ETV Bharat / state

ದರ್ಶನ್ ತನಿಖೆ ಚುರುಕು: ಡ್ರಗ್ಸ್​​ ಖರೀದಿ‌ಗೆ ಸಹಾಯ ಮಾಡಿದ ಹೆಡ್ ಕಾನ್ಸ್‌ಟೇಬಲ್ ಅಮಾನತು - Darshan investigation updates

ಡ್ರಗ್ಸ್​​ ಪ್ರಕರಣದಡಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಪೊಲೀಸರ ವಶದಲ್ಲಿದ್ದು, ತನಿಖೆ ಚುರುಕುಗೊಂಡಿದೆ. ಮತ್ತೊಂದೆಡೆ ಡಾರ್ಕ್ ವೆಬ್ ಮೂಲಕ ಬರುತ್ತಿದ್ದ ಡ್ರಗ್ಸ್​​ ಸ್ವೀಕರಿಸಲು ಲೊಕೇಷನ್ ಕುರಿತು ಸಹಾಯ ಮಾಡುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಒಬ್ಬನನ್ನ ಕೆಲಸದಿಂದ ಅಮಾನತು ಮಾಡಲಾಗಿದೆ‌.

Darshan investigation going on
ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್
author img

By

Published : Nov 12, 2020, 10:22 AM IST

Updated : Nov 12, 2020, 10:27 AM IST

ಬೆಂಗಳೂರು: ಡ್ರಗ್ಸ್​​ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಪ್ರಮುಖ ಆರೋಪಿಗೆ ಸಹಾಯ ಮಾಡಿದ ಆರೋಪದಡಿ ಪೊಲೀಸರ ವಶದಲ್ಲಿದ್ದಾನೆ. ಪ್ರಮುಖ ಆರೋಪಿ ಹೇಮಂತ್​ಗಾಗಿ ಪೊಲೀಸರು ಒಂದೆಡೆ ಹುಡುಕಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಆರೋಪಿಗೆ ಎಲ್ಲೆಲ್ಲಿ ಆಶ್ರಯ ನೀಡಲಾಗಿದೆಯೆಂಬ ಮಾಹಿತಿಯನ್ನು ಮಾಜಿ ಸಚಿವನ ಪುತ್ರ ದರ್ಶನ್​ನಿಂದ ಪಡೆಯುತ್ತಿದ್ದಾರೆ.

ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ಸ್​​​ ಪಾರ್ಸೆಲ್ ಪಡೆಯಲು ಬಂದ ಸುಜಯ್​ನನ್ನು ಪೊಲೀಸರು ಮೊದಲು ಬಂಧಿಸಿದ್ದರು. ಇದೇ ವೇಳೆ ಆರೋಪಿ ಹೇಮಂತ್ ಪರಾರಿ ಆಗಿ ಕೊಡಗಿಗೆ ಹೋಗಿದ್ದ. ಅಲ್ಲಿಂದ ಮೊದಲು ಮಾಜಿ ಸಚಿವನ ಪುತ್ರ ದರ್ಶನ್​​ಗೆ ಕರೆ ಮಾಡಿದ್ದಾನೆ. ಈ‌ ವೇಳೆ ದರ್ಶನ್, ಹಾವೇರಿಗೆ ಬಾ, ನಿನಗೆ ತೊಂದರೆಯಾಗದಂತೆ ನೋಡಿಕೊಳ್ಳತ್ತೇನೆಂದು ಆರೋಪಿ ಹೇಮಂತ್​ಗೆ ಭರವಸೆ ನೀಡಿದ್ದಾನೆ. ನಂತರ ಹೇಮಂತ್​ಗೆ ರಾಣೆಬೆನ್ನೂರಿನ ವಸತಿ ಗೃಹದಲ್ಲಿ ಆಶ್ರಯ ನೀಡಿದ್ದನು. ಈ ಎಲ್ಲಾ ಮಾಹಿತಿ ಪಡೆದು ಪೊಲೀಸರು ದರ್ಶನ್ ಲಮಾಣಿಯನ್ನು ‌ಬಂಧಿಸಿದ್ದಾರೆ ಎನ್ನಲಾಗ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಣೆಬೆನ್ನೂರಿನ ವಸತಿ ಗೃಹದಿಂದ ಹೇಮಂತ್ ಪರಾರಿ ಆಗಿದ್ದಾನೆ. ಸದ್ಯ ಆರೋಪಿ ಹೇಮಂತ್​ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪೊಲೀಸರು ಡ್ರಗ್ಸ್​ ಪ್ರಕರಣ ಸಂಬಂಧ ಇಷ್ಟೆಲ್ಲಾ ಕಷ್ಟ ಪಡುತ್ತಿದ್ದರೆ, ಇತ್ತ ಡಾರ್ಕ್ ವೆಬ್ ಮೂಲಕ ಬರುತ್ತಿದ್ದ ಡ್ರಗ್ಸ್​​ ಸ್ವೀಕರಿಸಲು ಲೊಕೇಶನ್ ಕುರಿತು ಸಹಾಯ ಮಾಡುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಓರ್ವನನ್ನು ಕೆಲಸದಿಂದ ಅಮಾನತು ‌ಮಾಡಲಾಗಿದೆ‌. ಸದಾಶಿವನಗರ ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಪೋಸ್ಟ್ ಮೂಲಕ ಬರುತ್ತಿದ್ದ ಡ್ರಗ್ಸ್​​ ಅನ್ನು ಪೊಲೀಸರು, ಜನರು ಇಲ್ಲದ ಪ್ರದೇಶಗಳನ್ನ ಗುರುತಿಸಿ ಮಾಹಿತಿ ತಿಳಿಸುತ್ತಿದ್ದ. ನಂತರ ಆರೋಪಿ ಹೇಮಂತ್ ಟೀಂ ಪೋಸ್ಟ್‌ ಮೂಲಕ ಬಂದ ಡ್ರಗ್ಸ್​​ ಖರೀದಿಸುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.

Last Updated : Nov 12, 2020, 10:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.