ಬೆಂಗಳೂರು: ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ ಸಿ.ಎಂ.ಇಬ್ರಾಹಿಂ ಈ ರೀತಿ ಪತ್ರ ಬರೆಯುತ್ತಿರಲಿಲ್ಲ ಎಂದು ಸಚಿವ ಸಿ.ಟಿ.ರವಿ ಕಿಡಿಕಾರಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮಾಜದ ಮೇಲಿನ ಆಕ್ರೋಶದಿಂದ ಈ ರೀತಿ ಮನವಿ ಮಾಡಿರಬಹುದು. ನಿಜಾಮುದ್ದೀನ್ ನಂಜಿನಿಂದ ಎರಡು ತಿಂಗಳು ತತ್ತರಿಸಿ ಹೋಗಿದ್ದೇವೆ. ಈ ಹಂತದಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟು ಮತ್ತೆ ಸಮಸ್ಯೆ ಸೃಷ್ಟಿ ಮಾಡಿಕೊಳ್ಳಲ್ಲ ಎಂದರು.
ಜಾತ್ರೆ, ಹಬ್ಬ ಹರಿದಿನ ಎಲ್ಲವೂ ಬಂದ್ ಆಗಿವೆ. ಇಬ್ರಾಹಿಂ ಅವರಿಗೆ ಸಮುದಾಯದ ಬಗ್ಗೆ ಒಳ್ಳೆಯ ಭಾವನೆಯಿಲ್ಲ. ಇದಕ್ಕೆ ಅವರು ಈ ರೀತಿ ಮನವಿ ಮಾಡಿರಬಹುದು. ಎಲ್ಲರೂ ಸೇಫ್ ಡಿಸ್ಟನ್ಸ್ ಮೆಂಟೇನ್ ಮಾಡುತ್ತಿದ್ದಾರೆ. ಒಂದು ನಿಜಾಮುದ್ದೀನ್ ಹಾವಳಿಗೆ ದೇಶ ಎರಡು ತಿಂಗಳು ತತ್ತರಿಸಿದೆ. ಮತ್ತೆ ಅವಕಾಶ ಕೊಟ್ಟು ಅಪಾಯ ಮೈಮೇಲೆ ಎಳೆದುಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ನೀವು ನಿಮ್ಮ ಪತ್ರವನ್ನು ವಾಪಸ್ ಪಡೆದರೆ ಉತ್ತಮ. ಆಗ ನಿಮ್ಮ ಬಗ್ಗೆ ನಿಮ್ಮ ಸಮುದಾಯಕ್ಕೆ ಒಳ್ಳೆಯ ಭಾವನೆ ಬರಬಹುದು. ಇಲ್ಲವೇ ನಿಮ್ಮ ಸಮುದಾಯದವರೇ ನಿಮಗೆ ಛೀಮಾರಿ ಹಾಕಬಹುದು. ಅವರು ಈ ರೀತಿ ಮಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೇ 17ರ ಬಳಿಕ ಕೇಂದ್ರ ಸರ್ಕಾರದ ಮಾರ್ಗಸೂಚಿ ನೋಡಿ, ಜಿಮ್, ಫಿಟ್ನೆಸ್ ಸೆಂಟರ್ ಮತ್ತು ಗಾಲ್ಫ್ ಕ್ಲಬ್ ಓಪನ್ ಮಾಡುವ ಬಗ್ಗೆ ಸಿಎಂ ಜತೆ ಮಾತನಾಡಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.