ಬೆಂಗಳೂರು: ಟಿವಿ ಎಲ್ಲರ ಮನೆಯಲ್ಲಿ ಇರುವುದು ಸಹಜ. ಸೂಕ್ಷ್ಮವಾಗಿ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ತಮ್ಮದೇ ಪಕ್ಷದ ಸಚಿವ ಉಮೇಶ್ ಕತ್ತಿ ವಿರುದ್ಧ ಡಿಸಿಎಂ ಅಶ್ವಥ್ ನಾರಾಯಣ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬೋಗಸ್ ಬಿಪಿಎಲ್ ಕಾರ್ಡ್ ರದ್ದಾಗಬೇಕು. ಈ ಬಗ್ಗೆ ನಮ್ಮ ಉಮೇಶ್ ಕತ್ತಿ ಬಳಿ ಮಾತಾಡುತ್ತೇನೆ. ಆಧಾರ್ ಸಂಖ್ಯೆ ಜೋಡಣೆ ಮೊದಲು ಸರಿಯಾಗಬೇಕು. ಇದನ್ನ ಸರಿ ಮಾಡಿದರೆ ಎಲ್ಲವೂ ನಿಯಂತ್ರಣ ಆಗಲಿದೆ. ಸದ್ಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು. ಆಧಾರ್ ಕಾರ್ಡ್ ಲಿಂಕ್ ಮೊದಲು ಕಂಪ್ಲೀಟ್ ಮಾಡಬೇಕು. ಈ ಬಗ್ಗೆ ನಾನು ಕೂಡ ಅವರ ಜೊತೆ ಮಾತಾಡಿದ್ದೇನೆ. ಆಧಾರ್ ಲಿಂಕ್ ಆದರೆ ಸಹಜವಾಗಿಯೇ ಬೋಗಸ್ ಕಾರ್ಡ್ ತಡೆಹಿಡಿಯಬಹುದು. ನ್ಯಾಯ ಸಮ್ಮತವಾಗಿ ಜನರಿಗೆ ಈ ಕಾರ್ಡ್ ಸಿಗಬೇಕು. ಈ ವಿಷಯದಲ್ಲಿ ಮುಂಜಾಗ್ರತಾ ಕ್ರಮ ವಹಿಸಿ, ಒಂದೊಳ್ಳೆ ನಿರ್ಧಾರ ಕೈಗೊಳ್ಳಬೇಕು. ಸದ್ಯಕ್ಕೆ ಯಾವುದನ್ನು ಕೈಗೆತ್ತಿಕೊಳ್ಳದಂತೆ ಸಚಿವರಿಗೂ ಈಗಾಗಲೇ ಹೇಳಿದ್ದೇನೆ. ಯಾವುದೇ ಮನೆಗಳಲ್ಲಿ ಟಿವಿ, ಬೈಕ್ ಇದ್ದೆ ಇರುತ್ತೆ. ಹೀಗಾಗಿ ಇವುಗಳಿಂದ ಕಾರ್ಡ್ ರದ್ದು ಮಾಡೋದು ತಪ್ಪು ಎಂದು ಅಶ್ವಥ್ ನಾರಾಯಣ ಹೇಳಿದರು.
ಜಾತಿ ಸಮೀಕ್ಷೆ ವರದಿಯನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಲ್ಲ. ಈಗ ನಮಗೆ ಸಲಹೆ, ಕಿವಿ ಮಾತು ಕೊಡುತ್ತಿದ್ದಾರೆ. ಅವರ ಸರ್ಕಾರ ಇದ್ದಾಗ ಜಾರಿ ಮಾಡಿಲ್ಲ. ನಾವು ಸೂಕ್ತ ಕಾಲದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ; ಹೆಚ್ಡಿಕೆ