ETV Bharat / state

ಬಾಡಿದ ಹೂ ಬೆಳೆಗಾರರ ಬದುಕಿಗೆ ಸುಗಂಧ ತರುವ ಹೊಸ ಕನಕಾಂಬರ ತಳಿಗಳು

ಲೋಕರ್ ಆರೆಂಜ್ ತಳಿಗಿಂತ 10 ಪಟ್ಟು ಹೆಚ್ಚು ಇಳುವರಿ ನೀಡುವ ಹೊಸ ಕನಕಾಂಬರಿ ತಳಿಗಳು ರೈತನ ಭಾಗ್ಯದ ಬಾಗಿಲನ್ನು ತೆರೆಸಿದೆ. ದಕ್ಷಿಣ ಭಾರತದಲ್ಲಿ 8 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕನಕಾಂಬರ ಬೆಳೆಯಲಾಗುತ್ತದೆ. ಮೊದಲಿಗೆ ಲೋಕಲ್ ಆರೆಂಜ್ ಎಂಬ ತಳಿಯನ್ನ ಬೆಳಯಲಾಗುತ್ತಿದ್ದು, ಈ ಹೂವು ತುಂಬಾ ಸಣ್ಣದಾಗಿದೆ.

ಸುಗಂಧ ತರುವ ಹೊಸ ಕನಕಾಂಬರ ತಳಿಗಳು
ಸುಗಂಧ ತರುವ ಹೊಸ ಕನಕಾಂಬರ ತಳಿಗಳು
author img

By

Published : Feb 12, 2021, 4:54 AM IST

Updated : Feb 12, 2021, 7:38 AM IST

ಬೆಂಗಳೂರು: ಕನಕಾಂಬರ ಬೆಳೆಯುವ ರೈತ ಕನಕನ ಒಡೆಯನಾಗಬಹುದು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು 10 ವರ್ಷಗಳ ಸಂಶೋಧನೆಯ ಫಲವಾಗಿ ಕನಕಾಂಬರ ಹೂವಿನಲ್ಲಿ 5 ತಳಿಗಳನ್ನು ಬಿಡುಗಡೆ ಮಾಡಿದೆ.

ಲೋಕರ್ ಆರೆಂಜ್ ತಳಿಗಿಂತ 10 ಪಟ್ಟು ಹೆಚ್ಚು ಇಳುವರಿ ನೀಡುವ ಈ ತಳಿಗಳು ರೈತನ ಭಾಗ್ಯದ ಬಾಗಿಲನ್ನು ತೆರೆಸಿದೆ. ದಕ್ಷಿಣ ಭಾರತದಲ್ಲಿ 8 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕನಕಾಂಬರ ಬೆಳೆಯಲಾಗುತ್ತದೆ. ಮೊದಲಿಗೆ ಲೋಕಲ್ ಆರೆಂಜ್ ಎಂಬ ತಳಿಯನ್ನ ಬೆಳೆಯಲಾಗುತ್ತಿದ್ದು, ಈ ಹೂವು ತುಂಬಾ ಸಣ್ಣದಾಗಿದೆ.

ಸುಗಂಧ ತರುವ ಹೊಸ ಕನಕಾಂಬರ ತಳಿಗಳು

ಎಕರೆಗೆ ಒಂದು ವಾರಕ್ಕೆ 10 ರಿಂದ 15 ಕೆಜಿ ಹೂ ಮಾತ್ರ ಸಿಗುತ್ತಿತ್ತು. ಇದರ ಜೊತೆಗೆ ಮಳೆಗಾಲದಲ್ಲಿ ಬರುವ ಸೊರಗು ರೋಗಕ್ಕೆ ನೂರಕ್ಕೆ 50 ಗಿಡಗಳು ಸತ್ತು ಹೋಗುತ್ತಿದ್ದವು. ಈ ಬಗ್ಗೆ 10 ವರ್ಷಗಳ ಸಂಶೋಧನೆ ನಡೆಸಿದ ಭಾರತೀಯ ತೋಟಗಾರಿಕಾ ಸಂಸ್ಧೆ ಕನಕಾಂಬರ ಹೂವಿನಲ್ಲಿ 5 ತಳಿಗಳನ್ನ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ನೀಡಲು ಚಿಂತನೆ

ಅರ್ಕಾ ಅಂಬರ, ಅರ್ಕಾ ಶ್ರೀಯಾ, ಅರ್ಕಾ ಶ್ರವ್ಯ, ಅರ್ಕಾ ಕನಕ, ಅರ್ಕಾ ಚಂದನ ತಳಿಗಳು 10 ಪಟ್ಟು ಹೆಚ್ಚು ಇಳುವರಿ ಕೊಡುತ್ತೆ ಮತ್ತು ಗ್ರಾತ್ರದಲ್ಲಿ ದೊಡ್ಡದು ಕೂಡ. ಈ ತಳಿಗಳ ವಿಶೇಷ ಇಳುವರಿ ಹೆಚ್ಚಾಗಲಿದ್ದು, ಒಂದು ಎಕರೆಯಲ್ಲಿ 4 ರಿಂದ 6 ಸಾವಿರ ಗಿಡ ಹಾಕಿದರೆ ವಾರಕ್ಕೆ 21 ಕೆಜಿ ಹೂ ಬಿಡುತ್ತವೆ. ಲೋಕಲ್ ತಳಿಯಲ್ಲಿ ಕೇವಲ 20 ರಿಂದ 25 ಕೆಜಿ ಹೂವನ್ನು ತೆಗೆಯಬಹುದಾಷ್ಟೆ. ಇದರಿಂದ ಹೂವಿನ ಇಳುವರಿಯಲ್ಲಿ 10 ಪಟ್ಟು ಹೆಚ್ಚಾಗಿದೆ. ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮಳೆ ಬಂದಾಗಲು ಯಾವುದೇ ಗಿಡ ಸಾಯುವುದಿಲ್ಲ. ಅರ್ಧ ಎಕರೆಯಲ್ಲಿ 2 ಸಾವಿರ ಗಿಡಗಳನ್ನ ಹಾಕಿದರೆ 3ನೇ ತಿಂಗಳಿನಿಂದ ಹೂಗಳು ಬಿಡಲು ಪ್ರಾರಂಭಿಸುತ್ತವೆ.

8ನೇ ತಿಂಗಳಿನಿಂದ ಹೆಚ್ಚಿನ ಹೂಗಳು ಮಾರುಕಟ್ಟೆಗೆ ಸಿಗುತ್ತೆ. 3 ವರ್ಷಗಳವರೆಗೂ ಗಿಡಗಳು ಬೆಳೆಯುತ್ತವೆ. 4 ದಿನಕ್ಕೊಮ್ಮೆ ಹೂ ಬಿಡಿಸಬಹುದು ಒಮ್ಮೆ ಹೂ ಬಿಡಿಸಿದ್ದಾರೆ. 40 ಕೆಜಿ ಸಿಗುತ್ತೆ ವಾರಕ್ಕೆ 70 ಕೆಜಿ ಸಿಗುತ್ತೆ. ಕೆಜಿಗೆ 300 ರೂ. ಸಿಕ್ಕರೆ ವಾರಕ್ಕೆ 21 ಸಾವಿರ ರೂಪಾಯಿ ಲಾಭ ಸಿಗುತ್ತೆ. ಮಳೆಗಾಲದಲ್ಲಿ ಲೋಕರ್ ಆರೆಂಜ್ ಹೂ ಸಿಗುವುದಿಲ್ಲ. ಆದರೆ, ಐಐಹೆಚ್ ಆರ್​ನ ಕನಕಾಂಬರ ತಳಿಗಳು ಮಳೆಗಾಲದಲ್ಲೂ ಹೂಗಳನ್ನು ಬಿಡುತ್ತೆ. ಈ ಸಮಯದಲ್ಲಿ ಗೌರಿ ಗಣೇಶ ಹಬ್ಬ ಮತ್ತು ವರಮಹಾಲಕ್ಷ್ಮಿ ಹಬ್ಬ ಬರುವುದರಿಂದ ಕೆಜಿ ಹೂವಿಗೆ 1500 ರಿಂದ 1600 ರೂಪಾಯಿ ಸಿಗುತ್ತೆ. ಸಣ್ಣ ಮತ್ತು ಅತಿ ಸಣ್ಣ ರೈತರು ಕೇವಲ ಅರ್ಧ ಎಕರೆ ಕನಕಾಂಬರ ಬೆಳೆದು 80 ಸಾವಿರ ಆದಾಯ ತೆಗೆಯಬಹುದು.

Last Updated : Feb 12, 2021, 7:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.