ETV Bharat / state

ಗೋಡೆ, ಶೆಟರ್​ ಮೇಲೆ ಬರೆದು ವಿಕೃತಿ... ಬೆಂಗಳೂರಲ್ಲಿ ವಿದ್ಯಾರ್ಥಿಗಳಿಬ್ಬರ ಬಂಧನ - ಬೆಂಗಳೂರು ಗೋಡೆಗಳ ವಿರೂಪ ಸುದ್ದಿ

ಬೆಂಗಳೂರಿನ ಅಂಡರ್​ಪಾಸ್​ಗಳ ಗೋಡೆಗಳು, ಅಂಗಡಿಗಳ ಶೆಟರ್​​ಗಳ ಮೇಲೆ ಬರೆಯುವುದು, ಅನಗತ್ಯ ಹಾಗೂ ಅಶ್ಲೀಲ ಚಿತ್ರ ಬಿಡಿಸುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

banglore
ಗೋಡೆ, ಶೆಟರ್​ಗಳ ವಿಕೃತಿವಾಗಿ ಚಿತ್ರ
author img

By

Published : Dec 17, 2019, 2:28 AM IST

ಬೆಂಗಳೂರು: ಅಂಡರ್​ಪಾಸ್​ಗಳ ಗೋಡೆಗಳು, ಅಂಗಡಿಗಳ ಶೆಟರ್​​ಗಳ ಮೇಲೆ ಬರೆಯುವುದು, ಅನಗತ್ಯ ಹಾಗೂ ಅಶ್ಲೀಲ ಚಿತ್ರ ಬಿಡಿಸುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ನಗರ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಬಂಧಿತರು ವಿದ್ಯಾರ್ಥಿಗಳಾಗಿರುವುದರಿಂದ ಭವಿಷ್ಯದ ದೃಷ್ಟಿಯಿಂದ ಅವರ ಬಗ್ಗೆ ಹೆಚ್ಚಿನ‌ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಚೇತನ್ ಸಿಂಗ್ ರಾಥೋಡ್, ನಗರ ಕೇಂದ್ರ ವಿಭಾಗದ ಡಿಸಿಪಿ

ಈ ಬಗ್ಗೆ ಮಾಹಿತಿ ನೀಡಿರುವ ನಗರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ನಗರದ ವಿವಿಧೆಡೆ್ಗಳಲ್ಲಿ ರಾತ್ರಿ ವೇಳೆ ಗೋಡೆಗಳು ಹಾಗೂ ಅಂಗಡಿ ಶೆಟರ್​​ಗಳ‌ ಮೇಲೆ ಬರೆದು ವಿಕೃತಿ‌ ಮೆರೆಯಲಾಗುತ್ತಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಹೀಗೆ ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಬಗ್ಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Body:ಗೋಡೆ, ಶೆಟರ್ ಗಳ ವಿಕೃತಿವಾಗಿ ಚಿತ್ರ ಬಳಸಿ ನಗರದ ಸೌಂದರ್ಯಕ್ಕೆ ಧಕ್ಕೆ: ಇಬ್ಬರ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿರುವ ಗೋಡೆಗಳ ವಿರೂಪಗೊಳಿಸುವವರ ವಿರುದ್ಧ‌ ಕಬ್ಬನ್ ಪಾರ್ಕ್ ಪೊಲೀಸರು ತಿರುಗಿಬಿದ್ದಿದ್ದಾರೆ..
ಗೋಡೆಯ ಮೇಲೆ ಅಶ್ಲೀಲ ಚಿತ್ರ ಹಾಗೂ ಅನಗತ್ಯ ಚಿತ್ರಗಳ ಬಿಡಿಸುತ್ತಿದ್ದ ಇಬ್ಬರು ಫೈನ್ ಆರ್ಟ್ಸ್ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ..
ನಗರದ ಹೃದಯ ಭಾಗದ ಕೆಲಸ ಸ್ಥಳಗಳ ಗೋಡೆ ವಿರೂಪ ಗೊಳಿಸಿರುವ ದುಷ್ಕರ್ಮಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ವಿದ್ಯಾರ್ಥಿಗಳು ಆಗಿರುವುದರಿಂದ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ‌ ಮಾಹಿತಿ ನೀಡಲು ನಿರಾಕರಿಸಿದ್ದಾರೆ..
ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ, ಮಲ್ಯ ರಸ್ತೆ ಸೇರಿದಂತೆ ಹಲವು ಕಡೆ ರಾತ್ರಿ ವೇಳೆ ಗೋಡೆ ಹಾಗೂ ಶೆಟರ್ ಗಳ‌ ಮೇಲೆ knock, boss, guess who ಅನ್ನೊ ಪದಗಳನ್ನು ಬರೆದು ವಿಕೃತಿ‌ ಮೆರೆದಿದ್ದಾರೆ..
ಬಿಬಿಎಂಪಿ ಹಾಗೂ ಕೆಲ ಸಂಘಸಂಸ್ಥೆಗಳ ಚಿತ್ರ ಸಮಾಜಕ್ಕೆ ಒಳ್ಳೆಯದು.. ಆದ್ರೆ ಕಾನೂನು ನಿಯಮ ಉಲ್ಲಂಘಿಸಿ ಕೆಲ ದುಷ್ಕರ್ಮಿಗಳು ಅರ್ಥವಿಲ್ಲದ ಬರಹಗಳ ಬಳಸಿ ಹಾಳು ಮಾಡುತಿದ್ದಾರೆ.. ಈ ಹಿನ್ನಲೆಯಲ್ಲಿ ಸಾರ್ವಜನಿಕ ಆಸ್ತಿ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.