ETV Bharat / state

ನೂತನ ಶಿಕ್ಷಣ ನೀತಿ ಜಾರಿ; ರಾಜ್ಯಪಾಲರ ಜತೆ ಡಿಸಿಎಂ ಮಹತ್ವದ ಚರ್ಚೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಹತ್ವದ ಮಾತುಕತೆ ನಡೆಸಿದರು.

DCM Ashwath Narayan Significant Discussion With Governor
ರಾಜ್ಯಪಾಲರ ಜತೆ ಡಿಸಿಎಂ ಮಹತ್ವದ ಚರ್ಚೆ
author img

By

Published : Aug 28, 2020, 11:54 PM IST

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ರಾಜ್ಯಪಾಲ ವಜುಭಾಯಿ ವಾಲಾ ಅವರ ಜತೆ ಮಹತ್ವದ ಮಾತುಕತೆ ನಡೆಸಿದರು.

ಶುಕ್ರವಾರ ಬೆಂಗಳೂರಿನಲ್ಲಿ ರಾಜಭವನಕ್ಕೆ ಭೇಟಿ ನೀಡಿದ ಡಿಸಿಎಂ, ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಈವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಕಾರ್ಯಪಡೆ ರಚನೆ, ಆ ಕಾರ್ಯಪಡೆ ಜೊತೆ ನಡೆಸಿರುವ ಸಭೆಗಳು, ವಿಚಾರ ವಿನಿಮಯ ಇತ್ಯಾದಿ ಸಂಗತಿಗಳ ಬಗ್ಗೆ ರಾಜ್ಯಪಾಲರ ಜತೆ ವಿಚಾರ ವಿನಿಮಯ ಮಾಡಿಕೊಂಡರು.

ಇಡೀ ದೇಶದಲ್ಲಿಯೇ ಇತರೆ ರಾಜ್ಯಗಳಿಗಿಂತ ಮೊದಲು ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ಬೇಕಾಗಿರುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದುವರೆಗೂ ಕಾರ್ಯಪಡೆ ಹಾಗೂ ಕಾರ್ಯಪಡೆಯ ಉಪ ಸಮಿತಿಗಳು ನೀಡಿರುವ ಸಲಹೆಗಳು ಮತ್ತು ವರದಿಗಳು ಸೇರಿದಂತೆ ಹತ್ತು ಹಲವು ಸಂಗತಿಗಳ ಬಗ್ಗೆ ಚರ್ಚಿಸಿರುವ ಅಂಶಗಳ ಬಗ್ಗೆ ಉಪ ಮುಖ್ಯಮಂತ್ರಿ ಅವರು ರಾಜ್ಯಪಾಲರಿಗೆ ವಿವರಿಸಿದರು.

ನೀತಿಯಲ್ಲಿ ಅಡಕವಾಗಿರುವ ಪ್ರಮುಖ ವಿಷಯಗಳು, ಅವುಗಳ ಜಾರಿಯಿಂದ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಆಗಲಿರುವ ಮಹತ್ವದ ಬದಲಾವಣೆಗಳ ಬಗ್ಗೆಯೂ ಅವರು ರಾಜ್ಯಪಾಲರಿಗೆ ವಿವರಣೆ ನೀಡಿದರಲ್ಲದೆ, ಈ ಸಂಬಂಧ ರಾಜ್ಯ ಸರ್ಕಾರ ತರಲಿಚ್ಛಿಸಿರುವ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಬದಲಾವಣೆಗಳ ಬಗ್ಗೆಯೂ ಮಾಹಿತಿ ನೀಡಿದರು.

ಸಲಹೆ ನೀಡಿದ ರಾಜ್ಯಪಾಲರು:

ಇದೇ ವೇಳೆ ಶಿಕ್ಷಣ ನೀತಿ ಜಾರಿಯ ನಿಟ್ಟಿನಲ್ಲಿ ವೇಗವಾಗಿ ಹೆಜ್ಜೆಗಳನ್ನು ಇಡುತ್ತಿರುವ ಸರಕಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದ ರಾಜ್ಯಪಾಲರು, ಕೆಲ ಮಹತ್ವದ ಸಲಹೆಗಳನ್ನು ನೀಡಿದರು. ಜತೆಗೆ, ಡಿಸಿಎಂ ಜತೆಯಲ್ಲೇ ತಮ್ಮನ್ನು ಭೇಟಿಯಾಗಿದ್ದ ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯ ಹಾಗೂ ಅಜೀಂ ಪ್ರೇಮ್​ಜೀ ವಿವಿಯ ಉಪ ಕುಲಪತಿ ಪ್ರೊ. ಅನುರಾಗ್ ಬೇಹರ್ ಅವರಿಂದ ನೀತಿಯಲ್ಲಿರುವ ಮತ್ತಷ್ಟು ಅಂಶಗಳ ಬಗ್ಗೆ ವಿವರಣೆ ಪಡೆದರು. ಜತೆಗೆ, ಡಿಸಿಎಂ ಅವರಿಗೆ ಕೆಲ ಮುಖ್ಯ ಸಲಹೆಗಳನ್ನೂ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಆದಷ್ಟು ಬೇಗ ಹಂತ ಹಂತವಾಗಿ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಪಡೆಯು ನೀತಿಯ ಜಾರಿಯ ಬಗ್ಗೆ ಅಂತಿಮ ನೀಲನಕ್ಷೆಯನ್ನು ನೀಡುವುದು ಬಾಕಿ ಇದ್ದು, ಅದು ಕೈಸೇರಿದ ಕೂಡಲೇ ಅನುಷ್ಠಾನದ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಡಿಸಿಎಂ ಅವರು ರಾಜ್ಯಪಾಲರಿಗೆ ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.