ETV Bharat / state

ಬೆಂಗಳೂರು: ಕೆಮ್ಮು, ಜ್ವರ ಇದ್ದ ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ಆತ್ಯಾಚಾರ ಎಸಗಿದ ತಂದೆ! - Bangalore rape news

ಸ್ವಂತ ತಂದೆಯೇ ಆತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಬೆಳ್ಳಂದೂರು‌ ಪೊಲೀಸ್ ಠಾಣೆಯಲ್ಲಿ 19 ವರ್ಷದ ಮಗಳು ದೂರು ದಾಖಲಿಸಿದ ಘಟನೆ ನಡೆದಿದೆ.

daughter filed rape case against her Dad
ಮಗಳ ಮೇಲೆ ಆತ್ಯಾಚಾರ ಎಸಗಿದ ತಂದೆ
author img

By

Published : Jun 28, 2020, 11:23 PM IST

ಬೆಂಗಳೂರು: ತನ್ನ ‌ಮೇಲೆ ಸ್ವಂತ (41 ವರ್ಷ) ತಂದೆಯೇ ಆತ್ಯಾಚಾರ ಮಾಡಿರುವುದಾಗಿ ಆರೋಪಿಸಿ ಬೆಳ್ಳಂದೂರು‌ ಪೊಲೀಸ್ ಠಾಣೆಯಲ್ಲಿ 19 ವರ್ಷದ ಮಗಳು ದೂರು ದಾಖಲಿಸಿದ ಘಟನೆ ನಗರದಲ್ಲಿ ನಡೆದಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ಹರಳೂರಿನಲ್ಲಿ ವಾಸವಾಗಿದ್ದ ರಾಕೇಶ್ ಎಂಬಾತ ಮಗಳ ಮೇಲೆ ಆತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಮಲತಾಯಿಯೊಂದಿಗೆ ರಾಕೇಶ್ ಕುಟುಂಬ ವಾಸವಾಗಿತ್ತು. ಹೀಗಿರಬೇಕಾದರೆ ಇದೇ ತಿಂಗಳು 23 ರಂದು ಮಗಳಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಔಷಧಿ ನೀಡುವ ಬದಲು ಮಗಳಿಗೆ ನಿದ್ದೆ ಮಾತ್ರೆ ಕೊಟ್ಟು ಮಲಗಿಸಿದ್ದಾನೆ. ಮಾರನೇ ದಿನ ನಸುಕಿನಲ್ಲಿ ಆಕೆಯ ಅಂಗಾಂಗ ಮುಟ್ಟುತ್ತಿರುವುದು ಗೊತ್ತಾಗಿದ್ದು ಆತಂಕದಿಂದ ಎದ್ದು ನೋಡಿದ ಯುವತಿ ತಂದೆ ಪಕ್ಕದಲ್ಲೇ ಮಲಗಿರುವುದನ್ನು ನೋಡಿ ಬೆಚ್ಚಿ ಬೆರಗಾಗಿದ್ದಾಳೆ.

ಇನ್ನು ಕೊಂಚ ಹೊತ್ತಿನ ಬಳಿಕ ಯುವತಿಯ ಗುಪ್ತಾಂಗ ನೋವು ಬಂದಿದ್ದು ಈ ವಿಷಯ ತಿಳಿಸಿದರೂ ಮಲತಾಯಿ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತರ ಬಳಿ ನೋವು ತೋಡಿಕೊಂಡಿದ್ದಳು. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಆಕೆಯ ಸ್ನೇಹಿತೆಯರು ಸಲಹೆ ನೀಡಿದ್ದರು. ಇನ್ನು ಪೊಲೀಸರಿಗೆ ಕರೆ‌‌ ಮಾಡಿ ನಡೆದಿರುವ ವಿಷಯ ತಿಳಿಸಿ ವಿಷ ಕುಡಿದಿರುವುದಾಗಿ ಹೇಳಿ ಕೂಡಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಮನೆಗೆ ಬಂದು ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಸದ್ಯ ಆತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಬೆಳ್ಳಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.