ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕರಿಗೆ ಪಂಚ ಪ್ರಶ್ನೆಯನ್ನು ಕೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಟುಂಬ ಕಾನೂನಿಗಿಂತ ಅತೀತರೇ?. ಆ ರೀತಿ ಕಾನೂನಿಗಿಂತ ಅತೀತರಾಗಿದ್ದರೆ, ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಿದೆ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‌ನವರಿಗೆ ಮತ್ತು ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುವವರಿಗೆ ಪಂಚ ಪ್ರಶ್ನೆ ಕೇಳುತ್ತೇನೆ. ಅಸೋಸಿಯೇಷನ್ ಜನರಲ್ನಲ್ಲಿರುವ ಮೂಲ ಷೇರುದಾರರು ಎಷ್ಟು?, ಯಂಗ್ ಇಂಡಿಯಾದಲ್ಲಿರೋ ಪಾಲುದಾರರು ಎಷ್ಟು.?. ಅಲ್ಲಿ ಷೇರುದಾರರು, ಇಲ್ಲಿ ಪಾಲುದಾರರು ಎಷ್ಟು? ಎಂದು ಪ್ರಶ್ನೆ ಕೇಳಿದ್ದಾರೆ.
ಎಜೆಎಲ್ ಆರಂಭವಾದಾಗ ಆರಂಭದಲ್ಲಿ ಐದೂವರೆ ಸಾವಿರ ಷೇರುದಾರರಿದ್ದರು. ಯಂಗ್ ಇಂಡಿಯಾಗೆ ವರ್ಗಾವಣೆ ಮಾಡುವಾಗ ಇದ್ದದ್ದು 1,500. ಇಲ್ಲಿ ವರ್ಗಾವಣೆಯಾದಾಗ ನಾಲ್ಕು ಜನ ಪಾಲುದಾರರಿದ್ದಾರೆ. ಸೋನಿಯಾ 38%, ರಾಹುಲ್ 38%, ಮೋತಿಲಾಲ್ ಓರಾ, ಆಸ್ಕರ್ ಫರ್ನಾಂಡೀಸ್. ಮೋತಿಲಾಲ್ ಓರಾ, ಫರ್ನಾಂಡಿಸ್ ನಿಧನರಾಗಿದ್ದಾರೆ. ಪ್ರೈವೆಟ್ ಕಂಪನಿಗೆ ವರ್ಗಾವಣೆ ಮಾಡುವಾಗ ಕಾನೂನಿನಲ್ಲಿ ಅಧಿಕಾರವಿದೆಯಾ.? ವರ್ಗಾವಣೆ ಮಾಡುವಾಗ ಮೂಲ ಶೇರುದಾರರ ಅನುಮತಿ ಇದೆಯಾ?. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾವಣೆ ಮಾಡುವಾಗ ಎಜೆಎಲ್ ಕಂಪನಿಯ ಸಾಲ ಎಷ್ಟಿತ್ತು. ಸಬ್ ರಿಜಿಸ್ಟ್ರಾರ್ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿಯನ್ನು ಅಸೆಸ್ ಮಾಡದೆ ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ? ಎಂದು ಕೇಳಿದ್ದಾರೆ.
ನಾವೇಕೆ ಟಾರ್ಗೆಟ್ ಮಾಡಬೇಕು: ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ, ಭಯಭೀತರಾಗಿದ್ದಾರೆ ಎನ್ನುವ ಆರೋಪ ರಾಜ್ಯ ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ. ಟಾರ್ಗೆಟ್ ಮಾಡುವ ಅವಶ್ಯಕತೆ ಏನಿದೆ. ನಿಮ್ಮ ನಾಯಕರು ಕಾಲಿಟ್ಟ ಕಡೆಯಲ್ಲೆಲ್ಲ ನಿಮ್ಮ ಪಕ್ಷ ಸೋತಿದೆ. ನಾವ್ಯಾಕೆ ಟಾರ್ಗೆಟ್ ಮಾಡಬೇಕು?. ಉತ್ತರ ಪ್ರದೇಶ ಚುನಾವಣೆಯಲ್ಲಿ 399 ಕ್ಷೇತ್ರದಲ್ಲಿ ಸ್ಪರ್ಧಿಸಿ, 387 ಸ್ಥಾನದಲ್ಲಿ ಠೇವಣಿ ಕಳೆದುಕೊಂಡಿದ್ದೀರಿ ಎಂದು ಟೀಕಿಸಿದರು.
ಸಿದ್ದುಗೆ ಪ್ರಶ್ನೆ: ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮೋರೆ ಹೋಗಿದ್ರಿ. ಅದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೀಗಿದ್ದಾಗ ಟಾರ್ಗೆಟ್ ಆಗಲು ಹೇಗೆ ಸಾಧ್ಯ. ನೀವು ವಕೀಲರಾಗಿ, ಸಿಎಂ ಆಗಿ ಎಲ್ಲಾ ರೀತಿಯ ನಾಯಕರಾಗಿದ್ದೀರಿ. ನಿಮ್ಮಿಂದ ಈ ಐದು ಪ್ರಶ್ನೆಗೆ ಉತ್ತರ ಬೇಕಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಹಾಕಿದರು.
ಸಿದ್ದರಾಮಯ್ಯ ಎಡಬಿಡಂಗಿ: 'ದೇವನೊಬ್ಬ ನಾಮ ಹಲವು ಅನ್ನೋದು ನಮ್ಮ ತತ್ವ. ಯಾವ ರೀತಿಯಲ್ಲಾದ್ರೂ ಪೂಜಿಸಬಹುದು ಎಂದು ಸನಾತನ ಧರ್ಮದ ಮೂಲ ತಿರುಳು'. ನಾನು ಸಿದ್ದರಾಮಯ್ಯ ಹೇಳಿಕೆ ಗಮನಿಸಿದೆ. ರಾಮ, ಶಿವ, ಕೃಷ್ಣಾ ಎಲ್ಲಾ ಶೂದ್ರ ದೇವತೆಗಳು, ಅವರೆಲ್ಲಾ ಇಂದ್ರನ ವಿರುದ್ಧ ಬಂಡಾಯ ಎದ್ದವರು ಎಂದಿದ್ದಾರೆ. ಯಾವ ಪುಸ್ತಕದಲ್ಲಿ ಓದಿದ್ರೋ ಗೊತ್ತಿಲ್ಲ. ಅವರು ರಾಮಾಯಣ, ಮಹಾಭಾರತದ ಓದೋ ಬದಲು. ಅವರು ಲೆನಿನ್, ಮಾರ್ಕ್ಸ್ ಓದಿದ್ದು, ಈಗ ಎಡಬಿಡಂಗಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ: ರಾಹುಲ್ ಗಾಂಧಿ ನಾನು ಕೌಲ್ ಬ್ರಾಹ್ಮಣ ಅಂತ ಹೇಳಿದ್ದಾರೆ. ಅದು ಹೇಗೆ ಗೊತ್ತಿಲ್ಲ. ನಮ್ಮ ಪ್ರಕಾರ ಇಂದಿರಾಗಾಂಧಿ ಪಾರ್ಸಿಯನ್ನು ಮದುವೆಯಾಗಿದ್ದು. ಕೌಲ್ ಬ್ರಾಹ್ಮಣ ಅಂತಿದ್ದಾರೆ, ಅದು ಸುಳ್ಳು. ಒಂದು ವೇಳೆ ಕೌಲ್ ಬ್ರಾಹ್ಮಣ ಅನ್ನೋದು ಸರಿಯಾಗಿದ್ರೆ, ಸಿದ್ದರಾಮಯ್ಯ ಯಾರ ಗುಲಾಮರಾಗಿದ್ದಾರೆ. ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇದೊಂದು ಫಾಲ್ಸ್ ಥಿಯರಿಯಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಟಾರ್ಗೆಟ್ ಅಂದ್ರೆ ಯಾವುದು ಗೊತ್ತಾ?: ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಳಿಕವೂ ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸಿದ್ರಿ. ತುರ್ತು ಪರಿಸ್ಥಿತಿ ಹೇರಿ ಎಲ್ಲರನ್ನ ಜೈಲಿಗೆ ಕಳಿಸಿದ್ದು. ಸಿದ್ದರಾಮಯ್ಯ ಕೂಡ ತುರ್ತು ಪರಿಸ್ಥಿತಿ ವಿರುದ್ಧ ನಿಂತವರು. ಇದೇ ಇಂದಿರಾಗಾಂಧಿ ವಿರುದ್ಧ ಹೋರಾಡಿದವರು. ಇದೆಲ್ಲವನ್ನೂ ಮರೆತು, ಈಗ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದು ಟಾರ್ಗೆಟ್. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಅಂತ ತೋರಿಸೋದು ಟಾರ್ಗೆಟ್ ಅಲ್ಲ ಎಂದರು.