ಬೆಂಗಳೂರು: ಪ್ರತಿಯೊಂದು ಚೆಕ್ ಪೋಸ್ಟ್ಗಳಲ್ಲಿ ವಾಹನ ತಪಾಸಣೆ ನಡೆಸಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ ಹಿನ್ನೆಲೆ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದು, ಡಿಸಿಎಂ ಅಶ್ವತ್ಥ ನಾರಾಯಣ 10 ನಿಮಿಷ ಟ್ರಾಫಿಕ್ನಲ್ಲಿ ಸಿಲುಕುವಂತಾಯಿತು.
ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿಯೊಂದು ಚೆಕ್ ಪೋಸ್ಟ್ಗಳಲ್ಲಿ ವಾಹನ ತಡೆದು ಪರಿಶೀಲಿಸಬೇಕೆಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಾಕೀತು ಮಾಡಿದ್ದಾರೆ. ಅದರಂತೆ ಇಂದು ಬೆಳಗ್ಗೆಯಿಂದಲೇ ಆಯಾ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ಬಿಗಿಗೊಳಿಸಿದ್ದಾರೆ. ಇದರಿಂದ ವಿಜಯನಗರದ ಮಾರೇನಹಳ್ಳಿ ಜಂಕ್ಷನ್ ಬಳಿ ಕೆಲಹೊತ್ತು ವಾಹನ ದಟ್ಟಣೆಯಾಗಿತ್ತು. ಹಾಗಾಗಿ ಡಿಸಿಎಂ ಅಶ್ವತ್ಥ ನಾರಾಯಣ ಅವರ ಕಾರು 10 ನಿಮಿಷ ಟ್ರಾಫಿಕ್ನಲ್ಲಿ ಸಿಲುಕಬೇಕಾಯಿತು.
ಓದಿ : ಎಲ್ಲಾ ವರ್ಗದ ಜನರಿಗೆ ಪರಿಹಾರ ತಲುಪುತ್ತದೆ: ಡಿಸಿಎಂ ಅಶ್ವತ್ಥ ನಾರಾಯಣ
ಉಪಮುಖ್ಯಮಂತ್ರಿ ಕಾರು ಟ್ರಾಫಿಕ್ನಲ್ಲಿ ಸಿಲುಕಿರುವುದನ್ನು ಅರಿತ ಪೊಲೀಸರು, ಕೂಡಲೇ ವಾಹನ ಸಂಚಾರ ಸುಗಮಗೊಳಿಸಿ ಡಿಸಿಎಂ ಹೋಗಲು ಅನುವು ಮಾಡಿಕೊಟ್ಟರು.