ETV Bharat / state

ಬೆಂಗಳೂರು ಮೆಟ್ರೋ ಪಿಲ್ಲರ್​ ಬಿರುಕು... ಪ್ರಯಾಣಿಕರಲ್ಲಿ ಆತಂಕ

ಬೆಂಗಳೂರಿನ ಇಂದಿರಾನಗರದ ಮೆಟ್ರೋ ನೇರಳೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.  ಮೆಟ್ರೋವು ಕಳಪೆ ಕಾಮಗಾರಿಯಿಂದ ಒಂದೊಂದೇ ಅವಾಂತರ ಸೃಷ್ಟಿ ಮಾಡುತ್ತಿದೆ.

ಮೆಟ್ರೋ ಪಿಲ್ಲರ್​
author img

By

Published : Aug 3, 2019, 12:05 PM IST

Updated : Aug 3, 2019, 12:44 PM IST

ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಡವಡವ ಶುರುವಾಗಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಪಿಲ್ಲರ್ ಬಿರುಕು ಮಾಸುವ ಮುನ್ನವೇ, ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.

ಬೆಂಗಳೂರಿನ ಇಂದಿರಾನಗರದ ಮೆಟ್ರೋ ನೇರಳೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮೆಟ್ರೋವು ಕಳಪೆ ಕಾಮಗಾರಿಯಿಂದ ಒಂದೊಂದೇ ಅವಾಂತರ ಸೃಷ್ಟಿ ಮಾಡುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಟ್ರಿನಿಟಿ ಹಾಗೂ ಜಯನಗರ ಎರಡೂ ಮೆಟ್ರೋ ಸ್ಟೇಷನ್‌ಗಳಲ್ಲಿಯೂ ಪಿಲ್ಲರ್‌ನ ಬೇರಿಂಗ್ ಬಿರುಕು ಬಿಟ್ಟಿತ್ತು. ಆತಂಕದಲ್ಲೇ ಪ್ರಯಾಣಿಸಿದ ಸಾರ್ವಜನಿಕರು ಮೆಟ್ರೋ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

metro pillar
ಬೆಂಗಳೂರು ಮೆಟ್ರೋ ಪಿಲ್ಲರ್​ ಬಿರುಕು

ಈ ಬಗ್ಗೆ ಬಿಎಂಆರ್​​ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾನ್ ಪ್ರತಿಕ್ರಿಯಿಸಿ, ಪಿಲ್ಲರ್‌ನ ಬೇರಿಂಗ್ 15 ರಿಂದ 20 ವರ್ಷಗಳ ಕಾಲ ಬಾಳಿಕೆ ಬರುತ್ತೆ. ಭಾರ ಜಾಸ್ತಿ ಆದಾಗ ಅದು ಕಂಪ್ರಸ್ ಆಗುತ್ತೆ. ಇದರಿಂದ ಏನೂ ತೊಂದರೆ ಆಗಲ್ಲ. ಈಗಾಗಲೇ ದುರಸ್ತಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಸರಿಪಡಿಸಲಾಗುತ್ತದೆ. ಜನರು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಮೆಟ್ರೋ ಪಿಲ್ಲರ್​ ಬಿರುಕು

ಇನ್ನು ಕಳೆದ ಬಾರಿಯ ಘಟನೆ ನಡೆದ ಬಳಿಕ ತಜ್ಞರನ್ನ ಕರೆಸಿ ಬಿಎಂಆರ್‌ಸಿಎಲ್ ಅಭಿಪ್ರಾಯ ಪಡೆದಿತ್ತು. ಆರು ತಿಂಗಳಿಗೆ ಒಮ್ಮೆಯಾದರೂ ಮೆಟ್ರೋ ಪಿಲ್ಲರ್‌ಗಳನ್ನ ಪರಿಶೀಲಿಸಿ, ತೊಂದರೆ ಇದ್ದರೆ ಸರಿಪಡಿಸಬೇಕು. ಇಲ್ಲವಾದರೆ, ಮೆಟ್ರೋ ಪ್ರಯಾಣಕ್ಕೆ ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಲಿದೆ.

Intro:Indranagar metroBody:ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಢವಢವ ಶುರುವಾಗಿದೆ.. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಪಿಲ್ಲರ್ ಬಿರುಕು ಮಾಸುವ ಮುನ್ನವೇ, ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್‌ಗಳಲ್ಲಿರೋ ಬೇರಿಂಗ್ ಬಿರುಕು ಬಿಟ್ಟಿದೆ

ಟ್ರಿನಿಟಿ ಮೆಟ್ರೋ ಪಿಲ್ಲರ್ ಬಿರುಕಿನ ನಂತರ ಒಂದಾದ ಮೇಲೆ ಒಂದರಂತೆ ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಳ್ತಿದ್ದು, ಬಿಎಂಆರ್‌ಸಿಎಲ್‌ನ ನಿರ್ಲಕ್ಷ್ಯ ಎದ್ದು ಕಾಣ್ತಿದೆ.. ಇದಕ್ಕೆ ಉದಾಹರಣೆ ಎಂಬಂತೆ ಇಂದು ಬೆಂಗಳೂರಿನ ಇಂದಿರಾನಗರದ ನೇರಳೆ ಮಾರ್ಗ ಮೆಟ್ರೋ ಕಾಣಿಸಿಕೊಂಡ ಈ ಬಿರುಕು, ಪ್ರಯಾಣಿಕರಲ್ಲಿ ಇನ್ನಿಲ್ಲದ ಆತಂಕ ಶುರುವಾಗಿತ್ತು.

ನೂರು ವರ್ಷ ಬಾಳಿಕೆ ಬರಬೇಕಿದ್ದ ಕಾಮಗಾರಿ, ಕೆಲವೇ ಕೆಲವು ವರ್ಷದಲ್ಲಿ ಕಳಪೆ ಕಾಮಗಾರಿಯಿಂz ಒಂದೊಂಖದೇ ಅವಾಂತರವನ್ನ ಸೃಷ್ಠಿ ಮಾಡ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಟ್ರಿನಿಟಿ ಹಾಗೂ ಜಯನಗರ ಎರಡೂ ಮೆಟ್ರೋ ಸ್ಟೇಷನ್‌ಗಳಲ್ಲಿಯೂ ಪಿಲ್ಲರ್‌ನ ಬೇರಿಂಗ್ ಬಿರುಕು ಬಿಟ್ಟಿತ್ತು. ಆತಂಕದಲ್ಲೇ ಪ್ರಯಾಣಿಸಿದ ಸಾರ್ವಜನಿಕರು ಮೆಟ್ರೋ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು..

ಬಿಎಂಆರ್ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾನ್, ಪಿಲ್ಲರ್‌ನ ಬೇರಿಂಗ್ ೧೫ ರಿಂದ ೨೦ ವರ್ಷಗಳ ಕಾಲ ಬಾಳಿಕೆ ಬರುತ್ತೆ. ಭಾರ ಜಾಸ್ತಿ ಆದಾಗ ಅದು ಕಂಪ್ರಸ್ ಆಗುತ್ತೆ. ಇದ್ರಿಂದ ಏನೂ ಏನೂ ತೊಂದ್ರೆ ಆಗೊಲ್ಲ. ಈಗಾಗ್ಲೆ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಸರಿಪಡಿಸಲಾಗುತ್ತೆ. ಜನರು ಗಾಬರಿ ಪಡುವ ಅವಶ್ಯಕತೆ ಇಲ್ಲ ಅಂತ ಯಶವಂತ್ ಚೌಹಾಣ್ ತಿಳಿಸಿದ್ರು.

ಕಳೆದ ಬಾರಿಯ ಘಟನೆ ನಡೆದ ಬಳಿಕ ತಜ್ಞರನ್ನ ಕರೆಸಿ ಬಿಎಂಆರ್‌ಸಿಎಲ್ ಅಭಿಪ್ರಾಯ ಪಡೆದಿತ್ತು. ಆರು ತಿಂಗಳಿಗೊಮ್ಮೆಯಾದ್ರೂ ಮೆಟ್ರೋ ಪಿಲ್ಲರ್‌ಗಳನ್ನ ಪರಿಶೀಲಿಸಿ, ತೊಂದರೆ ಇದ್ರೆ ಸರಿಪಡಿಸಬೇಕು. ಇಲ್ಲವಾದ್ರೆ, ಮೆಟ್ರೋ ಮೇಲೆ ಪ್ರಯಾಣಿಕರಿಗೆ ಇರೋ ನಂಬಿಕೆ ಹೋಗೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲConclusion:Video attached
Last Updated : Aug 3, 2019, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.