ETV Bharat / state

ಮೈತ್ರಿ ಸರ್ಕಾರದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಅವಕಾಶ ಇಲ್ಲ: ಪರಮೇಶ್ವರ್​ - undefined

ಸಮನ್ವಯ ಸಮಿತಿ ಅಧ್ಯಕ್ಷರ ಬಗ್ಗೆಯೇ ಲಘುವಾಗಿ ಹೆಚ್​ ವಿಶ್ವನಾಥ್ ಅವರು ಮಾತನಾಡಿದ್ದು ಸರಿಯಲ್ಲ. ಮೈತ್ರಿ ಆರೋಗ್ಯಕರವಾಗಿ ಮುಂದುವರೆಯಬೇಕಾದರೆ ಇಂಥ ಹೇಳಿಕೆಗಳು ಸೂಕ್ತವಲ್ಲ. ಸಿಎಂ ಮತ್ತು ದೇವೇಗೌಡ ಇದನ್ನು ಗಮನಿಸಬೇಕಾಗುತ್ತದೆ. ಸರ್ಕಾರ ಇನ್ನೂ ನಾಲ್ಕು ವರ್ಷ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಪರಮೇಶ್ವರ್​ ಹೇಳಿದ್ದಾರೆ.

ಡಾ.ಜಿ. ಪರಮೇಶ್ವರ್
author img

By

Published : May 13, 2019, 3:07 PM IST

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಬೆಂಗಳೂರಿಗೆ ಸಂಬಂಧಪಟ್ಟಂತೆ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ಬರಲಿದೆ. ಅದರ ಬಗ್ಗೆಯೂ ಕೂಡ ಇಂದು ನಡೆದ ಸಭೆಯಲ್ಲಿ ಬೆಂಗಳೂರಿನ ಎರಡೂ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಹೇಳಿದರು.

ಡಾ.ಜಿ. ಪರಮೇಶ್ವರ್

ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷದ ಕಾರ್ಪೋರೇಟರ್​ಗಳ ಜೊತೆ ಅನ್ಯೋನ್ಯತೆಯಿಂದ ಕೆಲಸ ಮಾಡುವಂತೆ ಎಲ್ಲ ಶಾಸಕರಿಗೆ ಸೂಚಿಸಿದ್ದೇನೆ.‌ ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಶಾಸಕರು, ಸಂಸದರು ಮೇಯರ್ ಅವರನ್ನು ಉಪಹಾರಕೂಟಕ್ಕೆ ಆಹ್ವಾನಿಸಿದ್ದೆ. ಬಿಬಿಎಂಪಿ ಬಜೆಟ್ ಸರ್ಕಾರದ ಮಟ್ಟದಲ್ಲಿ ಬಂದಿದೆ. ಅದಕ್ಕೂ ಕೂಡ ಕೆಲವೇ‌ ದಿನಗಳಲ್ಲಿ ಒಪ್ಪಿಗೆ ಸಿಗಲಿದೆ ಎಂದರು.

ಸಲಹೆ ಬಂದಿದೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ಪತ್ರೆ , ಪಾರ್ಕ್, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿಗೆ ಪ್ರೋತ್ಸಾಹ ನೀಡಲು ಸದಸ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಹೊಸದಾಗಿ ನಾಲ್ಕು ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಲು ಅಭಿಪ್ರಾಯ ತಿಳಿಸಿದ್ದಾರೆ. ಈ ಎಲ್ಲಾ ಅಭಿಪ್ರಾಯವನ್ನು ಪರಿಗಣಿಸಿದ್ದೇವೆ. ಜನತಾದಳದ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರಿಗೆ ಮತ್ತು ಸಿದ್ದರಾಮಯ್ಯಗೆ ವೈಯಕ್ತಿಕವಾಗಿ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ರಾಜಕೀಯವಾಗಿ ಮೈತ್ರಿ ಸರ್ಕಾರದ ಪಕ್ಷವಾಗಿ ಒಟ್ಟಿಗೆ ಇರುವಾಗ ಸಮನ್ವಯ ಸಮಿತಿ ಅಧ್ಯಕ್ಷರ ಬಗ್ಗೆಯೇ ಲಘುವಾಗಿ ವಿಶ್ವನಾಥ್ ಅವರು ಮಾತನಾಡಿದ್ದು ಸರಿಯಲ್ಲ. ಇನ್ನು ಮುಂದೆ ಆ ರೀತಿ ಹೇಳಿಕೆಗಳು ಬರಬಾರದು. ಹಾಗೆಯೇ ನಮ್ಮ ಪಕ್ಷದವರಿಂದಲೂ ಈ ರೀತಿ ಹೇಳಿಕೆಗಳು ಬರಬಾರದು ಎಂದು ಪರಮೇಶ್ವರ್​ ಸೂಚಿಸಿದರು.

ಮೈತ್ರಿ ಆರೋಗ್ಯವಾಗಿರಲಿ

ಆಂತರಿಕವಾಗಿ ಭಿನ್ನಾಭಿಪ್ರಾಯ ಇದ್ದರೆ ಸಂಬಂಧಪಟ್ಟ ಮುಖಂಡರ ಜೊತೆ ಚರ್ಚೆ ಮಾಡಲಿ. ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಲಿ. ಕುಪೇಂದ್ರ ರೆಡ್ಡಿಯವರಿಂದೇನು ನಾವು ಸಮ್ಮಿಶ್ರ ಸರ್ಕಾರ ಮಾಡಿಲ್ಲ. ಜನತಾ ದಳದ ಜೊತೆ ಸಮ್ಮಿಶ್ರ ಮಾಡಿಕೊಂಡಿದ್ದೇವೆ. ನಮ್ಮ ರಾಷ್ಟ್ರೀಯ ಮಟ್ಟದ ನಾಯಕರಿಂದ ಸಮ್ಮಿಶ್ರ ಆಗಿದೆ. ಕುಪೇಂದ್ರ ರೆಡ್ಡಿಯವರಿಂದ ಆಗಿದ್ದಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ. ವಿಶ್ವನಾಥ್ ಕ್ರಿಯೆಗೆ ಕಾಂಗ್ರೆಸಿಗರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಆದರೆ ಇದು ಒಳ್ಳೆಯದಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

ಮೇ 23ಕ್ಕೆ ಸರ್ಕಾರ ಪಥನ ಆಗುತ್ತದೆ ಎಂದು ಬಿಜೆಪಿ ನಾಯಕರು ಜಪ ಮಾಡುತ್ತಿದ್ದಾರೆ. ಜಪ ಮಾಡುವವರೂ ಮಾಡುತ್ತಿರಲಿ ನಾವು ಅವರಿಗೆ ತೊಂದರೆ ಕೊಡುವುದಿಲ್ಲ. ಬಿಬಿಎಂಪಿ ಬಜೆಟ್ ವಿಚಾರದಲ್ಲಿ ಬಿಜೆಪಿ ನಾಯಕರು ಏನಾದರೂ ಹೇಳಿಕೆ ಕೊಡಲಿ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಸದಾಶಿವನಗರದಲ್ಲಿ ಕರೆಯಲಾಗಿದ್ದ ಉಪಹಾರ ಕೂಟದಲ್ಲಿ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನಪರಿಷತ್​ ಸದಸ್ಯರು, ಮೇಯರ್ ಹಾಗೂ ಉಪಮೇಯರ್‌ ಪಾಲ್ಗೊಂಡಿದ್ದರು.

Intro:newsBody:ಪಾಲಿಕೆ ಮೈತ್ರಿ ಸದಸ್ಯರ ನಡುವೆ ಅನ್ಯೋನ್ಯತೆ ಸಾಧಿಸಲು ಸಭೆ ಕರೆದಿದ್ದೆ: ಪರಮೇಶ್ವರ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಬೆಂಗಳೂರಿಗೆ ಸಂಬಂಧಪಟ್ಟ ಹಾಗೇ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ಬರುತ್ತಿದ್ದು, ಅದರ ಬಗ್ಗೆಯೂ ಕೂಡ ಇಂದು ಬೆಂಗಳೂರಿನ ಎರಡೂ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರದಲ್ಲಿ ಇಂದು ಕರೆಯಲಾಗಿದ್ದ ಉಪಹಾರಕೂಟದಲ್ಲಿ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನಪರಿಷತ್ತಿನ ಸದಸ್ಯರು, ಮೇಯರ್ ಹಾಗೂ ಉಪಮೇಯರ್‌ ಪಾಲ್ಗೊಂಡಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷದ ಕಾರ್ಪೋರೇಟರ್ ಗಳ ಜೊತೆ ಅನ್ಯೋನ್ಯತೆಯಿಂದ ಕೆಲಸ ಮಾಡುವಂತೆ ಎಲ್ಲ ಶಾಸಕರಿಗೆ ಸೂಚಿಸಿದ್ದೇನೆ.‌ ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಶಾಸಕರು, ಸಂಸದರು ಮೇಯರ್ ಅವರನ್ನು ಉಪಹಾರಕೂಟಕ್ಕೆ ಆಹ್ವಾನಿಸಿದ್ದೆ. ಬಿಬಿಎಂಪಿ ಬಜೆಟ್ ಸರಕಾರದ ಮಟ್ಟದಲ್ಲಿ ಬಂದಿದೆ ಅದಕ್ಕೂ ಕೂಡ ಕೆಲವೇ‌ ದಿನಗಳಲ್ಲಿ ಒಪ್ಪಿಗೆ ಸಿಗಲಿದೆ ಎಂದರು.

ಸಲಹೆ ಬಂದಿದೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ಪತ್ರೆ , ಪಾರ್ಕ್, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿಗೆ ಪ್ರೋತ್ಸಾಹ ನೀಡಲು ಸದಸ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಹೊಸದಾಗಿ ನಾಲ್ಕು ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಲು ಅಭಿಪ್ರಾಯ ತಿಳಿಸಿದ್ದಾರೆ. ಈ ಎಲ್ಲಾ ಅಭಿಪ್ರಾಯವನ್ನು ಪರಿಗಣಿಸಿದ್ದೇವೆ. ಜನತಾ ದಳದ ಅಧ್ಯಕ್ಷ ಎಚ್. ವಿಶ್ವನಾಥ್ ಅವರಿಗೆ ಮತ್ತು ಸಿದ್ದರಾಮಯ್ಯ ಗೆ ವೈಯಕ್ತಿಕವಾಗಿ ವ್ಯತ್ಯಾಸಗಳು, ಭಿನ್ನ ಅಭಿಪ್ರಾಯ ಇರಬಹುದು. ಆದರೆ ರಾಜಕೀಯವಾಗಿ ಮೈತ್ರಿ ಸರ್ಕಾರದ ಪಕ್ಷವಾಗಿ ಒಟ್ಟಿಗೆ ಇರುವಾಗ ಸಮನ್ವಯ ಸಮಿತಿ ಅಧ್ಯಕ್ಷರ ಬಗ್ಗೆಯೇ ಲಘುವಾಗಿ ವಿಶ್ವನಾಥ್ ಅವರು ಮಾತನಾಡಿದ್ದು ಸರಿಯಿಲ್ಲ.ಇನ್ನು ಮುಂದೆ ಆ ರೀತಿ ಹೇಳಿಕೆಗಳು ಬರಬಾರದು. ಹಾಗೆಯೇ ನಮ್ಮ‌ ಪಕ್ಷದವರಿಂದಲೂ ಈ ರೀತಿ ಹೇಳಿಕೆಗಳು ಬರಬಾರದು ಎಂದರು.

ಮೈತ್ರಿ ಆರೋಗ್ಯವಾಗಿರಲಿ

ಮೈತ್ರಿ ಆರೋಗ್ಯಕರವಾಗಿ ಮುಂದುವರೆಯಬೇಕಾದರೆ ಇಂಥ ಹೇಳಿಕೆಗಳು ಸಹಾಯ ಮಾಡುವುದಿಲ್ಲ. ಸಿಎಂ ಮತ್ತು ದೇವೇಗೌಡ ಇದನ್ನು ಗಮನಿಸಬೇಕಾಗುತ್ತದೆ. ಸರ್ಕಾರ ಇನ್ನೂ ನಾಲ್ಕು ವರ್ಷ ಕೆಲಸ ಮಾಡಬೇಕು. ಮೈತ್ರಿ ಮುಂದುವರೆಯಬೇಕಾದರೆ ಇಂಥ ಹೇಳಿಕೆಗಳು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯ ಪಟ್ಟರು.

ಆಂತರಿಕವಾಗಿ ಭಿನ್ನಾಭಿಪ್ರಾಯ ಇದ್ದರೆ ಸಂಬಂಧಪಟ್ಟ ಮುಖಂಡರ ಜೊತೆ ಚರ್ಚೆ ಮಾಡಲಿ. ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಲಿ. ಕುಪೇಂದ್ರ ರೆಡ್ಡಿಯವರಿಂದೇನು ನಾವು ಸಮ್ಮಿಶ್ರ ಸರ್ಕಾರ ಮಾಡಿಲ್ಲ. ಜನತಾ ದಳದ ಜೊತೆ ಸಮ್ಮಿಶ್ರ ಮಾಡಿಕೊಂಡಿದ್ದೇವೆ. ನಮ್ಮ ರಾಷ್ಟ್ರೀಯ ಮಟ್ಟದ ನಾಯಕರಿಂದ ಸಮ್ಮಿಶ್ರ ಆಗಿದೆ. ಕುಪೇಂದ್ರ ರೆಡ್ಡಿಯವರಿಂದ ಆಗಿದ್ದಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ. ವಿಶ್ವನಾಥ್ ಕ್ರಿಯೆ ಮಾಡಿದ್ದಾರೆ, ಕಾಂಗ್ರೆಸಿಗರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಆದರೆ ಇದು ಒಳ್ಳೆಯದಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯ ಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

ಮೇ 23ಕ್ಕೆ ಸರ್ಕಾರ ಪಥನ ಆಗುತ್ತದೆ ಎಂದು ಬಿಜೆಪಿ ನಾಯಕರು ಜಪ ಮಾಡುತ್ತಿದ್ದಾರೆ. ಜಪ ಮಾಡುವವರೂ ಮಾಡುತ್ತಿರಲ್ಲಿ ನಾವು ಅವರಿಗೆ ತೊಂದರೆ ಕೊಡುವುದಿಲ್ಲ. ಬಿಬಿಎಂಪಿ ಬಜೆಟ್ ವಿಚಾರ ದಲ್ಲಿ ಬಿಜೆಪಿ ನಾಯಕರು ಏನಾದರೂ ಹೇಳಿಕೆ ಕೊಡಲಿ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.