ETV Bharat / state

ಹಣ ವಸೂಲಿ ಆರೋಪ: ಇಬ್ಬರು ಕಾನ್​ಸ್ಟೆಬಲ್​ಗಳ ಅಮಾನತ್ತು ಮಾಡಿ ಡಿಸಿಪಿ‌ ಇಶಾಪಂತ್ ಆದೇಶ - ಮೈಕೊ ಲೇಔಟ್ ಪೊಲೀಸ್ ಠಾಣೆ

ಆರೋಪಿಗಳಿಂದ ಹಣ ವಸೂಲಿ ಮಾಡಿದ ಆರೋಪದಡಿ ಮೈಕೊ ಲೇಔಟ್ ಪೊಲೀಸ್ ಠಾಣೆಯ ಇಬ್ಬರು‌ ಪೊಲೀಸ್ ಕಾನ್​ಸ್ಟೆಬಲ್​ಗಳನ್ನು ಅಮಾನತು ಮಾಡಿ ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಆದೇಶ ಹೊರಡಿಸಿದ್ದಾರೆ.

DCP Ishapant orders suspension of two constables
ಹಣ ವಸೂಲಿ ಆರೋಪ: ಇಬ್ಬರು ಕಾನ್​ಸ್ಟೇಬಲ್​ಗಳ ಅಮಾನತ್ತು ಮಾಡಿ ಡಿಸಿಪಿ‌ ಇಶಾಪಂತ್ ಆದೇಶ
author img

By

Published : Feb 7, 2020, 9:41 PM IST

ಬೆಂಗಳೂರು: ಆರೋಪಿಗಳಿಂದ ಹಣ ವಸೂಲಿ ಮಾಡಿದ ಆರೋಪದಡಿ ಮೈಕೊ ಲೇಔಟ್ ಪೊಲೀಸ್ ಠಾಣೆಯ ಇಬ್ಬರು‌ ಪೊಲೀಸ್ ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಿ ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಆದೇಶ ಹೊರಡಿಸಿದ್ದಾರೆ.

ಮೈಕೋ ಲೇಔಟ್ ಠಾಣೆಯ ಪಿಎಸ್ಐ ದಾದಾ ಆಯಾಥ್ ಹಾಗೂ ಪೇದೆ ರಾಮಚಂದ್ರಪ್ಪ ಅಮಾನತುಗೊಂಡವರು. ಇವರ ವಿರುದ್ಧ ಕಳೆದ ತಿಂಗಳು 26ರಂದು ಬೆಂಗಳೂರಿನ ಲಾಡ್ಜ್‌ನಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಕರೆತಂದು ಐದು ಸಾವಿರ ಹಣ ಪೀಕಿದ ಆರೋಪ‌ ಕೇಳಿಬಂದಿತ್ತು. ಈ ಸಂಬಂಧ ಆರೋಪಿಗಳು ಮೈಕೊ ಲೇಔಟ್ ಠಾಣೆಯ ಎಸಿಪಿಗೆ ದೂರು ನೀಡಿದ್ದರು. ಈ ಅಕ್ರಮದ ಕುರಿತು ತನಿಖೆ ನಡೆಸುವಂತೆ ಕೋರಿ ಇನ್​ಸ್ಪೆಕ್ಟರ್​ರಲ್ಲಿ ಆಗ್ರಹಿಸಿದ್ದರು.‌

ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರು ಎಂದು‌ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್​ಸ್ಟೇಬಲ್​ಗಳನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.