ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖರ್ತನಾಕ್ ಕಳ್ಳರು ಕೈಚಳಕ ತೋರಿಸಿದ್ದಾರೆ. ಆಡಿಟರ್ ಆಫೀಸ್ಗಳನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ದೋಚಿದ್ದಾರೆ.
ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಆಡಿಟರ್ ಕಚೇರಿಯೊಂದರಲ್ಲಿ ಇದೇ ತಿಂಗಳು 13ರಂದು ಮಧ್ಯರಾತ್ರಿ ಹೆಲ್ಮೆಟ್ ಧರಿಸಿ ಬಂದ ಖದೀಮರು ಕಟ್ಟಿಂಗ್ ಪ್ಲೇಯರ್ನಲ್ಲಿ ಸಿಸಿಟಿವಿಯ ವೈರ್ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ.
ಸುಮಾರು 13 ಲಕ್ಷ ನಗದು, ಮೂರು ಲ್ಯಾಪ್ಟಾಪ್ ಹಾಗೂ ಎರಡು ಮೊಬೈಲ್ಗಳನ್ನು ಕದ್ದಿದ್ದಾರೆ. ಕಳ್ಳರ ಕೈಚಳಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದು ನಾಲ್ಕು ದಿನ ಕಳೆದಿದೆ. ಆಡಿಟರ್ ಕಚೇರಿ ಮಾಲೀಕ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.