ETV Bharat / state

ಪ್ರಧಾನಿ ಕಚೇರಿ ಸೂಚನೆ ಗೌರವಿಸಿದ್ದೇವೆ:  ಪ್ರೋಟೋಕಾಲ್ ವಿಚಾರವಾಗಿ ಡಿಕೆಶಿ ಸ್ಪಷ್ಟನೆ.. ಅಶೋಕ್​​ಗೆ ತಿರುಗೇಟು - ಈಟಿವಿ ಭಾರತ ಕನ್ನಡ

"ನಾವು ಪ್ರಧಾನಿ ಮೋದಿಯವರನ್ನು ಬರಮಾಡಿಕೊಳ್ಳಲು ಸಿದ್ಧರಿದ್ದೆವು. ಆದರೆ, ಪ್ರೋಟೋಕಾಲ್​ ಪಾಲಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ಕಚೇರಿಯಿಂದಲೇ ಮಾಹಿತಿ ಬಂದಿದ್ದರಿಂದ ನಾವು ಅದನ್ನು ಗೌರವಿಸಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

DCM DK Shivakumar talks against Ashok
ಅಶೋಕ್​ ಆರೋಪಕ್ಕೆ ಡಿಸಿಎಂ ಡಿಕೆಶಿ ತಿರುಗೇಟು
author img

By ETV Bharat Karnataka Team

Published : Aug 26, 2023, 2:10 PM IST

Updated : Aug 26, 2023, 2:32 PM IST

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿರುವುದು

ಬೆಂಗಳೂರು: "ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಸ್ರೋ ಕಚೇರಿ ಭೇಟಿಗೆ ಪ್ರೋಟೋಕಾಲ್​ ಪಾಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ನಾವು ಹೋಗಿ ಅವರನ್ನು ಬರಮಾಡಿಕೊಳ್ಳಬೇಕಾಗಿತ್ತು. ಆದರೆ, ನಮಗೆ ಅಧಿಕೃತವಾಗಿ ಪ್ರಧಾನಿ ಕಚೇರಿಯಿಂದಲೇ ಮಾಹಿತಿ ಬಂದಿದ್ದರಿಂದ ನಾವು ಅದನ್ನು ಗೌರವಿಸಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

ಬೆಂಗಳೂರು ಸದಾಶಿವನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಪ್ರಧಾನಿ ಕಚೇರಿಯಿಂದ ಕರೆ ಬಂದ ಕಾರಣ ನಾವು ಮೋದಿಯವರನ್ನು ಬರಮಾಡಿಕೊಳ್ಳಲು ಹೋಗಿಲ್ಲವಷ್ಟೇ. ರಾಜಕೀಯ ಆಟ ಮುಗಿದಿದೆ. ನಾವು ಈಗ ಅಭಿವೃದ್ಧಿಯತ್ತ ನೋಡುತ್ತಿದ್ದೇವೆ. ಮುಖ್ಯಮಂತ್ರಿಯಾಗಲಿ ಅಥವಾ ನಾನಾಗಲಿ ಹೋಗಿ ಮೋದಿಯವರನ್ನು ಬರಮಾಡಿಕೊಳ್ಳಲು ಸಿದ್ಧರಿದ್ದೆವು. ಆದರೆ, ನಮಗೆ ಅವರಿಂದಲೇ ಬರುವುದು ಬೇಡವೆಂಬ ಅಧಿಕೃತ ಮಾಹಿತಿ ಬಂದ ಕಾರಣ ನಾವು ಅವರನ್ನು ಸ್ವಾಗತಿಸಲಿಲ್ಲ" ಎಂದು ಸ್ಪಷ್ಟಪಡಿಸಿದರು.

ಆರ್​ ಅಶೋಕ್​ಗೆ ಡಿಸಿಎಂ ತಿರುಗೇಟು: ಪ್ರಧಾನಿ ಮೋದಿ ಆಗಮನದ ವೇಳೆ ಪ್ರೋಟೋಕಾಲ್ ಪಾಲನೆ ಮಾಡಿಲ್ಲ ಎಂಬ ಆರ್​.ಅಶೋಕ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, "ನಾವು ಸರ್ಕಾರದ ವತಿಯಿಂದ ಸ್ವಾಗತ ಮಾಡಿಸಿದ್ದೇವೆ. ಯಾರಿಗೆ ಎಷ್ಟು ಗೌರವ ಕೊಡಬೇಕು ಎಂಬುದು ನಮಗೆ ಗೊತ್ತಿದೆ. ಬೇರೆ ರಾಜ್ಯಗಳ ತರಹ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿಗೆ ಗೌರವ ಕೊಡುತ್ತೇವೆ. ಆರ್.ಅಶೋಕ್​ಗೆ ಸ್ವಲ್ಪ ಪ್ರಾಬ್ಲಂ ಇದೆ. ಕೇಂದ್ರ ಸರ್ಕಾರವೇ ನಮಗೆ ಬರೋದು ಬೇಡ ಅಂತ ಹೇಳಿತ್ತು. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ" ಎಂದು ತಿರುಗೇಟು ನೀಡಿದರು.

ಸಿಎಂ ಭೇಟಿಯಲ್ಲಿ ತಪ್ಪೇನಿದೆ?: ರೇಣುಕಾಚಾರ್ಯ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಿಎಂ ಭೇಟಿ‌ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಅವರ ಕ್ಷೇತ್ರದ ಸಮಸ್ಯೆ, ಜನರ ಸಮಸ್ಯೆ ಇರುತ್ತೆ. ಅದಕ್ಕಾಗಿ ಬಂದು ಭೇಟಿ ಮಾಡಿದ್ದಾರೆ. ಅಧಿಕಾರದಲ್ಲಿರುವ ನಾಯಕರ ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದರು.

"ಸೋಮಶೇಖರ್ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇವತ್ತು ನಾನು ಅಲ್ಲಿಗೆ ಹೋಗ್ತಾ ಇದ್ದೇನೆ. ಕನಕಪುರ ರಸ್ತೆಯಲ್ಲಿ ನೀರಿನ ಸಮಸ್ಯೆ ಇದೆ. ಸಮಸ್ಯೆ ಇದ್ದಾಗ ನಾವು ಗೌರವಕೊಡಬೇಕು. ಅದನ್ನು ಮಾಡ್ತಾ ಇದ್ದೇವೆ ಅಷ್ಟೇ. ಹಾಲಿ ಶಾಸಕರದ್ದು ಏನೇನೋ ಸಮಸ್ಯೆ ಇರುತ್ತೆ. ಅದನ್ನು ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ. ಪ್ರೀತಿ, ಸ್ನೇಹ, ಬಾಂಧವ್ಯ, ರಾಜಕೀಯ ಇರುತ್ತೆ. ಬೇರೆ ಬೇರೆ ವಿಚಾರಗಳು ಇರುತ್ತವೆ. ಅದನ್ನು ಸಾರ್ವಜನಿಕವಾಗಿ ಹೇಳಲು ಆಗಲ್ಲ" ಎಂದು ಹೇಳಿದರು.

ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ: "ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ನಾವು ಆಪರೇಷನ್ ಹಸ್ತ ಮಾಡಲ್ಲ. ನಾವು ಕಾರ್ಯಕರ್ತರು ಮತ್ತು ಮುಖಂಡರಿಗೆ ಹೇಳಿದ್ದೇವೆ. ಯಾರು ಎಷ್ಟು ದಿನ ಅಂತ ಕಾಯಲು ಆಗುತ್ತೆ. ಬಹಳ ಕಷ್ಟ ಇದೆ, ಜನರಿಗೆ ಸಾಕಷ್ಟು ನಿರೀಕ್ಷೆ ಇರುತ್ತವೆ" ಎಂದರು.

"ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಮಾಡಲು ಆಗುತ್ತಾ?. 1.30 ಕೋಟಿ ಜನ ಗೃಹಲಕ್ಷ್ಮಿಗೆ ನೊಂದಣಿ ಮಾಡಿದ್ದಾರೆ. ಉಡುಪಿಯಲ್ಲಿ ನಾವು ಒಂದು ಸ್ಥಾನ ಗೆದ್ದಿಲ್ಲ. ಶೇ 85% ಗೃಹಲಕ್ಷ್ಮಿಗೆ ನೋಂದಣಿ ಆಗಿದೆ. ಬರೀ ಕಾಂಗ್ರೆಸ್ಸಿಗೆ ಮಾಡಲು ಆಗುತ್ತಾ?. ಎಲ್ಲಾ ಬಡವರಿಗೂ ಈ ಯೋಜನೆ ಸಿಗುತ್ತೆ" ಎಂದು ನುಡಿದರು.

ರೈತರ ಹಿತರಕ್ಷಣೆಗೆ ನಾವು ಬದ್ಧ: ಕಾವೇರಿ ನದಿ ನೀರಿನ ಬಗ್ಗೆ ಸುಪ್ರೀಂ ಕೋರ್ಟ್ ವ್ಯಾಜ್ಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಕೋರ್ಟ್ ಏನು ಹೇಳಬೇಕು ಅದನ್ನು ಹೇಳಿದೆ. ಶೋಭಾ ಕರಂದ್ಲಾಜೆ ರಾಜ್ಯದ ಹಿತ ಕಾಪಾಡಲು ಸಹಕಾರ ನೀಡಲಿ. ಸರ್ವಪಕ್ಷ ಸಭೆಗೆ ಶೋಭಾ ಅವರನ್ನು ಕರೆದಿದ್ವಿ, ಅವರು ಬರಲಿಲ್ಲ. ಪ್ರಧಾನಿ ಮತ್ತು ಜಲಶಕ್ತಿ ಸಚಿವರು ಸಮಯ ಕೊಟ್ಟಾಗ ಸರ್ವಪಕ್ಷ ನಿಯೋಗ ಹೋಗುತ್ತೇವೆ" ಎಂದು ತಿಳಿಸಿದರು.

"ನಮ್ಮ ವಾದವನ್ನು ನಾವು ಮಂಡಿಸುತ್ತೇವೆ. ಸುಪ್ರೀಂ ಕೋರ್ಟ್ ತೀರ್ಪು ನೀಡಲು ನಕಾರ ಮಾಡಿದೆ. ನೀರು ಎಷ್ಟು ಇದೆ ಅಂತ ಮಾಹಿತಿ ಬೇಕಿದೆ. ಸರ್ಕಾರದಿಂದ ನಾವು ಕೋರ್ಟ್​ಗೆ ತಿಳಿಸಿದ್ದೇವೆ. ರೈತರ ಹಿತರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಕೋರ್ಟ್​ಗೆ ಕೂಡ ಗೌರವ ಕೋಡಬೇಕಿದೆ. ಕಾನೂನು ತಜ್ಞರ ಜೊತೆ ನಮ್ಮ ಸಿಎಸ್ ಸಭೆ ಮಾಡಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ವಕೀಲರ ಜೊತೆ ಸಭೆ ಮಾಡಲಾಗಿದೆ. ನಾನು‌ ಕೂಡ ಸಭೆ ಮಾಡಬೇಕಿದೆ, ಮಾಡುತ್ತೇನೆ" ಎಂದರು.

ಇದನ್ನೂ ಓದಿ: ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸಿಎಂ ಭೇಟಿ: ಮತ್ತೆ ಅನುಮಾನ ಮೂಡಿಸಿದ ಉಭಯ ನಾಯಕರ ನಡೆ

Last Updated : Aug 26, 2023, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.