ETV Bharat / state

ರಾಜ್ಯ ಸರ್ಕಾರದಿಂದ 3 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್ ಖರೀದಿ​: ಡಿ.ಸಿ.ಎಂ

author img

By

Published : Apr 17, 2020, 1:47 PM IST

ಲಾಕ್​ಡೌನ್​ ಸಡಿಲಿಕೆ ಜೊತೆ ಜೊತೆಗೆ ಕೋವಿಡ್-19 ಟ್ರ್ಯಾಕಿಂಗ್​ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಸಿ.ಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

sdsds
ರಾಜ್ಯ ಸರ್ಕಾರದಿಂದ 3 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್ ಖರೀದಿ​:ಡಿ.ಸಿ.ಎಂ ಅಶ್ವಥ್ ನಾರಾಯಣ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಒಟ್ಟು 3 ಲಕ್ಷ ಕೋವಿಡ್-19 ಟೆಸ್ಟಿಂಗ್ ಕಿಟ್​ ಖರೀದಿಸಲಾಗಿದೆ. ಪ್ರತಿ ನಿತ್ಯ 2000 ಟೆಸ್ಟಿಂಗ್ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿ.ಸಿ.ಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಇನ್ನು ಪಿ.ಪಿ.ಇ ಕಿಟ್ ಎಲ್ಲಡೆ ಲಭ್ಯವಿಲ್ಲದಿರುವ ಕಾರಣ, 250 ಕಿಯೋಸ್ಕ್​ನನ್ನು ದಕ್ಷಿಣ ಕೊರಿಯಾ ರೀತಿ ಸ್ಥಾಪನೆ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 50 ರಿಂದ 100 ಬೆಡ್ ಹಾಗೂ ಆಮ್ಲಜನಕ ವ್ಯವಸ್ಥೆ ಇರಬೇಕು ಎಂದು ಸೂಚಿಸಲಾಗಿದೆ. ಚೀನಾ ದಿಂದ ಮಾಸ್ಕ್​​ಗಳು, ಟೆಸ್ಟಿಂಗ್ ಕಿಟ್​ನಲ್ಲಿ ಪ್ರತೀ ಬಾರಿ ಅನೇಕ ಲೋಪ ದೋಷಗಳು ಕಾಣಿಸುತ್ತಿದೆ. ಹೀಗಾಗಿ ಚೀನಾ ಸರ್ಕಾರ ಯಾವ ಸಂಸ್ಥೆಗಳಿಗೆ ಮಾನ್ಯತೆ ನೀಡಿದೆಯೋ ಆ ಸಂಸ್ಥೆಯಿಂದಲೇ ಮಾಸ್ಕ್, ಟೆಸ್ಟಿಂಗ್ ಕಿಟ್ ಆರ್ಡರ್ ನೀಡಲಾಗಿದೆ. ಈ ತಿಂಗಳ ಒಳಗೆ ರಾಜ್ಯದ ಅಗತ್ಯತೆಗೆ ತಕ್ಕಂತೆ ಮಾಸ್ಕ್ ಹಾಗೂ ಟೆಸ್ಟಿಂಗ್ ಕಿಟ್ ಬರಲಿದೆ.

ಹೊಸ ಹೆಲ್ಪ್ ಲೈನ್: ಏಪ್ರಿಲ್ 22 ರಿಂದ ಒಂದು ಶಿಫ್ಟ್​​ನಲ್ಲಿ 300 ಉದ್ಯೋಗಿಗಳಂತೆ 2 ಶಿಫ್ಟ್​ಗಳಲ್ಲಿ ಕೆಲಸ ಮಾಡುವ ಹೊಸ ಹೆಲ್ಪ್​​ಲೈನ್ ಪ್ರಾರಂಭಿಸಲಾಗುವುದು. ಈ ಹೊಸ ಹೆಲ್ಪ್​​ಲೈನ್ ದಿನಕ್ಕೆ ಸುಮಾರು 50,000 ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈಗ 104 ಸಂಖ್ಯೆಗೆ ಬೇರೆ ಕರೆಗಳು ಬರುವ ಕಾರಣ ಹೊಸ ಹೆಲ್ಪ್​​ಲೈನ್ ಪ್ರಾರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.