ಬೆಂಗಳೂರು: ಸದ್ಯ ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಎಲ್ಲೆಡೆ ಕಾರ್ಯಚರಣೆಯಲ್ಲಿದ್ದು, ನಗರದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಫಟ್ ರೌಂಡ್ಸ್ ಹೊಡೆದು ಅಂಗಡಿ ಮುಂಗಟ್ಟುಗಳು ಮುಚ್ಚಿರೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಯಾವುದೇ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಟ ಮಾಡುವ ಜನರನ್ನು ಹಾಗೆಯೇ ವಾಹನ ಸವಾರರನ್ನು ಸಂಪುರ್ಣವಾಗಿ ಲಾಕ್ ಡೌನ್ ಮಾಡಿದ್ದಾರೆ. ಈ ಹಿನ್ನೆಲೆ ಜಯನಗರ, ತ್ಯಾಗರಾಜನಗರ, ಸುತ್ತಮುತ್ತಲ ಠಾಣೆಗಳಿಗೆ ಭೇಟಿ ಕೊಟ್ಟು ಹೆಚ್ಚು ನಿಗಾ ವಹಿಸುವಂತೆ ರೋಹಿಣಿ ಸೆಫಟ್ ಸೂಚಿಸಿದ್ದಾರೆ. ಮತ್ತೊಂದೆಡೆ ನಗರದ ರಸ್ತೆಗಳು ಸಂಪೂರ್ಣವಾಗಿ ಲಾಕ್ಡೌನ್ ಆಗಿದೆ.
ಇನ್ನು ಪ್ರತಿ ಸಿಗ್ನಲ್ಗಳ ಬಳಿ ಟ್ರಾಫಿಕ್ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಪ್ರತಿಯೊಬ್ಬರ ಐಡಿ ಪ್ರೂಫ್ ಚೆಕ್ ಮಾಡಿ ಅಗತ್ಯ ಇರುವ ವ್ಯಕ್ತಿಗಳನ್ನು ಮಾತ್ರ ಮುಂದೆ ಹೋಗಲು ಬಿಟ್ಟು ಇನ್ನುಳಿದವರನ್ನು ಮತ್ತೆ ವಾಪಸ್ ಹೋಗುವಂತೆ ಸೂಚನೆ ನೀಡಿದ್ದಾರೆ.