ETV Bharat / state

ಭ್ರಷ್ಟ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು : ಡಿ ಕೆ ಶಿವಕುಮಾರ್ ಕಿಡಿ - ಡಿ ಕೆ ಶಿವಕುಮಾರ್

ಕಾರ್ಪೋರೇಷನ್ ಎಲೆಕ್ಷನ್ ಮುಂದಕ್ಕೆ ಹಾಕಲು ಬಿಜೆಪಿಯವರು ಷಡ್ಯಂತ್ರ ಮಾಡ್ತಿದ್ದಾರೆ. ಅವರು ಆಡಿದ್ದೇ ಆಟ ಆಗ್ತಿದೆ. ಹೇಳೋರಿಲ್ಲ ಕೇಳೋರಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
author img

By

Published : Aug 8, 2022, 4:16 PM IST

ಬೆಂಗಳೂರು: ದೇಶದ ಗೌರವ ಸ್ವಾಭಿಮಾನಕ್ಕಾಗಿ ನಾವು ಕಾರ್ಯಕ್ರಮ ಮಾಡ್ತಿದ್ದೇವೆ. ಜಿಲ್ಲೆಗೆ ಪ್ರತಿ ಕ್ಷೇತ್ರಕ್ಕೆ 75 ಕಿಲೋ ಮೀಟರ್ ಪಾದಯಾತ್ರೆ ಮಾಡ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಜಾಜಿನಗರದಲ್ಲಿ ನಡೆದ ಸ್ಥಳೀಯ ವಿಧಾನಸಭೆ ಕ್ಷೇತ್ರದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಬಿಎಂಪಿ ಚುನಾವಣೆ ಪೂರ್ವಸಿದ್ಧತೆ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಿನ್ನೆಯಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಓಡಾಡ್ತಿದ್ದೇನೆ. ಕಾರ್ಪೋರೇಷನ್ ಎಲೆಕ್ಷನ್ ಮುಂದಕ್ಕೆ ಹಾಕಲು ಬಿಜೆಪಿಯವರು ಷಡ್ಯಂತ್ರ ಮಾಡ್ತಿದ್ದಾರೆ. ಅವರು ಆಡಿದ್ದೇ ಆಟ ಆಗ್ತಿದೆ. ಹೇಳೋರಿಲ್ಲ ಕೇಳೋರಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡ್ತಿದ್ದಾರೆ. ಭ್ರಷ್ಟ ಜನ ವಿರೋಧಿ ಸರ್ಕಾರವನ್ನು ನಾವು ತಡೆಯುತ್ತೇವೆ. ಜನರೇ ಇವರನ್ನು ಕಿತ್ತೊಗೆಯಬೇಕು. ಆ. 15ರಂದು ಇತಿಹಾಸ ಸೃಷ್ಟಿ ಆಗ್ತಿದೆ ಎಂದರು.

ಧ್ವಜ ಎಲ್ಲರಿಗೂ ಅಧಿಕಾರ ಕೊಟ್ಟಿದೆ: ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪಾದಯಾತ್ರೆಯನ್ನು ಲೇವಡಿ ಮಾಡಿದ್ದಕ್ಕೆ ಡಿಕೆಶಿ ತಿರುಗೇಟು ನೀಡಿ, ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಕುಮಾರಸ್ವಾಮಿ ಸಿಎಂ ಆಗಲಿ ಅಂತ. ನಾವು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದು, ಯಡಿಯೂರಪ್ಪ ಸಿಎಂ ಆಗಿದ್ದು. ಇಲ್ಲದಿದ್ದರೆ ಇವರೆಲ್ಲ ಸಿಎಂ ಆಗುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಸಾಧ್ಯ ಆಗ್ತಿತ್ತಾ? ಅವರು ಏನು ಬೇಕಾದರೂ ಹೇಳಲಿ. ಈ ಧ್ವಜ ಎಲ್ಲರಿಗೂ ಅಧಿಕಾರ ಕೊಟ್ಟಿದೆ ಎಂದರು.

ಭ್ರಷ್ಟಾಚಾರ ತಾಂಡವ ಆಡುತ್ತಿದೆ: ಗಾಂಧೀಜಿ ಹಾಕಿಕೊಟ್ಟ ಪಾದಯಾತ್ರೆ ಮಾಡುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲಿ 75 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಮ್ಮ ಶಾಸಕರು ಇಲ್ಲದ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ. ಬಿಬಿಎಂಪಿ ವಾರ್ಡ್ ಮೀಸಲಾತಿ ಸಂಬಂಧ ಮೂರು ಸಾವಿರ ಅಬ್ಜೆಕ್ಷನ್​ ಹಾಕಿದ್ದಾರೆ. ಯಾರನ್ನು ಕರೆದು ಸರ್ಕಾರ ಮಾತನಾಡಿಸಿಲ್ಲ ಎಂದರು.

ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಭ್ರಷ್ಟ ಸರ್ಕಾರವನ್ನು ಜನರು ಕಿತ್ತೊಗಿತಾರೆ. ರಾಮಲಿಂಗ ರೆಡ್ಡಿ, ಹರಿಪ್ರಸಾದ್, ರೇವಣ್ಣ ನಮ್ಮ ಪಕ್ಷದ ಎಲ್ಲರೂ ಹೋರಾಟ ಮಾಡುತ್ತಿದ್ದೇವೆ. ಬಿಬಿಎಂಪಿ ಮೀಸಲಾತಿ ವಿರೋಧಿಸಿ ಸಿಎಂ ಮನೆಗೆ ಕೈ ನಾಯಕರು ಮುತ್ತಿಗೆ ವಿಚಾರವಾಗಿ ಆಮೇಲೆ ಮಾತಾಡುತ್ತೇನೆ ಎಂದು ಡಿಕೆಶಿ ಹೇಳಿದರು.

ಓದಿ: ಕೆಆರ್​​ಎ‌ಸ್​​ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.