ETV Bharat / state

ಶಾಹೀನ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಅವಾಂತರ - heavy rain in k r pura

ಬೆಂಗಳೂರಿನ ಹಲವೆಡೆ ನಿನ್ನೆ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಕೆ.ಆರ್.ಪುರ, ಮಹದೇವಪುರ, ಹೊಸಕೋಟೆ, ದಾಸರಹಳ್ಳಿ, ಮಹದೇವಪುರ ಸೇರಿದಂತೆ ವಿವಿಧೆಡೆ ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.

heavy rain
ಶಾಹೀನ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಅವಾಂತರ
author img

By

Published : Oct 4, 2021, 6:42 AM IST

Updated : Oct 4, 2021, 2:26 PM IST

ಬೆಂಗಳೂರು: ಶಾಹೀನ್ ಚಂಡಮಾರುತದ ಪರಿಣಾಮ ನಿನ್ನೆ ಮಧ್ಯಾಹ್ನದಿಂದ ಆರಂಭವಾದ ಮಳೆ ರಾತ್ರಿ ಪೂರ್ತಿ ಸುರಿದಿದೆ. ಕೆ.ಆರ್.ಪುರ, ಮಹದೇವಪುರ, ಹೊಸಕೋಟೆ ಸೇರಿದಂತೆ ಹಲವೆಡೆ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯಗಳಲ್ಲಿ ಅತಿ ಹೆಚ್ಚು ಹಾನಿಯಾಗಿದೆ.

ಮಳೆ ಪ್ರಮಾಣ:

- ಜ್ಞಾನ ಭಾರತಿ - 98 ಮಿ ಮೀ

- ನಾಗರಬಾವಿ - 91. ಮಿ ಮೀ

- ಹಂಪಿನಗರ - 90 ಮಿ ಮೀ

- ನಂದಿನಿ ಲೇಔಟ್ - 78 ಮಿ ಮೀ

- ಹೆಗ್ಗನಹಳ್ಳಿ - 67.5 ಮಿ ಮೀ

- ಮಾರುತಿ ಮಂದಿರ - 64.5 ಮಿ ಮೀ

- ವಿವಿಪುರಂ - 58.5 ಮಿ ಮೀ

- ರಾಜರಾಜೇಶ್ವರಿ ನಗರ - 53.5. ಮಿ ಮೀ

- ದಯಾನಂದ ನಗರ - 48.5 ಮಿ ಮೀ

ಕೆ.ಆರ್.ಪುರದಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು

ಮಳೆ ಹಾನಿ:

ಕೆ.ಆರ್.ಪುರದ ರಾಮಮೂರ್ತಿ ನಗರ, ಹೊರಮಾವು, ಮಹದೇವಪುರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹೊಯ್ಸಳ ನಗರದಲ್ಲಿ ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಳ್ಳದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್​​ಆರ್ ನಗರ ಐಡಿಯಲ್ ಲೇಔಟ್​ನಲ್ಲಿ 15 ಮನೆಗಳಿಗೆ ನೀರು ನುಗ್ಗಿರುವ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ‌ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ರಸ್ತೆಗಳಲ್ಲಿ ನೀರು‌ ನಿಂತಿದ್ದು, 5 ಮರಗಳು ಧರೆಗುರುಳಿವೆ. ಪೂರ್ವ ವಲಯದಲ್ಲಿ 4 ಮರ ಬಿದ್ದಿದ್ದು, 7 ಮನೆಗಳಿಗೆ ನೀರು ತುಂಬಿ ಹಾನಿಯಾಗಿದೆ. ಪಶ್ಚಿಮ ವಲಯದಲ್ಲಿ 10 ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಹಾಕಲಾಗಿದೆ.‌ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ 2 ಮರ ಬಿದ್ದಿವೆ. ದಕ್ಷಿಣ ವಲಯದಲ್ಲಿ 2 ಮರ ಧರೆಗುರುಳಿವೆ.

ದಾಸರಹಳ್ಳಿಯಲ್ಲಿ 5 ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ನಾಗರಬಾವಿ ಪ್ರದೇಶದಲ್ಲೂ ಮಳೆ ನೀರು ನಿಂತಿದೆ. ಮಹದೇವಪುರದಲ್ಲೂ ಮನೆಗಳಿಗೆ ನೀರು ನುಗ್ಗಿದೆ. ರಮೇಶ್‌ ನಗರದಲ್ಲಿ 10 ಅಡಿ ಕಾಂಪೌಂಡ್ ಗೋಡೆ ಕುಸಿತವಾಗಿ ಕಾರುಗಳು ಜಖಂ ಆಗಿದ್ದು, ಎಇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಯಲಹಂಕ ಹಾಗೂ ಬೊಮ್ಮನಹಳ್ಳಿಯಲ್ಲಿ ಮಳೆಯಿಂದ ಯಾವುದೇ ಹಾನಿ ವರದಿಯಾಗಿಲ್ಲ. ಅಲ್ಲದೆ ನಗರದ ಯಾವ ಪ್ರದೇಶದಲ್ಲೂ ಕೂಡ ಮಳೆಯಿಂದ ಪ್ರಾಣ ಹಾನಿ, ಗಾಯಗೊಂಡ ಬಗ್ಗೆ ವರದಿಯಾಗಿಲ್ಲ.

ಮಲ್ಲತ್ತಹಳ್ಳಿ ಪ್ರದೇಶವು ನೀರಿನಿಂದ ಕೆರೆಯಂತಾಗಿದ್ದು, ರಾಜಕಾಲುವೆ ನೀರು ಮನೆಗಳೊಳಗೆ ತುಂಬಿದೆ. ಶಂಕರಮಠ ವಾರ್ಡ್ ಮತ್ತು ಶಕ್ತಿಗಣಪತಿನಗರ ವಾರ್ಡ್​​​ನ ಜೆ.ಸಿ.ನಗರ ಮತ್ತು ಕಮಲಾನಗರ ಸುತ್ತಮುತ್ತಲ ಪ್ರದೇಶದ ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ ಮತ್ತು ವಾಹನಗಳು ನೀರಿನಲ್ಲಿ ಮುಳುಗಿವೆ. ರಾತ್ರಿ ಮನೆ ಹಾನಿಗೊಳಗಾದ ಪ್ರದೇಶಕ್ಕೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಭೇಟಿ ನೀಡಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ, ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 6 ರ ವರೆಗೆ ಮಳೆ:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 6 ರ ತನಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

Last Updated : Oct 4, 2021, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.