ETV Bharat / state

ಸಿಲಿಕಾನ್​ ಸಿಟಿಯ ಅಂದ ಹೆಚ್ಚಿಸಿದ ಗುಲ್​ಮೊಹರ್​ - Lalbagh

ಚಳಿಗಾಲ ಆರಂಭವಾಯಿತು ಅಂದ್ರೆ ಕಬ್ಬನ್ ಪಾರ್ಕ್, ಲಾಲ್​ಬಾಗ್​ ಸೌಂದರ್ಯ ನೋಡೋದೇ ಒಂಥರಾ ಚೆಂದ. ಹೌದು, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸುತ್ತಮುತ್ತ ಈಗ ಪಿಂಕ್ ಬಣ್ಣದ ಹೂವಿನದ್ದೇ ಸೌಂದರ್ಯ.

Gulmohar
ಗುಲ್​ಮೊಹರ್
author img

By

Published : Dec 18, 2020, 5:57 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಭಿನ್ನವಾದ ಹೂವುಗಳನ್ನು ನಾವು ಸಾಮಾನ್ಯವಾಗಿ ಫ್ಲವರ್ ಬೊಟೀಕ್​ನಲ್ಲಿ ನೋಡಿರ್ತಿವಿ. ಆದ್ರೆ ವರ್ಷಕ್ಕೊಮ್ಮೆ ಅರಳುವ ಹೂವುಗಳನ್ನು ನೋಡಲು ಏನೋ ಒಂಥರ ಖುಷಿ. ಆದ್ರೆ ಈ ಹೂವುಗಳನ್ನ ಯಾರಿಗೂ ಕೊಡೊದಕ್ಕೆ ಆಗೋದಿಲ್ಲ. ಇನ್ನು ನಗರದ ಪ್ರಮುಖ ಪಾರ್ಕ್​‌ಗಳಲ್ಲಿ ಎಲ್ಲಿ ನೋಡಿದ್ರು ಈ ಹೂವುಗಳದ್ದೇ ರಾಶಿ. ಇವುಗಳನ್ನು ನೋಡ್ತಿದ್ರೆ ಮನಸ್ಸು ಯಾವುದೋ ಲೋಕಕ್ಕೆ ಹೋದ ಅನುಭವ.

ಚಳಿಗಾಲ ಆರಂಭವಾಯಿತು ಅಂದ್ರೆ ಕಬ್ಬನ್ ಪಾರ್ಕ್, ಲಾಲ್​ಬಾಗ್​ ಸೌಂದರ್ಯ ನೋಡೋದೆ ಒಂಥರಾ ಚೆಂದ. ಹೌದು, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸುತ್ತಮುತ್ತ ಈಗ ಪಿಂಕ್ ಬಣ್ಣದ ಹೂವಿನದ್ದೇ ಸೌಂದರ್ಯ. ತಬೂಬಿಯಾ ಅಥವಾ ಟ್ಯಾಬುಬಿಯಾ ಎಂಬ ಹೆಸರಿನಿಂದ ಕರೆಯುವ ಪಿಂಕ್ ಬಣ್ಣದ ಈ ಹೂವುಗಳು ಈಗ ಪುಷ್ಪ ಪ್ರಿಯರನ್ನ ತನ್ನತ್ತ ಸೆಳೆಯುತ್ತಿದೆ.

ಸಿಲಿಕಾನ್​ ಸಿಟಿಯ ಚೆಂದ ಹೆಚ್ಚಿಸಿದ ಗುಲ್​ಮೊಹರ್​

ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಈ ಪಿಂಕ್ ಬಣ್ಣದ ಹೂವಿನ ಚಿತ್ತಾರ ಕಣ್ಮನ ಸೆಳೆಯುತ್ತಿದೆ. ಕಂಗೊಳಿಸುವ ಈ ಹೂವುಗಳ ಮುಂದೆ ನಿಂತು ಸೆಲ್ಫಿ ತಗೆಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ತಬೂಬಿಯಾವನ್ನು ‘ಟ್ರಂಪೆಟ್‌ ಟ್ರೀಸ್‌’ ಎಂದೂ ಕರೆಯುತ್ತಾರೆ.

ಅಮೆರಿಕ, ಮೆಕ್ಸಿಕೋ, ಅರ್ಜೆಂಟೀನಾ ಮುಂತಾದ ದೇಶಗಳಲ್ಲಿ ವಿಶೇಷವಾಗಿ ಮನೆ ಮುಂದೆ ಅಲಂಕಾರಕ್ಕೆಂದೇ ಈ ಮರಗಳನ್ನು ಬೆಳೆಸುತ್ತಾರೆ. ಇದರಲ್ಲಿ ಸುಮಾರು 99 ಬಗೆಯ ಪ್ರಭೇದಗಳು ಇವೆ. ಪೀಠೋಪಕರಣಗಳಿಗೂ ಇದರ ಕೆಲ ಪ್ರಭೇದದ ಮರಗಳನ್ನು ಬಳಸಲಾಗುತ್ತದೆ. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕೆ ಅನುಗುಣವಾಗಿ ಅರಳುವ ಮೂಲಕ ಸೌಂದರ್ಯ ಚೆಲ್ಲುತ್ತವೆ. ಚಳಿಗಾಲ ಆರಂಭವಾದಂತೆ ಮರದ ಪೂರ್ತಿ ಎಲೆಗಳೇ ಇಲ್ಲದೇ ಬರಿ ಹೂಗಳೇ ಕಂಗೊಳಿಸುತ್ತವೆ. ಆದರೆ ಕೆಲವು ವಾರಗಳ ಜೀವಿತಾವಧಿ ಇರೋ ಟ್ಯಾಬುಬಿಯಾ ಇದೀಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಬೆಂಗಳೂರು ಉದ್ಯಾನನಗರಿ ಎನಿಸಿಕೊಳ್ಳಲು ಸೌಂದರ್ಯ ಹೆಚ್ಚಿಸುವ ಈ ಮರಗಳೂ ಕಾರಣ. ಹೀಗೆ ಬಂದ ಗುಲ್‌ಮೊಹರ್, ಮೇ ಫ್ಲವರ್ ಮುಂತಾದ ಹತ್ತಾರು ಜಾತಿಯ ಮರಗಳೇ ಒಂದಾದ ಮೇಲೆ ಒಂದರಂತೆ ಹೂ ಬಿಡುತ್ತ ನಗರದಲ್ಲಿ ಸದಾ ಹೂವಿನ ಲೋಕ ಸೃಷ್ಟಿಸುತ್ತವೆ. ನಗರದ ರಸ್ತೆ ಬದಿ, ಉದ್ಯಾನಗಳಲ್ಲಿ ಈಗ ಪಿಂಕ್ ತಬೂಬಿಯಾದ್ದೇ ಕಾರುಬಾರು.

ಹೇಮಂತ ಋತುವಿನಿಂದ ಆರಂಭವಾಗುವ ಈ ಕುಸುಮಯಾನ ಮಳೆಗಾಲ ಬರುವವರೆಗೂ ಸಾಗುತ್ತದೆ. ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ಗಳಲ್ಲಿ ಮಾತ್ರವಲ್ಲದೇ ರಸ್ತೆ ಬದಿಯಲ್ಲೂ ಎಲ್ಲಾ ಋತುಗಳಲ್ಲೂ ವಿದೇಶಿ ಮರಗಳು ಹೂ ಬಿಡುತ್ತಲೇ ಇರುತ್ತವೆ. ಈಗ ಚಳಿಗಾಲ ಕಾಲಿಡುತ್ತಿದ್ದಂತೆ ನಗರದ ಅಲ್ಲಲ್ಲಿ ಗುಲಾಬಿ ಬಣ್ಣದ ಹೂಗಳನ್ನೇ ಹೊದ್ದಂತಿರುವ ಮರಗಳು ಆಕರ್ಷಿಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.