ETV Bharat / state

Cyber frauds: ಮುಂಬೈ ಪೊಲೀಸರ ಸೋಗಿನಲ್ಲಿ‌ ಕರೆ: ₹33 ಲಕ್ಷ ಕಳೆದುಕೊಂಡ ಸಾಫ್ಟ್​ವೇರ್ ಇಂಜಿನಿಯರ್

ಸೈಬರ್ ವಂಚಕರ ಮಾತಿಗೆ ಹೆದರಿ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್​ 33 ಲಕ್ಷ ಹಣ ಕಳೆದುಕೊಂಡಿದ್ದಾರೆ.

Cyber frauds
Cyber frauds
author img

By

Published : Jul 2, 2023, 9:47 AM IST

ಬೆಂಗಳೂರು: ಮುಂಬೈನಿಂದ ತೈವಾನ್‌ ದೇಶಕ್ಕೆ ಕೆಲವು ವಸ್ತುಗಳ ಅಕ್ರಮ ಪೂರೈಕೆಗೆ ಪಾಸ್‌ಪೋರ್ಟ್, ಆಧಾರ್ ಬಳಕೆಯಾಗಿದೆ ಎಂದು ಮುಂಬೈ ಪೊಲೀಸ್ ಡಿಸಿಪಿ ಸೋಗಿನಲ್ಲಿ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್‌ ಒಬ್ಬರಿಗೆ ಸೈಬರ್ ವಂಚಕರು ಕರೆ ಮಾಡಿ, 33.24 ಲಕ್ಷ ರೂ. ಎಗರಿಸಿರುವ ಘಟನೆ ವರದಿಯಾಗಿದೆ.

ನಾಗನಾಥಪುರದ ನಿವಾಸಿ ದಿನೇಶ್ ಪಾಟಕ್ (39) ವಂಚನೆಗೊಳಗಾದ ಸಾಫ್ಟ್​ವೇರ್ ಇಂಜಿನಿಯರ್‌. ಜೂನ್ 27ರಂದು ಘಟನೆ ನಡೆದಿದೆ. ದಿನೇಶ್ ಪಾಟಕ್​ಗೆ ಅಪರಿಚಿತ ನಂಬರ್‌ನಿಂದ ಜೂನ್ 27 ರಂದು ಕರೆಗಳು ಬಂದಿವೆ. ಈ ವೇಳೆ ತಾವು ಫೆಡೆಕ್ಸ್‌ ಕೊರಿಯರ್‌ನವರು ಎಂದು ಪರಿಚಯಿಸಿಕೊಂಡ ವಂಚಕರು, "ಮುಂಬೈನಿಂದ ತೈವಾನ್‌ಗೆ ಅಕ್ರಮವಾಗಿ ಎಂಡಿಎಂ, ಲ್ಯಾಪ್‌ಟಾಪ್, ಬಟ್ಟೆಗಳ ಪಾರ್ಸೆಲ್‌ ರವಾನಿಸಲು ನಿಮ್ಮ ಪಾಸ್​ಪೋರ್ಟ್ ಮತ್ತು ಆಧಾರ್ ಬಳಕೆಯಾಗಿದೆ" ಎಂದು ನಂಬಿಸಿದ್ದರು. ಬಳಿಕ ನಿಮ್ಮ ಕರೆಯನ್ನು ಮುಂಬೈ ಪೊಲೀಸರಿಗೆ ವರ್ಗಾವಣೆ ಮಾಡುವುದಾಗಿ ತಿಳಿಸಿ ಅಪರಿಚಿತ ನಂಬರ್‌ಗೆ ಕರೆ ವರ್ಗಾಯಿಸಿದ್ದರು. ವಂಚಕರ ಮಾತನ್ನು ನಂಬಿ ಇವರು ಮಾತು ಮುಂದುವರಿಸಿದ್ದರು.

ಮುಂಬೈ ಡಿಸಿಪಿ ಎಂದು ಹೇಳಿ ಮೋಸ: ಕರೆಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತಾವು ಮುಂಬೈ ಪೊಲೀಸ್ ಡಿಸಿಪಿ ಎಂದು ಹೇಳಿಕೊಂಡು ಮಾತನಾಡಿದ್ದ. ನಿಮ್ಮ ಹೆಸರಲ್ಲಿ ಅಕ್ರಮವಾಗಿ ವಸ್ತುಗಳು ರವಾನೆಯಾಗಿವೆ. ಆದ್ದರಿಂದ ನಿಮ್ಮ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗುತ್ತದೆ ಎಂದು ಬೆದರಿಸಿ ಮೊಬೈಲ್‌ನಲ್ಲಿ ಸ್ಕೈಪ್‌ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದರು. ಇವರ ಮಾತು ಕೇಳಿ ಹೆದರಿದ ಟೆಕ್ಕಿ, ಸ್ಕೈಪ್ ಡೌನ್‌ಲೋಡ್ ಮಾಡಿದರು. ಬಳಿಕ ಸ್ಕೈಪ್‌ನಲ್ಲಿ‌ ಕರೆ ಮಾಡಿದ ವಂಚಕರು, ವೆರಿಫಿಕೇಶನ್ ಮಾಡಬೇಕಾಗಿದೆ ಎಂದು ಹೇಳಿದ್ದ. ನಿಜವೆಂದು ನಂಬಿದ ದಿನೇಶ್ ಪಾಟಕ್, ವೆರಿಫಿಕೇಷನ್ ಎಂದು ತಮ್ಮ ಆಧಾರ್‌ ಕಾರ್ಡ್‌ ನಂಬರ್, ಫೋಟೊ, ಬ್ಯಾಂಕ್ ದಾಖಲೆಗಳನ್ನು ನೀಡಿದ್ದರು.

ವಂಚಕರ ಮಾತು ನಂಬಿ ಕೆಟ್ಟ ಸಾಫ್ಟ್​ವೇರ್ ಇಂಜಿನಿಯರ್: ಬಳಿಕ ವಂಚಕರು ತಾವು ಸೂಚಿಸುವ ಖಾತೆಗೆ ಹಣ ಹಾಕುವಂತೆ ತಿಳಿಸಿ, ನೀವು ಜಮೆ ಮಾಡುವ ಹಣ ನಿಮ್ಮ ಖಾತೆಗೆ ಮರುಪಾವತಿಸುವುದಾಗಿ ಹೇಳಿ ಹಂತ-ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 33.24 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ. ನಂತರ ಸಂಪರ್ಕಕ್ಕೆ ಸಿಗದೇ, ಹಣವನ್ನೂ ಮರುಪಾವತಿಸಿದೇ ವಂಚಿಸಿದ್ದಾರೆ. ಪರಿಶೀಲಿಸಿದಾಗ ಇದು ಸೈಬರ್ ವಂಚಕರ ಕೈ ಚಳಕ ಎಂಬುದು ಗೊತ್ತಾಗಿದ್ದು ಸದ್ಯ ದಿನೇಶ್ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೈಬರ್ ವಂಚನೆ ಬಗ್ಗೆ ಜನರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಕೂಡ ವಂಚನೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಸೈಬರ್ ಕಳ್ಳರು ಅದು ಹೇಗಾದರೂ ಮಾಡಿ ಜನರ ಕಣ್ಣಿಗೆ ಮಣ್ಣೆರಚಿ, ಕೃತ್ಯ ಸಾಧಿಸುತ್ತಿದ್ದಾರೆ. ಅನಕ್ಷರಸ್ಥರಷ್ಟೇ ಅಲ್ಲ, ವಿದ್ಯಾವಂತರು ಕೂಡ ವಂಚಕರ ಬಲೆಗೆ ಬೀಳುತ್ತಿದ್ದಾರೆ.

ಇದನ್ನೂ ಓದಿ: Cyber attack: ಪಾಕಿಸ್ತಾನಿ ಹ್ಯಾಕರ್​ಗಳಿಂದ ಸೈಬರ್ ದಾಳಿ: ಭಾರತೀಯ ಸೇನೆಯ ಕಂಪ್ಯೂಟರ್​ಗಳೇ ಟಾರ್ಗೆಟ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.