ETV Bharat / state

ರಾಜ್ಯಕ್ಕೆ 500 ಪ್ಲಾಸ್ಮಾ ಘಟಕ ದೇಣಿಗೆ ನೀಡಲು ಮುಂದಾದ ಝೆಕ್ ರಿಪಬ್ಲಿಕ್

ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್.ಪ್ರಕಾಶ್ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಪ್ರಾಗ್​ನ ಸೆಂಟ್ರಲ್ ಮಿಲಿಟರಿ ಆಸ್ಪತ್ರೆಯಲ್ಲಿ ಈಗಾಗಲೇ ಪ್ಲಾಸ್ಮಾವನ್ನು ಸಂಗ್ರಹಿಸಿಡಲಾಗಿದ್ದು, ಭಾರತ ತಲುಪುವವರೆಗೆ ಎಲ್ಲಾ ವೆಚ್ಚವನ್ನು ಝೆಕ್ ರಿಪಬ್ಲಿಕ್ ಭರಿಸಲಿದೆ ಎಂದು ವಿವರಿಸಿದರು.

author img

By

Published : May 16, 2021, 10:58 AM IST

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಬಹು ಬೇಡಿಕೆ ಇರುವ ಪ್ಲಾಸ್ಮಾ ಸಂಗ್ರಹ ಘಟಕಕ್ಕೆ ಝೆಕ್ ರಿಪಬ್ಲಿಕ್ ಸಹಕಾರ ನೀಡುತ್ತಿದ್ದು, ರಾಜ್ಯಕ್ಕೆ 500 ಪ್ಲಾಸ್ಮಾ ಘಟಕಗಳನ್ನು ದೇಣಿಗೆಯಾಗಿ ನೀಡಲು ಮುಂದಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್.ಪ್ರಕಾಶ್ ಈ ವಿಷಯವನ್ನು ತಿಳಿಸಿದ್ದಾರೆ. ಪ್ರಾಗ್​ನ ಸೆಂಟ್ರಲ್ ಮಿಲಿಟರಿ ಆಸ್ಪತ್ರೆಯಲ್ಲಿ ಈಗಾಗಲೇ ಪ್ಲಾಸ್ಮಾವನ್ನು ಸಂಗ್ರಹಿಸಿಡಲಾಗಿದ್ದು, ಭಾರತ ತಲುಪುವವರೆಗೆ ಎಲ್ಲಾ ವೆಚ್ಚವನ್ನು ಝೆಕ್ ರಿಪಬ್ಲಿಕ್ ಭರಿಸಲಿದೆ ಎಂದು ವಿವರಿಸಿದರು. 500 ಪ್ಲಾಸ್ಮಾ ಘಟಕ ದೇಣಿಗೆ ನೀಡುವ ಝೆಕ್ ರಿಪಬ್ಲಿಕ್​ ಸಹಕಾರಕ್ಕೆ ಸಿಎಂ ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದು, ಧನ್ಯವಾದ ತಿಳಿಸಿದ್ದಾರೆ.

ಇದೇ ವೇಳೆ ಕೊರೊನಾ ವಿರುದ್ಧದ ಸಮರದಲ್ಲಿ ರಾಜ್ಯ ಸರ್ಕಾರ ನಿರಂತರ ಕಾರ್ಯಪ್ರವೃತವಾಗಿದ್ದು, ಈ ನಿಟ್ಟಿನಲ್ಲಿ ನಾಗರಿಕರ ಸಹಕಾರ, ಬೆಂಬಲ ಕೂಡ ಅತ್ಯಗತ್ಯ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ, ನಾವೆಲ್ಲರೂ ಒಗ್ಗಟ್ಟಿನಿಂದ ಕೊರೊನಾ ಹಿಮ್ಮೆಟ್ಟಿಸೋಣ ಎಂದು ಸಿಎಂ ಯಡಿಯೂರಪ್ಪ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ : ತೌಕ್ತೆ ಎಫೆಕ್ಟ್: ಹಾನಿಗೊಳಗಾದ ಕರಾವಳಿ ಭಾಗದಲ್ಲಿ ಪರಿಹಾರ ಕಾರ್ಯಾಚರಣೆಗೆ ಸಿಎಂ ಸೂಚನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.