ಆನೇಕಲ್(ಬೆಂ. ನಗರ): ಆನೇಕಲ್ ಬಳಿಯ ಅರವಂಟಿಗೆ ಪುರದ ರೈಲ್ವೆ ಹಳಿ ಮೇಲೆ ಯುವಕನೊಬ್ಬನ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ರೈಲು ಹಳಿಗೆ ತಲೆಕೊಟ್ಟು ಯುವಕ ಸಾವನ್ನಪ್ಪಿದಂತೆ ಕಾಣಿಸುತ್ತಿದೆ.
ತಾಲೂಕಿನ ಕರ್ಪೂರು ಅರವಂಟಿಗೆ ಪುರದ ಜನಾತಾ ಕಾಲೋನಿ ಹಿಂಭಾಗದ ರೈಲ್ವೆ ಹಳಿಯ ಮೇಲೆ ಯುವಕನ ದೇಹ ಛಿದ್ರ ಛಿದ್ರವಾಗಿದೆ. ತಡ ರಾತ್ರಿ ರೈಲಿಗೆ ತಲೆಯೊಡ್ಡಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ.
ತಲೆ, ಕೈಕಾಲು ಹಾಗೂ ದೇಹದ ಭಾಗಗಳು ಬೇರ್ಪಟ್ಟಿವೆ. ಛಿದ್ರವಾಗಿರುವ ದೇಹದ ಬಾಗವನ್ನು ಬೀದಿ ನಾಯಿಗಳು ಹೊತ್ತೊಯ್ದಿವೆ. ಸ್ಥಳೀಯರು ನೋಡಿ ಆನೇಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಆನೇಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ.