ETV Bharat / state

CWRC ಸಮಿತಿಯೂ ತಮಿಳುನಾಡು ನೀರಿನ ಬೇಡಿಕೆಯನ್ನು ತಿರಸ್ಕಾರ ಮಾಡಿದ್ದು ನನಗೆ ಸಂತೋಷ ತಂದಿದೆ: ಡಿಸಿಎಂ ಡಿ ಕೆ ಶಿವಕುಮಾರ್

ತಮಿಳುನಾಡು ಸರ್ಕಾರ ಹನ್ನೆರಡು ಸಾವಿರ ಕೂಸೆಕ್​ ನೀರು ಬಿಡುಗಡೆಗೆ ಮನವಿ ಮಾಡಿತ್ತು. 12 ಸಾವಿರ ಕ್ಯೂಸೆಕ್​ ಬಿಡಲು ಆಗಲ್ಲವೆಂದು ಸಮಿತಿ ಆದೇಶ ಕೊಟ್ಟಿದೆ. ಸಾಮಾನ್ಯವಾಗಿ ಎರಡು ಸಾವಿರ ಕ್ಯೂಸೆಕ್​ ಹೋಗುತ್ತಿರುತ್ತದೆ. ಇನ್ನೊಂದು ಸಾವಿರ ಬಿಡುಬೇಕಾಗುತ್ತದೆ ಅಷ್ಟೇ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

DCM D K Shivakumar spoke to the media.
ಡಿಸಿಎಂ ಡಿ ಕೆ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Sep 26, 2023, 6:19 PM IST

ಡಿಸಿಎಂ ಡಿ ಕೆ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡು ಬೇಡಿಕೆಯನ್ನು ತಿರಸ್ಕಾರ ಮಾಡಿದ್ದು, ನನಗೆ ಸಂತೋಷ ತಂದಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ತಮಿಳುನಾಡು 12 ಸಾವಿರ ಕ್ಯೂಸೆಕ್ ಕೇಳಿತ್ತು. ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಮಾಮೂಲಿ 2,000 ಕ್ಯೂಸೆಕ್ ಹೋಗ್ತಾ ಇರುತ್ತೆ. ಇನ್ನೊಂದು 1-2 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗುತ್ತದೆ. ಒಳ ಹರಿವು ಚೆನ್ನಾಗಿದೆ. CWRC ತಮಿಳುನಾಡು ಅರ್ಜಿ ತಿರಸ್ಕಾರ ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.

ತಮಿಳುನಾಡು ಸರ್ಕಾರ ಹನ್ನೆರಡು ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಕೇಳಿತ್ತು. 12 ಸಾವಿರ ಕ್ಯೂಸೆಕ್​ ಬಿಡಲು ಆಗಲ್ಲ ಎಂದು ಸಮಿತಿ ಆದೇಶ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎರಡು ಸಾವಿರ ಕ್ಯೂಸೆಕ್​ ಹೋಗುತ್ತಿರುತ್ತದೆ. ಇನ್ನೊಂದು ಸಾವಿರ ಬಿಡುಬೇಕಾಗುತ್ತದೆ ಅಷ್ಟೇ. ಕನಕಪುರ, ಬೆಂಗಳೂರಿನಲ್ಲಿ ಆಗುವ ಮಳೆಗೆ ನೀರು ಹೋಗ್ತಾ ಇರುತ್ತದೆ. ನಿನ್ನೆ, ಮೊನ್ನೆ, ಬೆಳಗ್ಗೆಯಿಂದ ಒಳಹರಿವು ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಮುಂದೆ ಬಂದ್ ಅವಶ್ಯಕತೆ ಇಲ್ಲ: ಪ್ರತಿಭಟನಾಕಾರರು ತಮ್ಮ ನೋವು, ದುಗುಡ ವ್ಯಕ್ತಪಡಿಸಿದ್ದಾರೆ. ಇವತ್ತು ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಇನ್ಮುಂದೆ ಬಂದ್ ಅವಶ್ಯಕತೆ ಇಲ್ಲ. ಕೋರ್ಟ್ ಸಹ ಅನುಮತಿ ಕೊಡುವುದಿಲ್ಲ. ಯಾರೇ ಆಗಲಿ ಪ್ರಾಪರ್ಟಿ ಹಾಳು ಮಾಡುವುದಕ್ಕೆ ಹೋದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೇ ಮಾಡಿದ್ರೂ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು. ಯಾರೇ ಮಾಡಲಿ, ಶಾಸಕರೇ ಮಾಡಲಿ ಕ್ರಮ ಆಗುತ್ತೆ. ಯಾರ್ಯಾರು ಶಾಂತಿಯುತವಾಗಿ ಹೋರಾಟ ಮಾಡಿದ್ದೀರಿ ಅವರಿಗೆ ಅಭಿನಂದನೆಗಳು. ಇವತ್ತು ನಮ್ಮ ಅಧಿಕಾರಿಗಳು ಹೋಗುತ್ತಿದ್ದಾರೆ. ಇನ್ನೊಂದು ಸಭೆಯಿದೆ, ವಾಸ್ತವಾಂಶ ತಿಳಿಸಲಿದ್ದಾರೆ. ನಾವು ನೀವು, ಹೋರಾಟಗಾರರು ಸೇರಿ ಮಳೆಗೆ ಪ್ರಾರ್ಥನೆ ಮಾಡೋಣ. ಭಗವಂತ, ವರುಣಕ್ಕಾಗಿ ಬಳಿ ಪ್ರಾರ್ಥನೆ ಮಾಡೋಣ ಎಂದು ಮನವಿ ಮಾಡಿದರು.

ಮೇಕೆದಾಟು ಇದಕ್ಕೆಲ್ಲಾ ಪರಿಹಾರ:ಇದಕ್ಕೆಲ್ಲ ಮೇಕೆದಾಟು ಪರಿಹಾರವಾಗಿದೆ. ರಾಜ್ಯದ ಜನತೆ ಹಾಗು ತಮಿಳುನಾಡು ಜನತೆಗೆ ಮನದಟ್ಟು ಮಾಡಿಕೊಡಬೇಕಿದೆ. ಕೋರ್ಟ್ ಮೊನ್ನೆ ತನ್ನ ಪ್ರೊಸಿಡಿಂಗ್ಸ್​​​ನಲ್ಲಿ ಹೇಳಿದೆ. ಎಷ್ಟಾದರೂ ಡ್ಯಾಮ್ ಕಟ್ಟಿಕೊಳ್ಳಲಿ, ನಿಮಗೆ 177 ಟಿಎಂಸಿ ನೀರು ಕೊಡಬೇಕು. ಕೊಡ್ತಾರೆ ಯಾಕೆ ಅಡಚಣೆ ಮಾಡ್ತೀರಾ ಎಂದು ಕೋರ್ಟ್ ಹೇಳಿದೆ. ನೀವು ಏನಾದರೂ ಕಟ್ಟಿಕೊಳ್ಳಲಿ, ಅವರು ಏನಾದರೂ ಕಟ್ಟಿಕೊಳ್ಳಲಿ ಅಂತ ಹೇಳಿದೆ ಎಂದರು.

ಮೇಕೆದಾಟು ಇರೋದೆ ತಮಿಳುನಾಡು ಬಾರ್ಡರ್ ನಲ್ಲಿ. ಮೇಕೆದಾಟು ಮಾಡುವುದರಿಂದ ಕಬಿನಿ, ನೇತ್ರಾವತಿ, ಬೆಂಗಳೂರು ಕುಡಿಯುವ ನೀರಿಗೆ ಅನುಕೂಲ ಆಗಲಿದೆ. ಜೊತೆಗೆ ತಮಿಳುನಾಡಿಗೂ ಅನುಕೂಲ ಆಗಲಿದೆ. ಎಷ್ಟು ವಿಳಂಬ ಆಗುತ್ತಾ, ಅಷ್ಟು ರಾಜ್ಯಕ್ಕೆ ತೊಂದರೆ. ಅದಕ್ಕೆ ನಾನು ಕೇಂದ್ರ ಸಚಿವರಿಗೆ, ಸಂಸದರಿಗೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.

ವಿಪಕ್ಷಗಳ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಟೀಕೆ ಮಾಡಬೇಡಿ ಎಂದು ಹೇಳಲು ಆಗುತ್ತಾ?. ವಿಪಕ್ಷಗಳ ಸರ್ವೈವ್ ಆಗಬೇಕಲ್ಲಾ?. ಅದಕ್ಕೆ ಬೇಜಾರು ಮಾಡಿಕೊಳ್ಳುವುದಿಲ್ಲ. ವಿಪಕ್ಷಗಳ ಬಾಯಿ ಮುಚ್ಚಿಸಲು ನಾವು ತಯಾರಿಲ್ಲ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಹಕ್ಕಿದೆ. ನಾನು ಪವರ್​​ನಲ್ಲಿ ಇದ್ದೇನೆ, ಜಲ ಸಂಪನ್ಮೂಲ ಸಚಿವ ಎಂದು ನೀವು ಕೇಳುತ್ತೀರಾ.. ಅಷ್ಟೇ ಎಂದು ತಿಳಿಸಿದರು.

ವಾಟಾಳ್ ನಾಗರಾಜ್ ಆಕ್ರೋಶ: ಮತ್ತೆ ಕರುನಾಡಿಗೆ ಅನ್ಯಾಯ ಕಾವೇರಿ ವಿಚಾರದಲ್ಲಿ ಮೃದು ಧೋರಣೆ ತೋರುತ್ತಿರುವ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಇಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನಿಗಮ ಮಂಡಳಿ ನೀಡಿರುವ ತೀರ್ಪು ಅವೈಜ್ಞಾನಿಕ, ಮತ್ತೆ 18 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿದರು.

ಇದನ್ನೂಓದಿ:ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ.. 18 ದಿನ 3000 ಕ್ಯೂಸೆಕ್​ ನೀರು ಬಿಡಲು CWRC ಶಿಫಾರಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.