ETV Bharat / state

ಸಿಲಿಕಾನ್‌ ಸಿಟಿ ಪೊಲೀಸರಿಗೆ ಸೈಬರ್ ಕ್ರೈಂ ಪ್ರಕರಣಗಳೇ ಸವಾಲು.. ಬೇಧಿಸಲಾಗದ ಕೇಸ್‌ಗಳೆಷ್ಟು ಗೊತ್ತಾ? - Cybercrime cases pending

ನಗರದ ಇನ್​ಫೆಂಟ್ರಿ ರಸ್ತೆ ಬಳಿಯ ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ 17ಸಾವಿರಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣ ದಾಖಲಾಗಿವೆ.

Cybercrime cases created headache to police: CCB team behind criminals
ಪೊಲೀಸರಿಗೆ ತಲೆ ನೋವಾದ ಸೈಬರ್ ಕ್ರೈಂ ಪ್ರಕರಣಗಳು: ವಂಚಕರ ಜಾಡು ಹಿಡಿದ ಸಿಸಿಬಿ ತಂಡ
author img

By

Published : Feb 7, 2020, 6:53 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿವೆ. ಸದ್ಯ ನಗರದ ಇನ್​ಫೆಂಟ್ರಿ ರಸ್ತೆಯ ಬಳಿ ಇರುವ ನಗರ ಪೊಲೀಸ್ ಆಯುಕ್ತ ಕಚೇರಿಯ ಆವರಣದಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ 17 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಆರೋಪಿಗಳ ಪತ್ತೆ ಮಾಡುವುದು ಸೈಬರ್‌ ಕ್ರೈಂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರಿನಲ್ಲಿ ಹೆಚ್ಚಾಗಿ ಆನ್‌ಲೈನ್ ದೋಖಾ, ಒಎಲ್‌ಎಕ್ಸ್ ವಂಚನೆ, ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ವಂಚನೆ, ಒಟಿಪಿ ವಂಚನೆ, ಡಾರ್ಕ್ ವೆಬ್ ಫ್ರಾಡ್, ಉದ್ಯೋಗ ಕೊಡುವುದಾಗಿ ವಂಚನೆ, ಕ್ಯೂಆರ್ ಕೋಡ್ ಕಳುಹಿಸಿ ಅಕೌಂಟ್​ನಿಂದ ಹಣ ಲಪಟಾಯಿಸುವುದು, ಮ್ಯಾಟ್ರಿಮೋನಿಯಲ್ ವಂಚನೆ.. ಹೀಗೆ ಹಲವಾರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ. ಆದರೆ, ಈ ರೀತಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ವಂಚಕರ ಪತ್ತೆಗಾಗಿ ಬಲೆಬೀಸಿರುವ ಸಿಸಿಬಿ: ಆನ್​ಲೈನ್​ ವಂಚಕರು ಅಪರಾಧ ಪ್ರಕರಣಗಳನ್ನು ಬೆಂಗಳೂರಿನಲ್ಲಿಯೇ ನಡೆಸಿ ನಂತರ ಹೊರ ರಾಜ್ಯ, ವಿದೇಶಗಳಿಗೆ ತೆರಳಿ ಅಲ್ಲಿಯೇ ತಲೆಮರೆಸಿಕೊಳ್ತಾರೆ. ಅಷ್ಟೇ ಅಲ್ಲ, ಎಲ್ಲೋ ಮೂಲೆಯಲ್ಲಿ ಕುಳಿತು ವಂಚನೆ ನಡೆಸುತ್ತಾರೆ. ಹೀಗಾಗಿ, ದಾಖಲಾದ ಸಾವಿರಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುತ್ತಿರುವ ಸೈಬರ್ ಇನ್ಸ್​ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಗಿರೀಶ್, ಹಜರೇಶ್ ನೇತೃತ್ವದ ತಂಡ‌ ರಾಜಸ್ಥಾನ, ದೆಹಲಿ ಹೀಗೆ ಹಲವೆಡೆ ತೆರಳಿ ವಂಚಕರಿಗೆ ಬಲೆ ಬೀಸಿದೆ.

ಪತ್ತೆಯಾಗದೆ ಉಳಿದ 17 ಸಾವಿರ ಪ್ರಕರಣಗಳು: ನಗರದ ಸೈಬರ್ ಠಾಣೆಯಲ್ಲಿ ಈವರೆಗೆ ಸುಮಾರು 17 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗದೆ ಹಾಗೆಯೇ ಉಳಿದಿದೆ.‌ ಆದರೆ, ದಿನೇದಿನೆ ಹಣ ಕಳೆದುಕೊಂಡವರ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ತನಿಖೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಿದೆ. ಸೈಬರ್ ಠಾಣೆಯಲ್ಲಿ ಓರ್ವ ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್, 40ಕ್ರೈಂ ಸಿಬ್ಬಂದಿಗಳಿದ್ದಾರೆ.

Intro:ಪೊಲೀಸರಿಗೆ ತಲೆ ನೋವಾದ ಸೈಬರ್ ಕ್ರೈಂ ಪ್ರಕರಣ...
ಸೈಬರ್ ಕ್ರೈಂ ವಂಚಕರ ಜಾಡು ಹಿಡಿದ ಸಿಸಿಬಿ ತಂಡ..

Mojo visval
ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣದ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ.ಸದ್ಯ ನಗರದ ಇನ್ ಫೆಂಟ್ರಿ ರಸ್ತೆಯ ಬಳಿ ಇರುವ ನಗರ ಪೊಲೀಸ್ ಆಯುಕ್ತ ಕಚೇರಿಯ ಆವರಣದಲ್ಲಿರುವ ಸೈಬರ್ ಪೊಲೀಸ್ ಠಾಣೆ ಯಲ್ಲಿ 17 ಸಾವಿರಕ್ಕು ಹೆಚ್ವು ಕೇಸ್ಗಳು ದಾಖಲಾಗಿದ್ದು ಹೀಗಾಗಿ ಸದ್ಯ ಪ್ರಕರಣದ ಆರೋಪಿಗಳ ಪತ್ತೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುವುದು ಸೈಬರ್ ಪೊಲೀಸರು ಅನಿವಾರ್ಯವಾಗಿದೆ

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿ ಆನ್ ಲೈನ್ ದೋಖಾ, ಒಎಎಲ್ ಎಕ್ಸ್ ವಂಚನೆ , ಕ್ರೇಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ವಂಚನೆ, ಒಟಿಪಿ ಫ್ರಾಡ್, ಡಾರ್ಕ್ ವೆಬ್ ಫ್ರಾಡ್, ಉದ್ಯೋಗ ಕೊಡುವುದಾಗಿ ವಂಚನೆ, ಕ್ಯೂ ಆರ್ ಕೋಡ್ ಕಳುಹಿಸಿ ಅಕೌಂಟ್ನಿಂದ ಹಣ ಲಪಾಟಯಿಸುವುದು, ಮ್ಯಾಟ್ರಿಮೋನಿಯಲ್ ವಂಚನೆ, ಹೀಗೆ ಹಲವಾರು ಪ್ರಕರಣಗಳ ಸಂಬಂಧ ಪಟ್ಟಂತೆ ಸೈಬರ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಆದರೆ ಎಫ್ಐ ಆರ್ ದಾಖಲಾದ ಹಾಗೆ ಕೆಲವೊಂದು ಪ್ರಕರಣಗಳನ್ನ ಪತ್ತೆ ಹಚ್ಚೋದಕ್ಕೆ ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊರ ರಾಜ್ಯದಲ್ಕಿ ವಂಚಕರ ಪತ್ತೆಗಾಗಿ ಬಲೆಬೀಸಿರುವ ಸಿಸಿಬಿ.;-

ಆನ್ಲೈನ್ ವಂಚಕರು ಎಲ್ಲಾ ಅಪರಾಧ ಪ್ರಕರಣಗಳನ್ನ ಸಿಲಿಕಾನ್ ಸಿಟಿಯಲ್ಲಿ ನಡೆಸಿ ನಂತ್ರ ಹೊರ ರಾಜ್ಯ, ವಿದೆಶಗಳಿಗೆ ತೆರಳಿ ಅಲ್ಲೆ ತಲೆಮರೆಸಿಕೊಳ್ತಾರೆ. ಅಷ್ಟು ಮಾತ್ರವಲ್ಲದೇ ದೇಶದ ಕೆಲ ಮೂಳೆ ಮೂಳೆಗಳಲ್ಲಿ ಕೂತು ತಮ್ಮ ಫ್ರಾಡ್ ಕೃತ್ಯ ನಡೆಸ್ತಾರೆ. ಹೀಗಾಗಿ ಸಾವಿರಕ್ಕು ಹೆಚ್ಚು ದಾಖಲಾದ ಪ್ರಕರಣಗಳ ತನೀಕೆ ನಡೆಸುತ್ತಿರುವ ಸೈಬರ್ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಗಿರೀಶ್, ಹಜರೇಶ್ ನೇತೃತ್ವದ ತಂಡ‌ರಾಜಸ್ಥಾನ, ದೆಹಲಿ ಹೀಗೆ ಹಲವೆಡೆ ತೆರಳಿ ಶೋಧ ಮುಂದುವರೆಸಿದ್ದಾರೆ.

ಪತ್ತೆಯಾಗದೇ ಉಳಿದ 17 ಸಾವಿರ ಪ್ರಕರಣ..

ನಗರದ ಸೈಬರ್ ಠಾಣೆಯಲ್ಲಿ ಇಲ್ಲಿಯವರೆಗೆ ಸುಮಾರು 17_ಸಾವಿರ ಪ್ರಕರಣಗಳು ಪತ್ತೆಯಾಗದೆ ಹಾಗೆ ಉಳಿದಿದೆ.‌ ಆದರೆ ದಿನೇ ದಿನೇ ಹಣ ಕಳೆದುಕೊಂಡವರ ಸಂಖ್ಯೆ ಜಾಸ್ತಿಯಾಗಿದ್ದು ತನೀಕೆ ನಡೆಸಲು ಸಿಬ್ಬಂದಿಗಳ ಕೊರತೆ ಎದುರಾಗಿದೆ. ಸೈಬರ್ ಠಾಣೆಯಲ್ಲಿ ಓರ್ವ ಇನ್ಸ್ಪೆಕ್ಟರ್ , ಸಬ್ ಇನ್ಸ್ಪೆಕ್ಟರ್, ನಲವತ್ತು ಕ್ರೈಂ ಸಿಬ್ಬಂದಿಗಳು ಇದ್ದಾರೆ. ಸದ್ಯ ಇವರನ್ನೆ ಇಟ್ಟುಕೊಂಡು ತನೀಕೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸದ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೆಶದಂತೆ ಸೈಬರ್ ಅಪರಾಧ ಪ್ರಕರಣಗಳು ನಡೆದರೆ ಸದ್ಯ ಸೈಬರ್ ಠಾಣೆಯಲ್ಲಿ ದೂರು ನೀಡಬೆಕೇಂದಿಲ್ಲ. ಯಾಕಂದ್ರೆ ಕೆಸ್ಗಳು ಫೆಂಡಿಗ್ ಇರುವ ಕಾರಣ ಸ್ಥಳೀಯ ಠಾಣೆಯಲ್ಲಿ ದೂರು ಸಲ್ಲಿಸಲು ಸೂಚಿಸಿದ್ದಾರೆ.

ಸದ್ಯ ಸೈಬರ್ ಪೊಲೀಸರು ಆರೋಪಿಗಳ ಜಾಡು ಹಿಡಿದು ತನೀಕೆ ಮುಂದುವರೆಸಿದ್ದಾರೆ

Body:KN_BNG_07_CYBER_7204498Conclusion:KN_BNG_07_CYBER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.