ETV Bharat / state

ಬೆಂಗಳೂರಿನ ಹೋಟೆಲ್​ನಲ್ಲಿ ಸಿಲಿಂಡರ್ ಗ್ಯಾಸ್ ಪೈಪ್ ಸ್ಫೋಟ: 10 ಮಂದಿಗೆ ಗಾಯ

ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಸಿಲಿಂಡರ್ ಗ್ಯಾಸ್ ಪೈಪ್ ಸ್ಫೋಟಗೊಂಡಿದ್ದು, ​ಹೋಟೆಲ್​ನಲ್ಲಿದ್ದ ಹತ್ತು ಮಂದಿ ಸಿಬ್ಬಂದಿಗೆ ಗಾಯಗಳಾಗಿವೆ.

Cylinder blast in hotel
ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಸಿಲಿಂಡರ್ ಸ್ಫೋಟ
author img

By

Published : Mar 5, 2022, 6:07 PM IST

Updated : Mar 5, 2022, 8:46 PM IST

ಬೆಂಗಳೂರು: ಇಲ್ಲಿನ ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೋಟೆಲ್​​ನಲ್ಲಿ ಸಿಲಿಂಡರ್ ಗ್ಯಾಸ್ ಪೈಪ್ ಸ್ಫೋಟಗೊಂಡಿದ್ದು, ಘಟನೆ‌ಯಲ್ಲಿ ಹೋಟೆಲ್​ನಲ್ಲಿದ್ದ ಹತ್ತು ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ.

ಗ್ಯಾಸ್ ಸೋರಿಕೆಯಿಂದ ಹೋಟೆಲ್​ನ ಅಡುಗೆ ಕೋಣೆಯಲ್ಲಿನ ಸಿಲಿಂಡರ್ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಹೊಟೆಲ್ ಸಿಬ್ಬಂದಿ ನರಸಿಂಹ (50), ಜಗ್ಗ (52), ಗಂಗಾಧರ (38), ಕೃಷ್ಣ (23), ಕೃಷ್ಣ (54) ಸೇರಿದಂತೆ 10 ಜನರಿಗೆ ಗಾಯವಾಗಿದೆ.

ಬೆಂಗಳೂರಿನ ಹೋಟೆಲ್​ನಲ್ಲಿ ಸಿಲಿಂಡರ್ ಗ್ಯಾಸ್ ಪೈಪ್ ಸ್ಫೋಟ

ಸಿಲಿಂಡರ್​ ಸಂಪರ್ಕ ಒದಗಿಸಲಾಗಿದ ಪೈಪ್​ನಿಂದ ಗ್ಯಾಸ್ ಲೀಕ್ ಆಗುತ್ತಿದ್ದಂತೆ ಗ್ರಾಹಕರನ್ನ ಹೊಟೆಲ್ ಸಿಬ್ಬಂದಿ ಹೊರಗಡೆ ಕಳಿಸಿದ್ದರು. ಪರಿಶೀಲಿಸುವಷ್ಟರಲ್ಲೇ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಸದ್ಯ ಗಾಯಗೊಂಡವರನ್ನು ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ. ಗಾಯಗೊಂಡವರಲ್ಲಿ ಮೂವರು ಉತ್ತರ ಭಾರತ ಮೂಲದವರಾಗಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ 50 ಲಕ್ಷ ಮೌಲ್ಯದ ಡ್ರಗ್ಸ್​ ಸಂಗ್ರಹಿಸಿಟ್ಟಿದ್ದ ಇಬ್ಬರು ನೈಜೀರಿಯನ್ಸ್ ಬಂಧನ

ಪೈಪ್ ಸ್ಫೋಟಗೊಂಡಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಸಿಬ್ಬಂದಿ ಪಾರಾಗಿದ್ದಾರೆ. ಅಡುಗೆ ಕೋಣೆಯಲ್ಲಿ ಇನ್ನೂ 6 ಸಿಲಿಂಡರ್ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಕಾರ್ಯಾಚರಣೆ ನಡೆಸಿದ್ದಾರೆ.

Last Updated : Mar 5, 2022, 8:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.