ETV Bharat / state

ಆಸ್ಪತ್ರೆಗೆ ಹೋಗಿ ಮೃತದೇಹ ಕೇಳಿದ್ರೆ ಗದರಿದ್ದರು : ಇಎಸ್​ಐ ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ

ರಾಜಾಜಿನಗರದ ಇಎಸ್​ಐ ಆಸ್ಪತ್ರೆ ಬಳಿ ಮೃತರ ಸಂಬಂಧಿಕರು ಆಗಮಿಸಿದ್ದರು. ಈ ವೇಳೆ ಅವರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Dead persons family members outrage against ESI hospital
ಇಎಸ್​ಐ ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ
author img

By

Published : Nov 29, 2021, 5:25 PM IST

Updated : Nov 29, 2021, 9:07 PM IST

ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಇಎಸ್​ಐ ಆಸ್ಪತ್ರೆಯಲ್ಲಿ ಸರಿ ಸುಮಾರು 15 ತಿಂಗಳ ನಂತರ ಕೊರೊನಾಗೆ ಬಲಿಯಾದ ಇಬ್ಬರ ಮೃತದೇಹಗಳನ್ನು ಶವಾಗಾರದಿಂದ ಹೊರ ತೆಗೆದ ಅಮಾನವೀಯ ಘಟನೆ ನಡೆದಿತ್ತು.

ಇಎಸ್​ಐ ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ

ಈ ಘಟನೆ ಬೆಳಕಿಗೆ ಬಂದ ಕೂಡಲೇ ಮೃತದೇಹಗಳನ್ನು ವಿಕ್ಟೋರಿಯಾ ಶವಾಗಾರಕ್ಕೆ ರವಾನಿಸಿದ್ದಾರೆ. ತಕ್ಷಣ ಮೃತರ ಸಂಬಂಧಿಕರನ್ನು ಪೊಲೀಸರು ಕರೆಯಿಸಿದ್ದಾರೆ. ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಆಸ್ಪತ್ರೆಗೆ ಬಳಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೃತ ವ್ಯಕ್ತಿಯ ಮಗಳು ಚೇತನಾ, ''ನಮ್ಮ ತಂದೆ ಕೊರೊನಾದಿಂದ ಮೃತಪಟ್ಟ ವೇಳೆ ಆಸ್ಪತ್ರೆಗೆ ಹೋಗಿ ಕೇಳಿದಾಗ ಅಂತ್ಯಕ್ರಿಯೆ ಆಗಿದೆ ಎಂದಿದ್ದರು. ತಮ್ಮ ಬೇಜವಾಬ್ದಾರಿಯಿಂದ ಈ ತಪ್ಪು ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ.

ವಿಷಯ ತಿಳಿದು ತುಂಬಾ ಬೇಸರವಾಗುತ್ತಿದೆ. ಅಂತ್ಯಕ್ರಿಯೆ ವೇಳೆ ನಮ್ಮ ಬಳಿ ಸಹಿ ತೆಗೆದುಕೊಂಡಿಲ್ಲವಲ್ಲ ಎಂದು ಪ್ರಶ್ನಿಸಿದ್ದಕ್ಕೆ ಈಗ ಸಹಿ ಮಾಡಿ ಎನ್ನುತ್ತಿದ್ದಾರೆ. ಮೊನ್ನೆ ಹೋಗಿ ಬಿಯು ನಂಬರ್ ಬಗ್ಗೆ ಮಾಹಿತಿ ಕೇಳಿದಾಗ ನೀವಿಲ್ಲಿಗೆ ಬರಲೇಬೇಡಿ, ನಮ್ಮ ಹತ್ತಿರ ಏನೂ ಇಲ್ಲ ಎಂದು ಗದರಿದ್ದರು.

ಈಗ ಆಸ್ಪತ್ರೆಯವರೆ ಅಂತ್ಯಸಂಸ್ಕಾರ ಮಾಡುತ್ತೇವೆ ಎನ್ನುತ್ತಿದ್ದಾರೆ. ಶಾಸಕರು ಕೂಡ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ನಮಗೆ ನ್ಯಾಯ ಸಿಗಬೇಕು. ನಾವು ದೂರು ಸಹ ಕೊಡುತ್ತೇವೆ'' ಎಂದು ಹೇಳಿದರು.

ಬಳಿಕ ಮೃತ ಮುನಿರಾಜು ಎಂಬುವರ ಅಳಿಯ ಸತೀಶ್ ಕುಮಾರ್ ಎಂಬುವರು ಮಾತನಾಡಿ, ನಮಗೆ ರಾಜಾಜಿನಗರ ಪೊಲೀಸರು ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ ತಕ್ಷಣ ಬರುವಂತೆ ಹೇಳಿದರು. ಡೆತ್ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೆ ಹೋದಾಗ ಕೋವಿಡ್ ಆಗಿದ್ದರಿಂದ ಬಿಬಿಎಂಪಿ ಕಡೆಯಿಂದಲೇ ಶವಸಂಸ್ಕಾರ ಮಾಡುತ್ತೇವೆ ಅಂದಿದ್ದರು. ನಾವೂ ಕೂಡ ಒಪ್ಪಿದ್ದೆವು. ನಂತರ ನಾವು ಪದ್ಧತಿ ಪ್ರಕಾರ ಕಾರ್ಯಗಳನ್ನು ಮುಗಿಸಿದ್ದೆವು ಎಂದರು.

ಇದನ್ನೂ ಓದಿ: ಇದೆಂಥ ಯಡವಟ್ಟು.. ವರ್ಷದ ನಂತ್ರ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್​ ರೋಗಿಗಳ ಕೊಳೆತ ಮೃತದೇಹ ಪತ್ತೆ!!

ನಂತರ ಮೃತ ಮಹಿಳೆ ದುರ್ಗಾ ಎಂಬುವವರ ಮಗಳು ಸುಜಾತ ಮಾತನಾಡಿ, ಅವರಿಗೆ ಕೋವಿಡ್ ಬಂದಿತ್ತು. ಬೆಳಗ್ಗೆ ಆರು ಗಂಟೆಯಿಂದ 3 ಗಂಟೆವರೆಗೂ ಪ್ರಯತ್ನಿಸಿದರೂ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ಇಎಸ್​​​ಐ ಆಸ್ಪತ್ರೆಗೆ ಸೇರಿಸಿದ 4 ದಿನದಲ್ಲಿ ಮೃತಪಟ್ಟರು. ಆದರೆ, ಕೋವಿಡ್ ಅಂತಾ ನಮಗೆ ಮೃತದೇಹ ಕೊಟ್ಟಿರಲಿಲ್ಲ.

ಹಾಗಾಗಿ, ನಾವು ವಾಪಸ್ ಬಂದಿದ್ದೆವು. ನಂತರ ಮೂರ್ನಾಲ್ಕು ದಿನದಲ್ಲಿ ಬಿಬಿಎಂಪಿಯಿಂದ ಕರೆ ಮಾಡಿ ಅಂತ್ಯಕ್ರಿಯೆ ಆಗಿದೆ ಎಂದಿದ್ದರು. ಈಗ ಸರಿಯಾಗಿ ಹದಿನೈದು ತಿಂಗಳಾಗಿದೆ. ಜುಲೈ 2ರಂದು ತೀರಿದ್ದರು. ಈಗ ಫೋನ್ ಬಂದಿದೆ. ನಮಗೆ ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ದುಃಖದಿಂದ ನುಡಿದರು.

ಇದನ್ನೂ ಓದಿ: ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ : ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ

Last Updated : Nov 29, 2021, 9:07 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.