ಬೆಂಗಳೂರು : ಹಿಂದಿನ ಕೋವಿಡ್ ಮಾರ್ಗಸೂಚಿ ಬೆಳಗ್ಗೆ 5 ಗಂಟೆಗೆ ಮುಕ್ತಾಯಗೊಂಡಿದೆ. ನಿನ್ನೆ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಮೂಲಕ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿತ್ತು. ಈ ಮಾರ್ಗಸೂಚಿ ಮೇ 4ರವರೆಗೆ ಜಾರಿಯಲ್ಲಿರಲಿದೆ. 9 ಗಂಟೆಯಿಂದ ಆರಂಭವಾಗುವ ನೈಟ್ ಕರ್ಫ್ಯೂ ಬೆಳಗ್ಗೆ 6 ಗಂಟೆವರೆಗೆ ಇರಲಿದೆ.
ಈ ವಾರಾಂತ್ಯದಿಂದ ವೀಕೆಂಡ್ ಕರ್ಫ್ಯೂ ಕೂಡ ಜಾರಿಗೆ ಬರಲಿದೆ. ರಾಜ್ಯದಲ್ಲಿ ಕೋವಿಡ್ ಹರಡುವಿಕೆಯ ಸಂಬಂಧ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಿನ್ನೆ ನಡೆಸಲಾಗಿತ್ತು. ಸಭೆ ಮುಕ್ತಾಯದ ಬೆನ್ನಿಗೆ ಸರ್ಕಾರದ ಕಡೆಯಿಂದ ಕಠಿಣ ಮಾರ್ಗಸೂಚಿ ಹೊರಡಿಸಲಾಗಿತ್ತು.
ಈಗಾಗಲೇ ಪೊಲೀಸರಿಗೆ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ಫೈನ್ ಹಾಕಲು ಫ್ರೀ ಹ್ಯಾಂಡ್ ನೀಡಲಾಗಿದೆ. ಟಾರ್ಗೆಟ್ ಕೂಡ ನೀಡಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಈ ಮೊದಲು ನಗರದಲ್ಲಿ ನೈಟ್ ಕರ್ಫ್ಯೂ ರಾತ್ರಿ 10ಕ್ಕೆ ಪ್ರಾರಂಭವಾಗಿ ಬೆಳಗ್ಗೆ 5ಕ್ಕೆ ಮುಕ್ತಾಯಗೊಳ್ಳುತ್ತಿತ್ತು. ಈಗ 9ಕ್ಕೆ ಆರಂಭವಾಗಿ ಬೆಳಗ್ಗೆ 6 ಗಂಟೆಗ ಮುಕ್ತಾಯಗೊಳ್ಳಲಿದೆ.