ETV Bharat / state

ನಿರ್ಭಯಾ ಯೋಜನೆಯ ಟೆಂಡರ್ ಲೋಪ; ಮಹಿಳಾ IPS ಅಧಿಕಾರಿ ಡಿ.ರೂಪಾ ಅವರ ಹೆಸರು ದುರ್ಬಳಕೆ - Tender omission of Nirbhaya project

ಗುತ್ತಿಗೆ ವಿಚಾರವಾಗಿ ಆರೋಪಯೊಂದು ಕೇಳಿ ಬಂದಿದ್ದು ಗೃಹ ಕಾರ್ಯದರ್ಶಿ ಡಿ. ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಗುತ್ತಿಗೆಗೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎನ್ನಲಾಗುತ್ತಿದೆ. ಹಾಗಾಗಿ ಈ ಸಂಬಂಧ ಇದೀಗ ಒಳಾಡಳಿತ ಇಲಾಖೆ ತನಿಖೆ ನಡೆಸುವಂತೆ ಆದೇಶ ನೀಡಿದೆ.

Tender omission of Nirbhaya project
ಸಂಗ್ರಹ ಚಿತ್ರ
author img

By

Published : Dec 26, 2020, 4:08 AM IST

ಬೆಂಗಳೂರು: ನಿರ್ಭಯಾ ಯೋಜನೆಯಡಿ ಕೊಟ್ಯಂತರ ರೂ. ವೆಚ್ಚದ ಸಿಸಿಟಿವಿ ಗುತ್ತಿಗೆ ವಿಚಾರವಾಗಿ ಗೃಹ ಇಲಾಖೆ ಕಾರ್ಯದರ್ಶಿ ಹೆಸರಲ್ಲಿ ಟೆಂಡರ್ ಮಾಹಿತಿ ಪಡೆಯಲು ಯತ್ನಿಸಿರುವ ಸಂಬಂಧ ತನಿಖೆ ನಡೆಸಲು ಸರ್ಕಾರ ಆದೇಶ ನೀಡಿದೆ.

ನಿರ್ಭಯಾ ಯೋಜನೆಯಡಿ ಬೆಂಗಳೂರು ನಗರದಲ್ಲಿ 610 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಅಳವಡಿಕೆ ಸಂಬಂಧ ಕರೆಯಲಾದ ಗುತ್ತಿಗೆ ವಿಚಾರದಲ್ಲಿ ಟೆಂಡರ್‌ನ ಮಾಹಿತಿ ಪಡೆಯಲು ಗೃಹ ಇಲಾಖೆ ಕಾರ್ಯದರ್ಶಿ ಹೆಸರಲ್ಲಿ ಕರೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಗೃಹ ಕಾರ್ಯದರ್ಶಿ ಡಿ. ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಗುತ್ತಿಗೆಗೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎಂಬ ಕೂಗು ಕೇಳಿ ಬಂದಿತ್ತು. ಈ ಸಂಬಂಧ ಇದೀಗ ಒಳಾಡಳಿತ ಇಲಾಖೆ ತನಿಖೆ ನಡೆಸುವಂತೆ ಆದೇಶ ನೀಡಿದೆ.

ಇದನ್ನೂ ಓದಿ : ಅಧಿಕ ಬಿಲ್ ಮಾಡಿದ್ರೆ ಕ್ರಿಮಿನಲ್ ಕೇಸ್.. ಖಾಸಗಿ ಆಸ್ಪತ್ರೆಗಳಿಗೆ ಡಿ. ‌ರೂಪಾ ಖಡಕ್ ಎಚ್ಚರಿಕೆ..

ನಿರ್ಭಯಾ ಅನುದಾನದಡಿ ಪ್ರಾರಂಭಿಸಲು ಉದ್ದೇಶಿಸಲಾಗಿರುವ ಸೇಫ್ ಸಿಟಿ ಯೋಜನೆಗೆ ಸಂಬಂಧ ಪಡದೇ ಇರುವ ವ್ಯಕ್ತಿಗಳು ಗೃಹ ಇಲಾಖೆ ಕಾರ್ಯದರ್ಶಿ ಹೆಸರಲ್ಲಿ ಟೆಂಡರ್ ಮಾಹಿತಿ ಪಡೆಯಲು ಯತ್ನಿಸಿದ್ದರು. ಈ ಸಂಬಂಧ ತನಿಖೆ‌ ನಡೆಸುವಂತೆ ಬೆಂಗಳೂರು‌ ಅಪರ ಪೊಲೀಸ್ ಆಯುಕ್ತರು(ಆಡಳಿತ) ನವಂಬರ್ 11 ರಂದು ಪತ್ರ ಬರೆದು ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಯವರಲ್ಲಿ ಕೋರಿದ್ದರು. ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ಏನಿದು ಟೆಂಡರ್ ಪ್ರಕರಣ?:

ಸುಮಾರು 610 ಕೋಟಿ ರೂ. ಯೋಜನೆಯ ಮೊದಲ ಬಿಡ್ ವೇಳೆ ಆಸಕ್ತಿ ತೋರದ ಕಂಪನಿಗಳು ಎರಡನೇ ಬಿಡ್‌ನಲ್ಲಿ ಟೆಂಡರ್ ಪಡೆಯಲು ಮುಗಿಬಿದ್ದಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಎರಡನೇ ಬಾರಿ ಲಾಬಿ ಶುರುವಾಗಿದ್ದು ಚೈನಾದ ಕೆಲ ಕಂಪನಿಗಳೊಂದಿಗೆ ಟೈಯಪ್ ಮಾಡ್ಕೊಂಡಿದ್ದ 3 ಕಂಪೆನಿಗಳು ಫೈನಲ್ ಆಗಿದ್ದವು ಎಂದು ಹೇಳಲಾಗಿದೆ.

ಈ ಟೆಂಡರ್‌ ದಕ್ಕಿಸಿಕೊಳ್ಳಲು ಕೆಲ IPS ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲಿ ಹಿರಿಯ ಮಹಿಳಾ IPS ಅಧಿಕಾರಿಯಾದ ಡಿ.ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿಬಂದಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಹೆಸರು ಹೇಳಿಕೊಂಡು ಮಹಿಳೆಯೊಬ್ಬರು ಕಾಲ್ ಮಾಡಿ ಟೆಂಡರ್ ಮಾಹಿತಿ ಕೇಳಿದ್ದಾರೆ ಎಂದು ಹೇಳಲಾಗಿದೆ.

D Roopa's name misuse in nirbhaya project
IPS ಅಧಿಕಾರಿ ಡಿ.ರೂಪಾ

ಟೆಂಡರ್ ದಾಖಲಾತಿಗಳನ್ನು ಸಿದ್ಧಪಡಿಸಲು ಹೊಣೆಗಾರಿಕೆ ಹೊತ್ತುಕೊಂಡಿರುವ ಅರ್ನಸ್ಟ್ ಯಂಗ್ ಸಮಾಲೋಚಕ ಕಂಪನಿಯ ಪಾಲುದಾರ ಅಕ್ಷಯ್ ಎಂಬುವರಿಗೆ ಕರ್ನಾಟಕದ ಗೃಹ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿದವರೊಬ್ಬರು ಟೆಂಡರ್ ಪ್ರಕ್ರಿಯೆಯ ದಾಖಲೆಗಳನ್ನು ತಮಗೆ ಕಳಿಸಬೇಕು ಎಂದು ಸೂಚಿಸಿದ್ದಾರೆ. ಈ ಕುರಿತು ಪಾಲುದಾರ ಅಕ್ಷಯ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿರುವ ಬಗ್ಗೆ ತನಿಖೆ ಮಾಡಿ ಎಂದು ಅಪರ‌ ಪೊಲೀಸ್ ಆಯುಕ್ತ (ಆಡಳಿತ) ನಿಂಬಾಳ್ಕರ್ ಮುಖ್ಯ ಕಾರ್ಯದರ್ಶಿಗೆ ಕೋರಿದ್ದರು.

ಇದನ್ನೂ ಓದಿ : ಬಿಬಿಎಂಪಿ ಟೆಂಡರ್ ವೆಬ್​ಸೈಟ್ ಹ್ಯಾಕ್; ತನಿಖೆ ವೇಳೆ ‌ರೋಚಕ ವಿಚಾರ ಬಯಲು

ಇದಕ್ಕೂ ಮೊದಲು ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದ ಅಡಿ ಸಿಸಿಟಿವಿ ಅಳವಡಿಸಲು ಗುತ್ತಿಗೆ ಕರೆಯಲಾಗಿತ್ತು. ಮೊದಲಿಗೆ ನಾಲ್ಕು ಗುತ್ತಿಗೆದಾರರು ಭಾಗವಹಿಸಿದ್ದರು. ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸೆನ್ ಆಂಡ್ ಟೂಬ್ರೋ, ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್, ಎನ್‌ಸಿಸಿ ಲಿಮಿಟೆಡ್ ಭಾಗವಹಿಸಿದ್ದವು.

ಆಗ ಟೆಂಡರ್ ಪ್ರಕ್ರಿಯೆ ಲೋಪದ‌ ಬಗ್ಗೆ ಬಿಇಎಲ್ ಪ್ರಧಾನಿಯವರಿಗೆ ‌ನೀಡಿದ ದೂರಿನಲ್ಲಿ ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ ಮತ್ತು ಎನ್‌ಸಿಸಿ ಲಿಮಿಟೆಡ್ ಕಂಪೆನಿಯಲ್ಲಿ ಓರ್ವ ನಿರ್ದೇಶಕ ಒಬ್ಬರೇ ವ್ಯಕ್ತಿಯಾಗಿದೆ. ಈ ಎರಡೂ ಕಂಪೆನಿಗಳು ಒಳಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಈಗಾಗಲೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಈ ಕುರಿತು ಮಾಹಿತಿ ನೀಡಿ ಈ ಎರಡೂ ಕಂಪೆನಿಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಕೇಳಿಕೊಂಡಿತ್ತು. ಈ ಆಧಾರವಿಟ್ಟುಕೊಂಡು ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿತ್ತು. ಈ ಹಿನ್ನೆಲೆ ಗುತ್ತಿಗೆ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.