ETV Bharat / state

ವೈರಲ್​ ಆದ ಆಡಿಯೋ, ದರ್ಶನ್ ಕ್ಷಮೆ ಕೇಳಬೇಕು : ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗ್ರಹ - ಸಂದೇಶ್ ನಾಗರಾಜ್

ಆಡಿಯೋದಲ್ಲಿರೋದು ನನ್ನದೇ ಧ್ವನಿ. ಇವರೆಲ್ಲ ಡಾ ರಾಜ್‌ಕುಮಾರ್ ಅವರನ್ನು ನೋಡಿ ಕಲಿಯಬೇಕು. ಸಂದೇಶ್ ಹೋಟೆಲ್​ನಲ್ಲಿ ನಡೆದಿರೋ ಗಲಾಟೆ ಬಗ್ಗೆ ಸ್ವತಃ ಮಾಲೀಕರಾದ ಸಂದೇಶ್ ನಾಗರಾಜ್ ತಪ್ಪು ಒಪ್ಪಿದ್ದಾರೆ..

Darshan should apologize: Director Indrajit Lankesh
ದರ್ಶನ್ ಕ್ಷಮೆ ಕೇಳಬೇಕು
author img

By

Published : Jul 16, 2021, 7:23 PM IST

Updated : Jul 16, 2021, 7:45 PM IST

ಬೆಂಗಳೂರು : ದರ್ಶನ್​ ಮೈಸೂರಿನ ಸಂದೇಶ್​ ಹೋಟೆಲ್​ನಲ್ಲಿ ಸಪ್ಲೈಯರ್‌ವೊ​ಬ್ಬರಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಈಗ ಠುಸ್​ ಆಗಿದೆ. ಕಾರಣ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ವ್ಯಕ್ತಿಯೇ ನನಗೆ ಏನೂ ಆಗಿಲ್ಲ, ನನ್ನನ್ನು ಯಾರೂ ಹೊಡೆದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಎಲ್ಲಾ ಘಟನೆ ಬೆನ್ನಲ್ಲೇ ಅಚ್ಚರಿಗೆ ಕಾರಣವಾದ ಆಡಿಯೋವೊಂದು ವೈರಲ್​ ಆಗಿದೆ. ಘಟನೆ ಬಗ್ಗೆ ಜನರಿಗೆ ಗೊಂದಲ ಉಂಟಾಗುವಂತೆ ಮಾಡಿದೆ.

ಈ ಸಂಬಂಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆಡಿಯೋ ವೈರಲ್​ ಆಧಾರದ ಮೇಲೆ ದರ್ಶನ್ ಕ್ಷಮೆ ಕೇಳಬೇಕು ಅಂತಾ ಅಗ್ರಹಿಸಿದ್ದಾರೆ.

ದರ್ಶನ್‌ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೀಗಂತಾರೆ..

ಸಂಬಂಧಿತ ಲೇಖನ: ದರ್ಶನ್ ಹಲ್ಲೆ ಆರೋಪ ಪ್ರಕರಣ: ಘಟನೆಯ ಸಂಪೂರ್ಣ ವಿವರ ನೀಡಿದ ಹೋಟೆಲ್ ಸಿಬ್ಬಂದಿ, ಮಾಲೀಕ

ನಾನು ನನ್ನ ಮಾತುಗಳಿಗೆ ಈಗಲೂ ಬದ್ಧ. ಸಮಾಜದ ಒಳಿತಿಗಾಗಿ ಮಾತನಾಡುತ್ತಿದ್ದೇನೆ. ಬಡವರಿಗೆ, ಜನ ಸಾಮಾನ್ಯರಿಗೆ ಅನ್ಯಾಯ ಆಗಿದೆ. ಅವರ ಪರವಾಗಿ ಮಾತನಾಡುತ್ತಿದ್ದೇನೆ. ವೈರಲ್​ ಆಗಿರುವ ಆಡಿಯೋದಲ್ಲಿ ಸಂದೇಶ್ ಜೊತೆ ಮಾತನಾಡಿರುವುದು ನಾನೇ.. ಅದು ನನ್ನದೇ ಧ್ವನಿ. ಆದರೆ, ಅದು ಮುಖ್ಯ ಅಲ್ಲ. ಒಬ್ಬ ಕಲಾವಿದ ಸ್ಟಾರ್ ಆದ್ಮೇಲೆ ಸಮಾಜಕ್ಕೆ ಮಾದರಿಯಾಗಿರಬೇಕು‌. ಇವರೆಲ್ಲ ಡಾ ರಾಜ್‌ಕುಮಾರ್ ಅವರನ್ನು ನೋಡಿ ಕಲಿಯಬೇಕು ಅಂತಾ ಇಂದ್ರಜಿತ್ ಲಂಕೇಶ್ ದರ್ಶನ್​ ವಿರುದ್ಧ ಹರಿಹಾಯ್ದಿದ್ದಾರೆ.

ಸಂಬಂಧಿತ ಲೇಖನ:'ಸರ್ವಿಸ್‌ ತಡವಾಗಿದ್ದಕ್ಕೆ ದರ್ಶನ್‌ ಕೋಪಗೊಂಡಿದ್ದರು, ಆದ್ರೆ ಯಾರ ಮೇಲೂ ಹಲ್ಲೆ ಮಾಡಿಲ್ಲ'

ವೈರಲ್​ ಆದ ಆಡಿಯೋದಲ್ಲಿ ಹೀಗಿದೆ : ವ್ಯಕ್ತಿಯೊಬ್ಬರ ಜೊತೆ ಸಂದೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಈ ಆಡಿಯೋದಲ್ಲಿ ದರ್ಶನ್​ ಮತ್ತು ಅವರ ಸ್ನೇಹಿತರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದು, ದರ್ಶನ್​ ಬೈದಿದ್ದು ಸೇರಿದಂತೆ ಇತರೆ ವಿಷಯವನ್ನು ಮಾತನಾಡಲಾಗಿದೆ. ಆದರೆ, ಈ ಆಡಿಯೋ ಸತ್ಯಾಸತ್ಯತೆ ಬಗ್ಗೆ ಈವರೆಗೆ ಸಂದೇಶ್​ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಈ ಬಗ್ಗೆ ಸಂದೇಶ್​ ಸ್ಪಷ್ಟನೆ ನೀಡಿದರೆ ಮಾತ್ರ ನಿಜವಾದ ಸತ್ಯ ಹೊರ ಬಂದು ಅನ್ಯಾಯ ಆಗಿದ್ದರೆ ಅವರಿಗೆ ನ್ಯಾಯ ಸಿಗಲು ಸಾಧ್ಯ.

Last Updated : Jul 16, 2021, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.