ಬೆಂಗಳೂರು: ಮೇಯರ್, ಉಪಮೇಯರ್ ಅಭ್ಯರ್ಥಿಗಳು ಯಾರೆಂದು ತಿಳಿಯದೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಕೆಲಕಾಲ ಗೊಂದಲಕ್ಕೀಡಾದರು.
ಬಿಬಿಎಂಪಿ ಮೇಯರ್ ಚುನಾವಣೆಗೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸದ್ಯ ಬಿಜೆಪಿ ಗೊಂದಲದ ಗೂಡಾಗಿದೆ. ಅಭ್ಯರ್ಥಿ ಆಯ್ಕೆ ಮಾಡಲು ಮತ್ತೆ ಬಿಜೆಪಿ ನಾಯಕರು ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ಸೇರಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಅವರು ಮೇಯರ್, ಉಪಮೇಯರ್ ಅಭ್ಯರ್ಥಿಗಳು ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರ ತಿಳಿಯದೆ ಅಭ್ಯರ್ಥಿಗಳ ಹೆಸರಿಗಾಗಿ ತಡಕಾಡಿದರು. ಉಪಮೇಯರ್ ಯಾರು ? ಮೇಯರ್ ಯಾರು? ಅಂದಿದಕ್ಕೆ ತಬ್ಬಿಬ್ಬಾಗಿ, ಅಭ್ಯರ್ಥಿಗಳ ಹೆಸರನ್ನ ಹೇಳಿದ್ರು. ಅಲ್ಲದೆ ಮೋಹನ್ ರಾಜ್ ಉಪಮೇಯರ್ ಅಭ್ಯರ್ಥಿ ಅಲ್ಲವೆಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಸೂಚನೆ ಮೇರೆಗೆ ಮೇಯರ್ ಹುದ್ದೆಗೆ ಇಬ್ಬರು ಮತ್ತು ಉಪಮೇಯರ್ ಹುದ್ದೆಗೆ 2 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೇಯರ್ ಹುದ್ದೆಗೆ ಗೌತಮ್ ಕುಮಾರ್, ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದ್ದು, ಉಪಮೇಯರ್ ಹುದ್ದೆಗೆ ಗುರುಮೂರ್ತಿ ರೆಡ್ಡಿ, ಮಹಾಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.