ETV Bharat / state

ಲಸಿಕೆಗೆ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಸೂಕ್ತ ಕ್ರಮ: ಡಿಸಿ ಜೆ. ಮಂಜುನಾಥ್ - D C Manjunath talks about corona vaccine at bengalore

ಯಾವುದೇ ಖಾಸಗಿ ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೇಂದ್ರ ಸರ್ಕಾರ 250 ರೂಪಾಯಿ ಫಿಕ್ಸ್ ಮಾಡಿದ್ದು,ಅದಕ್ಕಿಂತ ಹೆಚ್ಚು ಹಣ ಪಡೆದ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.

d-c-manjunath
ಡಿಸಿ ಜೆ. ಮಂಜುನಾಥ್
author img

By

Published : Mar 1, 2021, 6:10 PM IST

ಬೆಂಗಳೂರು: ಸರ್ಕಾರ ನಿಗದಿ ಪಡಿಸಿರುವ ದರದಲ್ಲಿಯೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗಲಿದೆ, ಆಸ್ಪತ್ರೆಗಳಲ್ಲಿ ಒಂದು ಡೋಸ್ ಲಸಿಕೆಗೆ 250 ರೂ ನೀಡಬೇಕಾಗುತ್ತದೆ ಎಂದು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಲಸಿಕಾ ವಿತರಣಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಇಂದಿನಿಂದ ಕೋವಿಡ್ ವ್ಯಾಕ್ಸಿನ್ ಲಸಿಕೆ ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಇರುವ 45 ವರ್ಷದ ನಾಗರಿಕರಿಗೆ ಬೆಳಗ್ಗಿನಿಂದಲೇ ನೋಂದಣಿ ನಡೆಯುತ್ತಿದೆ. ಸಾರ್ವಜನಿಕರು ತಾಳ್ಮೆಯಿಂದ ಲಸಿಕೆ ಪಡೆಯಬೇಕು, ಯಾವುದೇ ಗೊಂದಲಕ್ಕೆ ಈಡಾಗಬಾರದು, ಪ್ರತಿಯೊಬ್ಬರಿಗೂ ಲಸಿಕೆ‌ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಾತನಾಡಿದರು

ಆ್ಯಪ್​ಗಳ ಕಾರ್ಯ ಸ್ಥಗಿತ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ಸರ್ವರ್ ಲೋ ಆಗುತ್ತೆ. ಹೆಚ್ಚಿನ‌ ಜನ ನೋಂದಣಿ ಮಾಡಿಕೊಳ್ಳುತ್ತಿರುವ ಕಾರಣ ಹೀಗೆ ಆಗುತ್ತೆ. ಮಧ್ಯಾಹ್ನದ ಬಳಿಕ ಆ್ಯಪ್​ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಈ ಬಗ್ಗೆ ಜನರಿಗೆ ಗೊಂದಲಬೇಡ ಎಂದು ಪುನರುಚ್ಚರಿಸಿದರು.

ಯಾವುದೇ ಖಾಸಗಿ ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೇಂದ್ರ ಸರ್ಕಾರ 250 ರೂಪಾಯಿ ಫಿಕ್ಸ್ ಮಾಡಿದ್ದು, ಅದಕ್ಕಿಂತ ಹೆಚ್ಚು ಪಡೆದ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಲಸಿಕಾ ಕೇಂದ್ರಗಳಲ್ಲಿ ಇಂದು ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಒಂದು ಕೇಂದ್ರದಲ್ಲಿ ಒಂದು ದಿನಕ್ಕೆ 200 ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತದೆ. ಆನ್​ಲೈನ್​ ರಿಜಿಸ್ಟರ್ ಮಾಡಿಕೊಂಡವರಿಗೆ ಮೊದಲ ಆದ್ಯತೆ ಕೊಡುತ್ತಿದ್ದು, ಆನ್ ಸ್ಪಾಟ್ ರಿಜಿಸ್ಟರ್ ಮಾಡಿಕೊಂಡವರು ಆ ನಂತರ ವ್ಯಾಕ್ಸಿನ್ ಪಡೆಯಬಹುದು ಎಂದು ತಿಳಿಸಿದರು.

ಆರೋಗ್ಯ ಸೇತು ಹಾಗೂ ಕೋವಿಡ್ 2.0 ಆ್ಯಪ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಆನ್ ಸ್ಪಾಟ್ ನೋಂದಣಿ‌ ಮಾಡಿಕೊಂಡು ವ್ಯಾಕ್ಸಿನ್ ಪಡೆಯಬಹುದು ಎಂದು ಮಾಹಿತಿ ನೀಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ವಾರದ ನಾಲ್ಕು ದಿನ ಮಾತ್ರ ಲಸಿಕೆ ನೀಡಲಾಗುತ್ತಿದ್ದು, ಸೋಮವಾರ, ಬುಧವಾರ, ಶುಕ್ರವಾರ, ಮತ್ತು ಶನಿವಾರದಂದು ಲಸಿಕೆ ಕೊಡುವುದಕ್ಕೆ ನಿರ್ಧರಿಸಲಾಗಿದೆ ಎಂದರು.

ಓದಿ: ಪಂಚಮಸಾಲಿ 2ಎ ಗೆ ಸೇರಿಸಲು ಆಗ್ರಹ: ನಾಳೆಯಿಂದ ಪತ್ರ ಚಳುವಳಿ

ಖಾಸಗಿ ಅಥವಾ ಸರ್ಕಾರಿ, ಯಾರು ಎಲ್ಲಿ ಲಸಿಕೆ ಪಡೆಯಲು ಇಚ್ಛಿಸುತ್ತಾರೋ, ಅಲ್ಲಿಯೇ ಪಡೆಯಬಹುದು. ಸಿಸ್ಟಮ್ಯಾಟಿಕ್ ಆಗಿ ಲಸಿಕೆ ನೀಡಲಾಗುತ್ತದೆ, ಲಸಿಕೆ ಬಗ್ಗೆ ಆತಂಕ ಬೇಡ. ಎಲ್ಲರೂ ಲಸಿಕೆ ಪಡೆದುಕೊಂಡು ಕೋವಿಡ್ ಮುಕ್ತರಾಗಬೇಕು. ಪ್ರಧಾನ ಮಂತ್ರಿಗಳೆ ಲಸಿಕೆ ಪಡೆದು ಜನರಿಗೆ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.