ಬೆಂಗಳೂರು: ಸೈಬರ್ ಖದೀಮರ ಗ್ಯಾಂಗ್ ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆಗೆ ಟೆಕ್ಕಿಯನ್ನು ಆಹ್ವಾನಿಸಿ ಬಳಿಕ ವಂಚಿಸಿರುವ ಘಟನೆ ನಗರದಲ್ಲಿ ನಡೆಸಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಲಾಕ್ಡೌನ್ನಿಂದ ಕೆಲಸ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಆನ್ಲೈನ್ ಮೂಲಕ ಉದ್ಯೋಗ ಹುಡುಕಲು ಆರಂಭಿಸಿದ್ದಾನೆ. ಈ ವೇಳೆ, ವೆಬ್ಸೈಟ್ವೊಂದಕ್ಕೆ ಲಾಗಿನ್ ಆಗಿ ಮೊಬೈಲ್ ನಂಬರ್ ನಮೂದಿಸಿದ್ದಾನೆ. ಬಳಿಕ ವೆಬ್ಸೈಟ್ನಲ್ಲಿದ್ದ ನಂಬರ್ಗೆ ಕರೆ ಮಾಡಿ ಮಾತನಾಡಿದ್ದಾನೆ. ಈ ವೇಳೆ, ಟೆಕ್ಕಿ ಜೊತೆ ಮಾತನಾಡಿದ ಸೈಬರ್ ಖದೀಮರು, ಅಪರಿಚಿತ ಮಹಿಳೆಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಕೆಲಸ ಇದೆ. ಈ ಕೆಲಸಕ್ಕೆ ಒಪ್ಪಿದರೆ ಕೈ ತುಂಬಾ ಹಣ ಕೊಡುವುದಾಗಿ ತಿಳಿಸಿದ್ದಾರೆ.
ಇನ್ನು ಈ ಕೆಲಸಕ್ಕೆ 1,009 ರೂ. ರಿಜಿಸ್ಟರ್ ಶುಲ್ಕ ಪಾವತಿಸಬೇಕು. ಬಳಿಕ ಕಂಪನಿಯ ಸದಸ್ಯತ್ವಕ್ಕಾಗಿ 12,500 ರೂ., ಸ್ಟೇಟಸ್ ಕನ್ಫರ್ಮೇಶನ್ 70 ಸಾವಿರ ಸೇರಿ 83, 500 ಹಣ ಆನ್ಲೈನ್ ಮೂಲಕ ಪಾವತಿಸಬೇಕು ಎಂದು ಖದೀಮರು ತಿಳಿಸಿದ್ದು, ಟೆಕ್ಕಿ ಅವರ ಮಾತಿನಂತೆ ಹಣವನ್ನು ಪಾವತಿಸಿದ್ದಾನೆ. ಹಣ ಸಿಕ್ಕ ಬಳಿಕ ಖದೀಮರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.
ಸದ್ಯ ವಂಚನೆಗೊಳಗಾದ ಟೆಕ್ಕಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸೈಬರ್ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.