್ ಎಂದು ಹೇಳಬೇಕಾಗುತ್ತದೆ ಎಂದು ನಗುತ್ತಲೇ ಸ್ಪೀಕರ್ ಉತ್ತರಿಸಿದರು. ಆ ವೇಳೆ ಕಾಂಗ್ರೆಸ್​ನ ಸದಸ್ಯರು ಎದ್ದು ನಿಂತು ಸಾಧ್ಯವೇ ಇಲ್ಲ ಎಂದು ಧ್ವನಿ ಏರಿಸಿದರು. ಸಿದ್ದರಾಮಯ್ಯ ಮಾತನಾಡಿ, ಆರ್​​ಎಸ್​ಎಸ್ ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ. ಅದಕ್ಕೆ ವಿರೋಧ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಸಚಿವ ಅಶೋಕ್ ಮಾತನಾಡಿ, ಅಧ್ಯಕ್ಷರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ. ಈಗ ಸರ್ವ ವ್ಯಾಪಿ ಆಗಿಹೋಗಿದೆ, ಈ ದೇಶದ ರಾಷ್ಟ್ರಪತಿ ಆರ್​ಎಸ್​ಎಸ್, ಪ್ರಧಾನಿ, ಉಪ ರಾಷ್ಟ್ರಪತಿ, ಮುಖ್ಯಮಂತ್ರಿಗಳು ಆರ್​ಎಸ್​ಎಸ್ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಭಗವಂತ್ ಮಾನ್: ₹50,000 ಕೋಟಿ ಪ್ಯಾಕೇಜ್‌ ಬೇಡಿಕೆ

ಆಗ ರಾಮಲಿಂಗಾರೆಡ್ಡಿ, ಇದು ದುರದೃಷ್ಟ ಎಂದರು. ಇದಕ್ಕೆ ಅಶೋಕ್ ಉತ್ತರಿಸಿ, ದುರಾದೃಷ್ಟ ಅಲ್ಲ ಇದು, ಅದೃಷ್ಟ ಎಂದರು. ಈ ಮಧ್ಯೆ ಜಮೀರ್ ಅಹ್ಮದ್, ಅಶೋಕ್ ಅವರೇ ನೀವು ಬಿಜೆಪಿ ಅಂತಾ ಯಾಕೆ ಹೇಳ್ತೀರಾ, ಆರ್ ಎಸ್ ಎಸ್ ಪಕ್ಷ ಅಂತಾ ಹೇಳಿ, ಬಿಜೆಪಿ ತೆಗೆದು ಬಿಡಿ ಎಂದು ಕಾಲೆಳೆದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಈ ದೇಶದ ಎಲ್ಲಾ ಮುಸಲ್ಮಾನರು, ಎಲ್ಲಾ ಕ್ರಿಶ್ಚಿಯನ್ನರು ಇವತ್ತಲ್ಲಾ ನಾಳೆ ಆರ್​ಎಸ್​ಎಸ್ ಸೇರ್ತಾರೆ. ಯಾವ ಅನುಮಾನವೂ ಇಲ್ಲ ಎಂದರು. ಈ ವೇಳೆ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಕೆ.ಜೆ. ಜಾರ್ಜ್, ಅದು ಆಗುವುದಿಲ್ಲ, ಸಾಧ್ಯವೇ ಇಲ್ಲ, ಅಲ್ಲಿವರೆಗೆ ನೀವೇ ಇರೋದಿಲ್ಲ ಎಂದರು.

ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಇದೇ ಪೀಠದಲ್ಲಿ ಕುಳಿತು ಸಂವಿಧಾನದ ಬಗ್ಗೆ ಉತ್ತಮ ಚರ್ಚೆ ಮಾಡಿದ್ದೇವೆ ಎಂದು ನೀವೇ ಹೇಳಿದ್ದೀರಿ. ಇದೇ ಆರ್ ಎಸ್ ಎಸ್ ನವರು ರಾಮಲೀಲಾ ಮೈದಾನದಲ್ಲಿ 150 ಬಾರಿ ಪ್ರತಿಭಟನೆ ಮಾಡಿ ಸಂವಿಧಾನ ಸುಟ್ಟಿದ್ದಾರೆ ಎಂದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು. ಸ್ಪೀಕರ್ ಮಧ್ಯಪ್ರವೇಶಿಸಿ, ಹೇ ಎಲ್ಲೆಲ್ಲೋ ಹೋಗ್ತಿದ್ದೀರಿ ಪ್ರಿಯಾಂಕ್, ಸುಮ್ ಸುಮ್ಮನೇ ಏನೇನೋ ಮಾತಾಡಬಾರದು, ಸರಿಯಲ್ಲ ಇದು.. ನಿಮ್ಮ ರಾಜಕೀಯ ಇದ್ದರೆ ಹೊರಗೆ ಮಾತಾಡಿ ಎಂದು ಸದನವನ್ನು ಮುಂದೂಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.