ETV Bharat / state

ಒಳ ಉಡುಪಿನಲ್ಲಿ ಮೊಬೈಲ್ ಇಟ್ಟು ಜೈಲಿನೊಳಗೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಡಿ ದರ್ಜೆ ನೌಕರ - ಭದ್ರತಾ ತಪಾಸಣಾ

ಒಳ ಉಡುಪಿನಲ್ಲಿ ಮೊಬೈಲ್ ಫೋನ್​ ಇಟ್ಟುಕೊಂಡು ಜೈಲಿನೊಳಗೆ ತೆರಳುತ್ತಿದ್ದ ಡಿ ದರ್ಜೆ ನೌಕರನೊಬ್ಬ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೇಂದ್ರ ಕಾರಾಗೃಹ ಬೆಂಗಳೂರು
ಕೇಂದ್ರ ಕಾರಾಗೃಹ ಬೆಂಗಳೂರು
author img

By

Published : Jul 28, 2023, 8:48 PM IST

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ವಿಧ್ವಂಸಕ ಕೃತ್ಯವೆಸಗಲು ಉಗ್ರ ಟಿ ನಜೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತರಬೇತಿ ನೀಡುತ್ತಿದ್ದ ಎಂಬ ಆತಂಕಕಾರಿ ವಿಷಯ ಸಿಸಿಬಿ ತನಿಖೆಯಲ್ಲಿ ಬಯಲಾದ ಬೆನ್ನಲ್ಲೇ ಒಳ ಉಡುಪಿನಲ್ಲಿ ಜೈಲಿನೊಳಗೆ ಮೊಬೈಲ್ ಸಾಗಿಸುತ್ತಿದ್ದ ಡಿ ದರ್ಜೆ ನೌಕರ ಸಿಬ್ಬಂದಿ ಸಿಕ್ಕಿ ಬಿದ್ದಿದ್ದಾನೆ.

ಪೊಲೀಸ್ ತಪಾಸಣೆ ವೇಳೆ ಒಳಉಡುಪಿನಲ್ಲಿ ಜೈಲಿನೊಳಗೆ ಸಾಗಿಸುತ್ತಿದ್ದ 52 ವರ್ಷದ ಭಾನುಪ್ರಕಾಶ್ ಸಿಕ್ಕಿಬಿದ್ದಿದ್ದು, ಜೈಲಿನ ಅಧೀಕಕ್ಷ ಮಲ್ಲಿಕಾರ್ಜುನ ಎಂಬುವರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಡಿ ದರ್ಜೆ ನೌಕರನಾಗಿರುವ ಭಾನುಪ್ರಕಾಶ್ ನಿತ್ಯ ಪೊಲೀಸ್ ವಾಹನಗಳನ್ನ ಸ್ವಚ್ಛತೆ ಮಾಡುತ್ತಿದ್ದ. ಇದೇ ತಿಂಗಳು 25ರಂದು ಜೈಲಿನೊಳಗೆ ಪ್ರವೇಶಿಸುವಾಗ ಭದ್ರತಾ ತಪಾಸಣಾ ವೇಳೆ ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಂಡಿರುವುದು ಗೊತ್ತಾಗಿದೆ.

ಆರೋಪಿ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ: ಈ ಬಗ್ಗೆ ಪ್ರಶ್ನಿಸಿದಾಗ ಅನುಮಾನಸ್ಪಾದವಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಡಿಮೆ ಬೆಲೆಯ ಬೇಸಿಕ್ ಸೆಟ್ ಮೊಬೈಲ್ ಖರೀದಿಸಿದ್ದು, ಮರೆತು ಒಳ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಆರೋಪಿ ಹೇಳಿಕೆ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸಿಬ್ಬಂದಿಯು ಕೈದಿಗಳೊಂದಿಗೆ ಸಂಪರ್ಕ ಹೊಂದಿದ್ದನಾ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನಿಗೆ ಡ್ರಗ್ಸ್​ ಕೊಡಲು ಯತ್ನಿಸಿ ತಾಯಿ ಜೈಲುಪಾಲು : ಇನ್ನೊಂದೆಡೆ ಜೈಲುಹಕ್ಕಿಯಾಗಿರುವ ಮಗನ ಭೇಟಿ ನೆಪದಲ್ಲಿ ಮಾದಕ ವಸ್ತು ನೀಡಲು ಯತ್ನಿಸಿದ ಮಹಿಳೆಯನ್ನು ಪರಪ್ಪನ ಅಗ್ರಹಾರ ಪೊಲೀಸರು (ಜುಲೈ 17-2022) ಬಂಧಿಸಿದ್ದರು. ಪರ್ವೀನ್ ತಾಜ್ ಎಂಬ ಮಹಿಳೆ ಬಂಧಿತ ಆರೋಪಿ ಎಂಬುದು ತಿಳಿದುಬಂದಿತ್ತು.

ಬಂಧಿತಳ ಮಗ ಮೊಹಮ್ಮದ್ ಬಿಲಾಲ್ ದರೋಡೆ ಸೇರಿದಂತೆ 11 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕೋಣನಕುಂಟೆ ಪೊಲೀಸರು ಬಿಲಾಲ್​ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ತಾಯಿ, ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು‌.

ಮಗನನ್ನು ನೋಡಲು ಪರ್ವೀನ್ ಆಗಾಗ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಮಹಿಳೆ, ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್​ನಲ್ಲಿ 5 ಲಕ್ಷ ರೂ. ಮೌಲ್ಯದ ಮಾದಕ ವಸ್ತು (ಹ್ಯಾಶಿಷ್ ಆಯಿಲ್) ತಂದಿದ್ದಳು. ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜೈಲಲ್ಲಿದ್ದ ಮಗನಿಗೆ ಬ್ಯಾಗ್​ನಲ್ಲಿ ಡ್ರಗ್ಸ್​ ಕೊಡಲು ಯತ್ನಿಸಿ ಜೈಲುಪಾಲಾದ ತಾಯಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.