ಬೆಂಗಳೂರು: ಜವಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್ಯು) ವಿದ್ಯಾರ್ಥಿಗಳ ಮೇಲಿನ ಹಲ್ಲೆ ಯಾರು ಬೇಕಾದರು ಮಾಡಿರಬಹುದು, ಎಬಿವಿಪಿ ಮಾಡಿದೆ ಎಂದು ಹೇಳಲು ಯಾವ ಆಧಾರ ಇದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಪ್ರಶ್ನಿಸಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳೇ ಬೇರೆಯವರನ್ನು ಪ್ರಚೋದಿಸಲು ಈ ಘರ್ಷಣೆ ಮಾಡಿರಬಹುದು, ಹಾಗಾಗಿ ಇದು ಯಾರು ಮಾಡಿದ್ದರೂ ತಪ್ಪೇ. ಇಲ್ಲಿ ಕಾನೂನು ಇದೆ ಅದರ ಪ್ರಕಾರ ತನಿಖೆಯಾಗುತ್ತೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ವಿರುದ್ಧದ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಸಿಎಎ ವಿರುದ್ಧ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಅನ್ನುವುದು ತಿಳಿಯುತ್ತಿಲ್ಲ. ಈ ವಿಷಯವನ್ನು ಧರ್ಮಾಧರಿತವಾಗಿ ಮಾಡುತ್ತಿರುವುದು ಯಾಕೆ. ಇದು ದೇಶದ ಹಿತಕ್ಕೋಸ್ಕರ ಬಂದತಂಹ ಕಾಯ್ದೆ. ಸಿಎಎ ಈ ಹಿಂದೆಯೇ ಬರಬೇಕಿತ್ತು, ಆದರೆ ಸ್ವಲ್ಪ ತಡವಾಗಿಯಾದರೂ ಬಂದಿದೆ. ಆದ್ದರಿಂದ ಎಲ್ಲರೂ ಸ್ವಾಗತಿಸಬೇಕು ಎಂದು ಹೇಳಿದರು.