ETV Bharat / state

'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'ಕ್ಕೆ ಡಿಕೆಶಿ ಚಾಲನೆ

author img

By ETV Bharat Karnataka Team

Published : Jan 3, 2024, 2:23 PM IST

Updated : Jan 3, 2024, 4:12 PM IST

'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

DK Shivakumar gave drive to new project of govt
''ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ''
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿರುವುದು....

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಮೊದಲ ಬಾರಿಗೆ ''ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'' ಎಂಬ ಹೆಸರಿನಲ್ಲಿ ಕೆ.ಆರ್.ಪುರ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.‌ ‌ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಬಿಬಿಎಂಪಿ, ಬಿಡಿಎ, ಬಿಎಂಟಿಸಿ, ಬಿಎಂಆರ್​ಡಿಎ, ಜಲಮಂಡಳಿ, ಕಂದಾಯ ಹಾಗೂ ಬೆಸ್ಕಾಂಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದರು.

ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಹಾಗೂ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳಿಸಿದರು. ಶಾಸಕ ಬೈರತಿ ಬಸವರಾಜು ಮಾತನಾಡಿ, ಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ.‌ ಕುಡಿಯುವ ನೀರಿನ ಹಾಹಾಕಾರವಿದೆ. ಸುತ್ತಲಿನ 110 ಹಳ್ಳಿಗಳಿಗೆ ನೀರು ಒದಗಿಸಲು ಅನುದಾನ ಕಲ್ಪಿಸಬೇಕು. ಹಳೇ ಮದ್ರಾಸ್ ರಸ್ತೆಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಫ್ಲೈ‌ ಓವರ್ ಮಾಡಬೇಕೆಂಬ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಯೋಜನೆ‌‌ ಪ್ರಸ್ತಾಪಿಸಿತ್ತು. ಆದರೆ ಈ ಯೋಜನೆ ತಡೆಹಿಡಿಯಲಾಗಿದ್ದು, ಇದನ್ನ ಮುಂದುವರೆಸಬೇಕು ಎಂದರು.

ಕ್ಷೇತ್ರದಲ್ಲಿರುವ 11 ವಾರ್ಡ್​​ಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ಅನುದಾನ, ಐಟಿಐನಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಅದನ್ನು ತೆರವುಗೊಳಿಸಬೇಕು. ಕೆರೆಗಳ ಆಭಿವೃದ್ಧಿ ಮಾಡಬೇಕು. ಸೂಕ್ತ ಮಳೆನೀರುಗಾಲುವೆ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. 110 ಹಳ್ಳಿಗಳಿಗೆ ಒಳಚರಂಡಿ, ನೀರಿನ, ಸಂಸ್ಕರಣಾ ಘಟಕಗಳ ನಿರ್ಮಾಣ ಕಾಮಗಾರಿ‌ ಸಮಸ್ಯೆಗೆ ಅನುದಾನ ಕಲ್ಪಿಸಬೇಕು. ಕಳೆದ ಸರ್ಕಾರದಲ್ಲಿ ಹೆಚ್ಚಿನ ಅನುದಾನ ತರಲಾಗಿತ್ತು. ವಿವಿಧ ಕಾರಣಗಳಿಗಾಗಿ ಸರ್ಕಾರವು ಅನುದಾನ ಕಡಿತಗೊಳಿಸಿದೆ. ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಹೆಸರನ್ನು ಉದಯನಗರ ಮೆಟ್ರೋ ನಿಲ್ದಾಣಕ್ಕೆ ಬದಲಿಸಬೇಕು ಎಂದು ಮನವಿ ಮಾಡಿದರು.

ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, ನಗರದ ಶೇ.80ರಷ್ಟು ಕಸ ಕ್ಷೇತ್ರದ ಮಿಟಗಾನಹಳ್ಳಿ ಕ್ವಾರಿಗೆ ಬರುತ್ತಿದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕಸ ಬರುವುದನ್ನು ತಡೆಯಬೇಕು. ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸವಾಗುತ್ತಿಲ್ಲ. ನಗರದ ಶೇ. 80ರಷ್ಟು ಮಲೀನ ನೀರು ಕ್ಷೇತ್ರದಲ್ಲೇ ಹರಿಯುತ್ತಿದೆ. ಇದರಿಂದ‌ ಸಮಸ್ಯೆಗಳು ಉಂಟಾಗುತ್ತಿದ್ದು ಇದಕ್ಕೆ‌ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.

ಶಾಸಕರ‌ ಮನವಿಗೆ ಸ್ಪಂದಿಸಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ತೆರೆಯಲಾಗಿರುವ ಕೌಂಟರ್​ನಲ್ಲಿ ನೀಡಬೇಕು.‌ ಕೂಲಂಕುಶವಾಗಿ ಗಮನಿಸಿ ಪರಿಹರಿಸಬಹುದಾದ ತೊಂದರೆಗಳ ಬಗ್ಗೆ ಪರಿಹರಿಸುವ ಕೆಲಸ ಮಾಡಲಾಗುವುದು. ರಾಜಕಾರಣ ಮುಖ್ಯವಲ್ಲ. ಬದುಕು ಮುಖ್ಯ. ನಿಮ್ಮ ಬದುಕು ಚೆನ್ನಾಗಿರಬೇಕು. ಈ ಎರಡು ಕ್ಷೇತ್ರದಲ್ಲಿ ನಾವು ಸೋತಿದ್ದೆವೆ. ಆದರೂ ನಾವು ನಿಮ್ಮ ಜೊತೆ ಇರುತ್ತೇನೆ. ನಮ್ಮ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದು ಆಶ್ವಾಸನೆ ನೀಡಿದರು.

ಇದನ್ನೂ ಓದಿ: ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ: ಡಿಸಿಎಂ ಡಿಕೆಶಿ

ಒಂದು ವರ್ಷದ ಒಳಗಡೆ ಖಾತೆಗಳನ್ನು ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ಕೊಡುವ ಯೋಜನೆ ರೂಪಿಸಲಾಗುತ್ತಿದೆ. ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ಅಧಿಕಾರಿ ಅಥವಾ ಸಿಬ್ಬಂದಿ ದುಡ್ಡು ಕೇಳಿದರೆ ದೂರು ನೀಡಬಹುದು. ಕ್ಷೇತ್ರದ ಕುಡಿಯವ ನೀರು, ರಸ್ತೆ, ಮಳೆ ನೀರುಗಾಲುವೆ, ಕಸದ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಮಳೆನೀರುಗಾಲುವೆ ವಿಚಾರದಲ್ಲಿ ಹೊಸ ಮಾರ್ಗೋಪಾಯಗಳನ್ನ ರಚಿಸಲಾಗಿದೆ. ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸುಡಬೇಕು.‌ ಇದಕ್ಕಾಗಿ ನಗರದ ಹೊರವಲಯದ ನಾಲ್ಕು ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ತಂದೆ ತಾಯಿಯ ಶ್ರಮ ಮತ್ತು ತ್ಯಾಗದ ಸಂದೇಶ ಸಾರಲು ಕನ್ಯಾಕುಮಾರಿ ಟು ಲಡಾಕ್​ವರೆಗೆ ಯುವತಿಯ ಸೋಲೋ ರೈಡ್​

ಸಿದ್ದರಾಮಯ್ಯ ಅವರು ಕೊಟ್ಟ ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ ಆಗುತ್ತಿದೆ. ದೇವಸ್ಥಾನದಲ್ಲಿ ಅಕ್ಕಿ ಒಂದು ಕಡೆ, ಅರಿಶಿನ ಕುಂಕಮ ಒಂದು ಕಡೆ ಇರುತ್ತದೆ. ಎರಡು ಸೇರಿದರೆ ಮಂತ್ರಾಕ್ಷತೆ ಆಗಲಿದೆ.‌ ಈ ಮಂತ್ರಾಕ್ಷತೆ ಕೊಡುವಂತಹ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ.‌ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯಿಂದ‌ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

Last Updated : Jan 3, 2024, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.