ಬೆಂಗಳೂರು: ಕೋಲಾರ ಜಿಲ್ಲೆಯ ಕಾಂಗ್ರೆಸ್ ವಿಚಾರದ ಬಗ್ಗೆ ಸಭೆ ನಡೆಸಿಲ್ಲ. ಬಜೆಟ್ ಅಧಿವೇಶನದಲ್ಲಿ ಚರ್ಚೆ ಮಾಡಬೇಕಾದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಮಾಜಿ ಸ್ಪೀಕರ್ ಕೆಲ ಸಲಹೆ ಕೊಟ್ಟಿದ್ದಾರೆ. ಅದನ್ನ ಸದನದಲ್ಲಿ ಪ್ರಸ್ತಾಪ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರ್ಘಟನೆ ಆಗಿದೆ. ಇದಕ್ಕೆ ಜವಾಬ್ದಾರಿ ಯಾರು? ಇದನ್ನ ಸರ್ಕಾರ ಹೇಳಬೇಕು. ಕಲ್ಲು ಕ್ವಾರಿ ನಿಲ್ಲಿಸುವಂತೆ ಡಿಸಿ ನೋಟಿಸ್ ಕೊಟ್ಟಿದ್ರು. ಆದ್ರೂ ಕೆಲಸ ಮುಂದೂವರೆಸಿದ್ದಾರೆ. ಇದರ ಹಿಂದೆ ಯಾರ ಪ್ರಭಾವ ಇದೆ ಅನ್ನೋದನ್ನ ಸರ್ಕಾರ ಹೇಳಬೇಕು ಎಂದು ಒತ್ತಾಯಿಸಿದರು.
ನಮ್ಮ ಕೆಲಸ ನಮ್ಮದು: ವಿಪಕ್ಷ ಕಾಂಗ್ರೆಸ್ ಸಾವಿನಲ್ಲೂ ರಾಜಕೀಯ ಮಾಡ್ತಿದೆ ಎಂದು ಸುಧಾಕರ್ ಹೇಳಿಕೆ ವಿಚಾರ ಮಾತನಾಡಿ, ಇದು ಬಿಟ್ಟು ಅವರು ಬೇರೇನು ಹೇಳಲು ಸಾಧ್ಯ. ವಿಪಕ್ಷ ಇರೋದು ಸರ್ಕಾರದ ವೈಫಲ್ಯಗಳನ್ನ ತೋರಿಸಲು. ಆ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ಓದಿ: ಬೆಂಗಳೂರು ಗಲಭೆ ಪ್ರಕರಣ: ಎನ್ಐಎ ಸಲ್ಲಿಸಿದ 7 ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ಏನಿದೆ?
ಬೆಳಗಿನ ಜಾವ ಆಗಿರುವ ಘಟನೆ ಯಾರಿಗೆ ಗೊತ್ತಾಗುತ್ತೆ. ನಾವು ಏನು ಮಾಡಕ್ಕೆ ಆಗುತ್ತೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಕೈಯಲ್ಲಿ ಆಗಲ್ಲ ಅಂದ್ರೆ ರಾಜೀನಾಮೆ ನೀಡಿ ಎಂದ ಅವರು, ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈಗ ವಿರೋಧ ಪಕ್ಷದ ನಾಯಕರು ಹೋಗಿ ಬರ್ತಾರೆ. ಮುಂದಿನ ದಿನಗಳಲ್ಲಿ ನಾವು ಸಹ ಪಕ್ಷದ ವತಿಯಿಂದ ಒಂದು ಟೀಮ್ ಸ್ಥಳಕ್ಕೆ ಭೇಟಿ ಕೊಡ್ತೀವಿ ಎಂದು ತಿಳಿಸಿದರು.