ಬೆಂಗಳೂರು : ನನ್ನ ಕೈಯಲ್ಲಿ ಇಡಿ ಇದೆ ಎಂದಿದ್ದು ಬಹಳ ಸಂತೋಷ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಟಾಂಗ್ ನೀಡಿದ್ದಾರೆ.
ಆನಂದ್ ರಾವ್ ವೃತ್ತದ ಬಳಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರೇ ಇಡಿ ದಾಳಿ ಮಾಡಿಸಿದ್ದಾರೆ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಬಹಳ ಸಂತೋಷ, ನನ್ನ ಕೈಯಲ್ಲಿ ಇಡಿ ಇದೆ ಅಂತಾ ಹೇಳಿದ್ದಾರೆ. ನಮ್ಮ ಸೋಮಶೇಖರ್ ಹೇಳಿರೋದಾ?. ಅವರಿಗೆ ಒಳ್ಳೆಯದಾಗಲಿ. ಅವರು ಈಗ ಸಚಿವರಾಗಿದ್ದಾರೆ. ನನ್ನ ಹಳೆಯ ಸ್ನೇಹಿತರು ಎಂದರು.
ನಮ್ಮ ಶಾಸಕರು ನಮ್ಮ ಸ್ವಂತ ಆಸ್ತಿ ವಿಚಾರಕ್ಕೆ ಇಡಿ ಅಧಿಕಾರಿಗಳು ಬಂದಿದ್ದಾರೆ ಅಂತಾ ಹೇಳಿದ್ದಾರೆ. ಇದು ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಅಲ್ಲ. ಐಎಂಎಗೂ ನಮಗೂ ಸಂಬಂಧ ಇಲ್ಲ ಅಂತಾ ಹೇಳಿದ್ದಾರೆ. ಮನೆ ವಿಚಾರವಾದ್ರೆ ಇಡಿ ಮಾಡಿರೋದು ನನಗೆ ನಂಬಿಕೆ ಬರುತ್ತಿಲ್ಲ. ಅದನ್ನು ಐಟಿ ಅವರು ಮಾಡಬೇಕು. ಮನಿ ಲಾಂಡ್ರಿಂಗ್ ಮಾಡಿರೋದಾದ್ರೆ ಇಡಿ ಮಾಡಬೇಕು.
ಆಸ್ತಿ ಬಗ್ಗೆ ದೂರು ಬಂದಿದ್ದು, ದಾಳಿಯಾಗಿದೆ ಅಂತಾ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ನನ್ನ ಮನೆ ಮೇಲೂ ಹಿಂದೆ ದಾಳಿ ಮಾಡಿದ್ರು. ಮೊದಲು ಐಟಿ, ನಂತರ ಇಡಿ ದಾಳಿ ಮಾಡಿದ್ರು. ಕಾನೂನು ಸಲಹೆಯಲ್ಲಿ ತನಿಖೆಗೆ ಕೊಡಬಾರದು ಅಂದ್ರೂ, ಯಡಿಯೂರಪ್ಪ ತನಿಖೆಗೆ ಕೊಟ್ರು ಎಂದರು.
ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತ ರಮೇಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿನ್ನೆ ರಾತ್ರಿ ಸಭೆ ನಡೆದಿರುವುದು ಎಲ್ಲರಿಗೂ ಗೊತ್ತು. ನನಗೂ ಇಂಟಲಿಜೆನ್ಸ್ ವರದಿ ಬಂದಿದೆ. ಅದು ಇಂಟರ್‌ನಲ್ ವಿಚಾರ. ನಾನು ಆ ಬಗ್ಗೆ ಚರ್ಚೆ ಮಾಡಲ್ಲ ಎಂದು ಹೇಳಿದರು.
ಓದಿ: ವಿದ್ಯಾರ್ಥಿಗಳ ಗಮನಕ್ಕೆ: ಆಗಸ್ಟ್ 23 ರಿಂದ 8-12ನೇ ತರಗತಿಗಳು ಆರಂಭ..!