ETV Bharat / state

ಎಸ್​ಐಟಿ ರಚನೆ ಮಾಡಿರುವುದೇ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ: ಸಿ.ಟಿ.ರವಿ - etv bharat karnataka

ಡಿ.ಕೆ.ಶಿವಕುಮಾರ್​ ಅವರನ್ನು ಹೆದರಿಸಲು ಸಾಧ್ಯವಿಲ್ಲ. ಅವರೇ ಬೇರೆಯವರನ್ನು ಹೆದರಿಸೋರು ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ct-ravi-alleged-sit-is-created-for-blackmailing-in-bengaluru
ಎಸ್​ಐಟಿ ರಚನೆ ಮಾಡಿರುವುದೇ ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ: ಸಿ ಟಿ ರವಿ ಆರೋಪ
author img

By

Published : Aug 8, 2023, 10:55 PM IST

ಬೆಂಗಳೂರು: "ಬಿಬಿಎಂಪಿ ಅಕ್ರಮ ಸಂಬಂಧ ಎಸ್​ಐಟಿ ರಚನೆ ಮಾಡಿರೋದೇ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ" ಎಂದು ಮಾಜಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ. ಬೆಂಗಳೂರಲ್ಲಿಂದು ಮಾತನಾಡಿದ ಅವರು, "40% ಪರ್ಸೆಂಟ್​ ಕಮಿಷನ್​ ಅಂತ ನಮ್ಮ ಮೇಲೆ ಆರೋಪ ಮಾಡಿದ್ರಿ. ನೀವು ಪ್ರಾಮಾಣಿಕರಿದ್ರೆ ಹಣ ಬಿಡುಗಡೆ ಮಾಡಿ. ಇಷ್ಟು ದಿನದಲ್ಲಿ ತನಿಖೆ ಮಾಡಿ ವರದಿ ಕೊಡಿ ಅಂತ ಹೇಳಿ. ಅದರ ಮೇಲೆ ಹಣ ಬಿಡುಗಡೆ ಮಾಡಿ. ಡಿಕೆಶಿ ಅವರನ್ನ ಹೆದರಿಸಲು ಸಾಧ್ಯವಿಲ್ಲ, ಅವರೇ ಬೇರೆಯವರನ್ನು ಹೆದರಿಸೋರು. ಕಂಟ್ರಾಕ್ಟರ್ಸ್​ರನ್ನು ಹೆದರಿಸೋ ಕೆಲಸ ಮಾಡಬೇಡಿ" ಎಂದರು.

ಕಂಟ್ರಾಕ್ಟರ್ಸ್ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಕಮಿಷನ್ ಕೇಳ್ತಿರೋದು ಸತ್ಯ ಅಂತ ನನಗೂ ಗೊತ್ತಾಗಿದೆ. ಜೊತೆಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಇವರು ಸರಿ ಇದ್ರೆ ಹಣ ಬಿಡುಗಡೆ ಮಾಡಲಿ. ಬಿಜೆಪಿ ಸರ್ಕಾರದಲ್ಲಿ ಜುಡಿಷಿಯರಿ ಕಮಿಟಿ ರಚನೆ ಮಾಡಿತ್ತು. ಕಾಮಗಾರಿ ನೀಡೋ ಮೊದಲು ಸರಿ ಇದೆಯಾ ಅಂತ ಪರಿಶೀಲನೆ ಮಾಡಲು ಕಮಿಟಿ ರಚನೆ ಮಾಡಲಾಗಿತ್ತು. ಇವರು ಅಧಿಕಾರಕ್ಕೆ ಬಂದ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ. ಹಳೆಯ ಬಿಲ್ಲಿಗೆ ಪರ್ಸೆಂಟೇಜ್ ಯಾಕೆ ಹೇಳ್ತಿದ್ದಾರೆ. ನಮ್ಮದೇ ಹಣಕ್ಕೆ ಕಮಿಷನ್​ ಕೇಳ್ತಿದ್ದಾರೆ ಅನ್ನೋದು ಅವರ ಆರೋಪ. ಭ್ರಷ್ಟಾಚಾರದ ಪರಾಕಾಷ್ಠೆಗೆ ತಲುಪಿದೆ" ಎಂದು ಆರೋಪಿಸಿದರು.

ಕಂಟ್ರಾಕ್ಟರ್​ಗಳು ರಾಜ್ಯಪಾಲರ‌ ಭೇಟಿ‌ ವಿಚಾರವಾಗಿ ಮಾತನಾಡಿ, "ಹಳೆ ಬಿಲ್‌ಗಳಿಗೆ ಪರ್ಸೆಂಟೇಜ್ ಕೇಳುವ ಜತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗೂ ಇದೆ. ತಪ್ಪಾದ ಬಿಲ್‌ ಇದ್ದರೆ ಅದಕ್ಕೆ ಏನು ಕ್ರಮ ಕೈಗೊಂಡಿದ್ದಾರೆ?. ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆಯೇ ವಿನಃ ವ್ಯವಸ್ಥೆ ರೂಪಿಸಿಲ್ಲ. ಐದು ವರ್ಷದ ಹಿಂದಿನದ್ದಕ್ಕೂ ಪರ್ಸೆಂಟ್ ಕೊಡಬೇಕು ಎಂದು ಹೇಳುತ್ತಿದ್ದಾರಂತೆ. ಬಿಜೆಪಿ ಭ್ರಷ್ಟ ಎಂದವರು ಮೊದಲ ದಿನದಿಂದಲೇ ಅಸಲಿ‌ರೂಪ ತೋರಿಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಪತ್ರವೇ ನಕಲಿ ಎನ್ನುತ್ತಾರೆ. ಹಾಗಾದರೆ ಕಂಟ್ರಾಕ್ಟರ್​ಗಳು ಕುಮಾರಸ್ವಾಮಿ ಭೇಟಿ ಮಾಡಿದ್ದೂ ಸುಳ್ಳಾ" ಎಂದು ಪ್ರಶ್ನಿಸಿದರು.

ಪತ್ರ ನಕಲಿ ಎಂದು ಇವರೇ ಹೇಳಿಕೊಂಡು ಓಡಾಡೋದಲ್ಲ: ಕೃಷಿ ಸಚಿವರ ವಿರುದ್ಧ ಆರೋಪದ ಪತ್ರ ನಕಲಿ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ," ಇಲ್ಲೇ ಅವರು ಎಡವೋದು. ಪ್ರರಣವನ್ನು ಸಿಐಡಿ ತನಿಖೆಗೆ ನೀಡಿದ್ದಾರೆ. ನಕಲಿ ಅಂತ ಆರೋಪ ಬಂದವರು ಹೇಳಬೇಕೋ, ತನಿಖಾ ಸಂಸ್ಥೆ ಹೇಳಬೇಕೋ?. ಗಾದೆ ಮಾತಿನಂತೆ ಕುಂಬಳ ಕಾಯಿ ಕಳ್ಳ ಅಂತ ಆಗುತ್ತೆ. ತನಿಖಾ ಸಂಸ್ಥೆ ಇದು ನಕಲಿಯೋ, ಅಸಲಿಯೋ ಎಂದು ಹೇಳಬೇಕು. ಇವರೇ ಹೇಳಿಕೊಂಡು ಓಡಾಡೋದಲ್ಲ" ಎಂದರು.

"ದಿನಾ ಬೆಳಗ್ಗೆ ಬ್ರಾಂಡ್ ಬೆಂಗಳೂರು ಅಂತಿದ್ದಾರೆ. ಅವರ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಾರೆ. ಒಂದೂವರೆ ಸಾವಿರ ಕೋಟಿ ಆಸ್ತಿ ಬ್ಯುಸಿನೆಸ್ ಮಾಡಿ ಗಳಿಸಿದೆ ಅಂದಿದ್ದಾರೆ. ಬ್ರಾಂಡ್ ಬೆಂಗಳೂರು ಹೆಸರಲ್ಲಿ 15 ಸಾವಿರ ಕೋಟಿಗೆ ಏರೋದಿಲ್ಲ ಅನ್ನೋ ಅನುಮಾನ ಯಾರಿಗಾದ್ರೂ ಇದೆಯಾ?. ಬ್ರಾಂಡ್ ಬೆಂಗಳೂರು ಯೋಜನೆ ಬೆಂಗಳೂರು ಜನರಿಗಿಂತ, ತನ್ನ ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಿಸಿಕೊಳ್ಳಲಾ?" ಎಂದು ಡಿಕೆಶಿಯವ​ರನ್ನು ಪ್ರಶ್ನಿಸಿದರು.

"ಸದನ ಸಮಿತಿ ನೈಸ್ ವಿಚಾರದಲ್ಲಿ ವರದಿ ಟೇಬಲ್ ಮೇಲಿದೆ. ಅದರ ವರದಿ ಪರಿಗಣಿಸಬೇಕಲ್ವಾ?. ಬ್ರಾಂಡ್ ಬೆಂಗಳೂರು ಇದರ ಪರಿದಿಯಲ್ಲಿ ಬರಲ್ವಾ?. ಟನಲ್ ರೋಡ್, ಫೆರಿಫೆರಲ್ ರೋಡ್ ಅಂತೆಲ್ಲಾ ಹೇಳ್ತಿದ್ದಾರೆ. ಬ್ರಾಂಡ್ ಬೆಂಗಳೂರು ಬ್ಯುಸಿನೆಸ್ ಆಗಬಾರದು. ಬೆಂಗಳೂರು ಜನರಿಗೆ ಅನುಕೂಲ ಆಗಬೇಕು. ಡಿಕೆಶಿ ಅವರ ಬಳಿ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಎರಡು ಖಾತೆ ಇದೆ. ನೀರಾವರಿ ವಿಚಾರದಲ್ಲಿ ಅವರು ರೈತರ ಪರವಾಗಿ ನಿಲ್ಲಬೇಕು. ರೈತರಿಗೆ ನೀರು ಕೊಡಲು ಬ್ಲ್ಯಾಕ್ ಮೇಲ್ ಮಾಡಬೇಕು. ಅನುದಾನ ಇಲ್ಲ ಅಂದ್ರೆ ಅವರು ಅಸಹಾಯಕರು ಅಂತಲೇ ಅರ್ಥ" ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: C T Ravi: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸಿ.ಟಿ.ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.