ETV Bharat / state

ನೀವೂ ವರ್ಕ್ ಫ್ರಂ ಹೋಂ ಮಾಡ್ತೀರಾ.. ನೀವು ಬಳಸುತ್ತಿರುವ ವೈಫೈ ಸೇಫ್ ಅಲ್ಲ..

ಸೈಬರ್ ಕ್ರೈಮ್‌ ತಡೆಗೆ ಪೊಲೀಸ್ ಇಲಾಖೆ ಯೋಜನೆ ರೂಪಿಸುತ್ತಿದೆ. ಆದ್ರೆ, ಸದ್ಯಕ್ಕೆ ಇದಕ್ಕೆ ಪರಿಹಾರ ಅಂದರೆ ವೈಫೈ ಕನೆಕ್ಟ್ ಮಾಡುವುದಕ್ಕಿಂತ ಮೊಬೈಲ್ ಡಾಟಾ ಬಳಸಿ ಕೆಲಸ ನಿರ್ವಹಿಸುವುದು ಸೂಕ್ತ ಅಂತಾರೆ ತಜ್ಞರು..

author img

By

Published : Nov 8, 2020, 11:45 AM IST

Banglore
ವೈಫೈ ಹ್ಯಾಕ್​ ಮಾಡುತ್ತಿರುವ ಸೈಬರ್​ ಕಳ್ಳರು..

ಬೆಂಗಳೂರು : ಇಷ್ಟು ದಿನ ಡೆಬಿಟ್ ಕಾರ್ಡ್, ಒಎಲ್ ಎಕ್ಸ್, ಒಟಿಪಿ, ಮ್ಯಾಟ್ರಿಮೊನಿಯಲ್ ಹೀಗೆ ಹಲವು ರೀತಿಯ ಮೂಲಕ ಸೈಬರ್ ಖದೀಮರು ಮೋಸ ಮಾಡೋದನ್ನ ನೋಡ್ತಿದ್ವಿ. ಆದ್ರೆ, ಇದೀಗ ವರ್ಕ್ ಫ್ರಂ ಹೋಂ ಮಾಡುತ್ತಿರುವವರ ನೆಟ್ವರ್ಕ್ ಮೇಲೂ ಸೈಬರ್ ಹ್ಯಾಕರ್ಸ್​ಗಳ ಕಣ್ಣು ಬಿದ್ದಿದೆ. ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಒಂದೊಂದೇ ಪ್ರಕರಣ ದಾಖಲಾಗ್ತಿವೆ.

ಲಾಕ್​ಡೌನ್​ ಪರಿಣಾಮ ಈಗಲೂ ಹಲವಾರು ಮಂದಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೂಡ ಕೆಲ ಖಾಸಗಿ ಕಂಪನಿಗಳು ತಮ್ಮ ಎಲ್ಲಾ ಕೆಲಸಗಾರರಿಗೆ ವರ್ಕ್ ಫ್ರಂ ಹೋಮ್ ಮುಂದುವರೆಸಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಸೈಬರ್ ಹ್ಯಾಕರ್ಸ್‌ಗಳು, ಡಾಟಾ ಹ್ಯಾಕ್ ಮಾಡೋಕೆ ಮುಂದಾಗಿದ್ದಾರೆ. ವೈಫೈ ನೆಟ್ವರ್ಕ್ ಹ್ಯಾಕ್ ಮಾಡುವ ಮೂಲಕ ಅವರ ಡಾಟಾ ಅಂದರೆ ಅಕೌಂಟ್ ಮಾಹಿತಿ ಪಡೆದು ಹಣ ದೋಚುತ್ತಿದ್ದಾರೆ.

ವರ್ಕ್ ಫ್ರಂ ಹೋಮ್ ಸೈಬರ್ ಹ್ಯಾಕರ್ಸ್​ಗೆ ಅಡ್ವಾಂಟೇಜ್​ ಹೇಗೆ? : ಸಾಮಾನ್ಯವಾಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ರಿಸ್ಟ್ರಿಕ್ಟೆಟ್ ಹಾಗೂ ಸೆಕ್ಯೂರ್ಡ್ ವೈಫೈ ಇರುತ್ತೆ. ಹಾಗೂ ಸೈಬರ್ ಸೆಕ್ಯೂರಿಟಿ ಫಯರ್ ವಾಲ್ ಇರುತ್ತೆ. ಆದ್ರೆ, ಮನೆಯಲ್ಲಿ ಕೂತು ಕೆಲಸ ಮಾಡುವಾಗ ಕಂಪನಿಯಲ್ಲಿದ್ದಷ್ಟು ಸೆಕ್ಯೂರಿಟಿ ಇರಲ್ಲ. ವರ್ಕ್ ಮಾಡುವಾಗ ಎಷ್ಟು ನೆಟ್ವರ್ಕ್ ಬೇಕು ಅಷ್ಟಿರುತ್ತೆ.

ಅದಕ್ಕೆ ಹೈ ಸೆಕ್ಯೂರಿಟಿ ಇರಲ್ಲ. ಇದನ್ನೇ ಸೈಬರ್ ಹ್ಯಾಕರ್ಸ್ ಎನ್‌ಕ್ಯಾಶ್ ಮಾಡಿಕೊಂಡು ನೆಟ್ವರ್ಕ್ ಹ್ಯಾಕ್ ಮಾಡ್ತಾರೆ. ಕೆಲ ಸೈಬರ್ ಹ್ಯಾಕರ್ಸ್ಗಳು ಈ ನೆಟ್ವರ್ಕ್ ಥ್ರೂ ಜನ ಏನೆಲ್ಲಾ ಸರ್ಚ್ ಮಾಡುತ್ತಿದ್ದಾರೆ ಎನ್ನುವುದರ ಮಾಹಿತಿ ಅಂದರೆ ಆನ್ಲೈನ್ ಶಾಪಿಂಗ್, ಆನ್ಲೈನ್ ಟ್ರಾನ್ಸಾಕ್ಷನ್ ಇದನ್ನೆಲ್ಲಾ ಗಮನ ವಹಿಸಿ ಹಣ ದೋಚುತ್ತಿದ್ದಾರೆ.

ಸದ್ಯ ಈ ರೀತಿ ಕೇಸ್​ಗಳು ನಗರದಲ್ಲಿ ಜಾಸ್ತಿಯಾದ ಹಿನ್ನೆಲೆ ಗೃಹ ಇಲಾಖೆ ಸೈಬರ್ ತಜ್ಞರ ಜೊತೆ ಮಾಹಿತಿ ಕಲೆ ಹಾಕಿದ್ದು, ಈ ರೀತಿ ಯಾಕೆ ಆಗ್ತಿದೆ? ಇದಕ್ಕೆ ಪರಿಹಾರ ಏನು ಎಂದು ಕೇಳಿದೆ. ಯಾಕೆಂದರೆ, ಸೈಬರ್ ಕ್ರೈಮ್‌ ತಡೆಗೆ ಪೊಲೀಸ್ ಇಲಾಖೆ ಯೋಜನೆ ರೂಪಿಸುತ್ತಿದೆ. ಆದ್ರೆ, ಸದ್ಯಕ್ಕೆ ಇದಕ್ಕೆ ಪರಿಹಾರ ಅಂದರೆ ವೈಫೈ ಕನೆಕ್ಟ್ ಮಾಡುವುದಕ್ಕಿಂತ ಮೊಬೈಲ್ ಡಾಟಾ ಬಳಸಿ ಕೆಲಸ ನಿರ್ವಹಿಸುವುದು ಸೂಕ್ತ ಅಂತಾರೆ ತಜ್ಞರು.

ಡೆಬಿಟ್ ಕಾರ್ಡ್, ಒಎಲ್ಎಕ್ಸ್ ಇನ್ನಿತರೆ ಮೂಲಕ ಹಣ ದೋಚುತ್ತಿದ್ದ ಸೈಬರ್ ಹ್ಯಾಕರ್ಸ್‌ಗಳು ಈಗ ವರ್ಕ್ ಫ್ರಂ ಹೋಂ ಮಾಡುವವರನ್ನ ಟಾರ್ಗೇಟ್ ಮಾಡಿದ್ದು, ವರ್ಕ್ ಫ್ರಂ ಹೋಂ ಮಾಡುವಾಗ ಸುರಕ್ಷತೆಯಿಂದ ಕೆಲಸ ನಿರ್ವಹಿಸುವುದು ಸೂಕ್ತ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.